23.5 C
ಪುತ್ತೂರು, ಬೆಳ್ತಂಗಡಿ
August 24, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಕಳ್ಳತನ ಪ್ರಕರಣ: ಬೆಳ್ತಂಗಡಿ ಪೊಲೀಸರಿಂದ ಅಂತರ್ ರಾಜ್ಯ ಕುಖ್ಯಾತ ಕಳ್ಳನ ಬಂಧನ

ಬೆಳ್ತಂಗಡಿ : ಬೆಳ್ತಂಗಡಿ ಪಟ್ಟಣದ ಮೂರುರ್ಮಾಗದ ಬಳಿಯಿಂದ ಹಾಗೂ ಕೋರ್ಟ್ ರಸ್ತೆಯವರೆಗೆ ಮೇ. 19 ರಂದು ತಡರಾತ್ರಿ 11 ಕಡೆಗಳಲ್ಲಿ ಕಳ್ಳತನ ನಡೆಸಿ ನಗದು ಸಹಿತ ಇನ್ನಿತರ ವಸ್ತುಗಳನ್ನ ದೋಚಿದ್ದ ಅಂತರ್ ರಾಜ್ಯ ಕುಖ್ಯಾತ ಕಳ್ಳನ್ನು ಬೆಳ್ತಂಗಡಿ ಪೊಲೀಸರು 50 ದಿವಸದ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾನೆ. ಬಂಧನದ ಬಳಿಕ ಈತ ಉಪ್ಪಿನಂಗಡಿ ಹಾಗೂ ಸುರತ್ಕಲ್ ನಲ್ಲಿ ಸರಣೆ ಕಳ್ಳತನ ಬೆಳಕಿಗೆ ಬಂದಿದೆ.

ಕಳ್ಳನ ಬಂಧನ: ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ನೇತೃತ್ವದ ತಂಡಕ್ಕೆ ಗುರುವಾಯನಕೆರೆ ಜಂಕ್ಷನ್ ನಲ್ಲಿ ಜು.8 ರಂದು ಸಂಜೆ 6 ಗಂಟೆಗೆ ಅನುಮಾನಸ್ಪದವಾಗಿ ಓರ್ವ ವ್ಯಕ್ತಿ ತಿರುಗಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮಿಳುನಾಡು ಜಿಲ್ಲೆಯ ಕೊಯಮುತ್ತೂರಿನ ವಿಜಯಾನ್ ಮಗ ಜಯಕುಮಾರ್(55) ಎಂಬುವುದಾಗಿ ತಿಳಿಸಿದ್ದಾನೆ. ಬಳಿಕ ಬೆಳ್ತಂಗಡಿಯಲ್ಲಿ 3 ಕಡೆ ,ಉಪ್ಪಿನಂಗಡಿಯಲ್ಲಿ 2 ಕಡೆ, ಸುರತ್ಕಲ್ ನಲ್ಲಿ 1 ಕಡೆ ಕಳ್ಳತನ ಸೇರಿ ಒಟ್ಟು ಆರು ಕಡೆಗಳಲ್ಲಿ ಸರಣೆ ಕಳ್ಳತನ ಮಾಡಿರುವುದನ್ನು ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿದ್ದಾನೆ.

ಅಂತರ್ ರಾಜ್ಯ ಕಳ್ಳ ಜಯಕುಮಾರ್ : ಕರ್ನಾಟಕ, ತಮಿಳುನಾಡು, ಕೇರಳ ಸೇರಿ ಒಟ್ಟು16 ಪ್ರಕರಣ ದಾಖಲಾಗಿದೆ. ಈತ ಅಂತರ್ ರಾಜ್ಯ ಕುಖ್ಯಾತ ಕಳ್ಳನಾಗಿದ್ದಾನೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.

ಘಟನಾ ಹಿನ್ನಲೆ : ಬೆಳ್ತಂಗಡಿ ಕೋರ್ಟ್ ರೋಡ್‌ನಲ್ಲಿರುವ ಧರ್ಮಶ್ರೀ ಕಟ್ಟಡದ ಮೊದಲನೇ ಮಹಡಿಯಲ್ಲಿ ಸಮೃದ್ಧಿ ಎಂಟರ್‌ಪ್ರೆöಸಸ್‌ನಲ್ಲಿ ಕಳ್ಳರು ರೂ.೧.೪೫ ಲಕ್ಷ ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಇದರ ಮಾಲಕ ರಂಜಿತ್ ಹೆಚ್‌ಪಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರೋ ಕಳ್ಳರು ಕಛೇರಿಯ ಬಾಗಿಲನ್ನು ಒಡೆದು ಒಳನುಗ್ಗಿ ಮೇಜಿನ ಲಾಕರ್‌ನ್ನು ಒಡೆದು, ಅದರಲ್ಲಿದ್ದ ರೂ. 1,45,000 ನಗದು ಮತ್ತು ಸಿಸಿ ಕ್ಯಾಮೆರಾದ ಮೆಮೊರಿ ಕಾರ್ಡು ಕಳವು ಮಾಡಿದ್ದಾರೆ. ಪಕ್ಕದ ಹನೀಫ್‌ರವರ ಕಛೇರಿಯ ಬೀಗವನ್ನು ಒಡೆದಿದ್ದಾರೆ. ವಕೀಲ ಯತೀಶ್ ಶೆಟ್ಟಿಯವರ ಕಛೇರಿ ಬೀಗ ಒಡೆದು, ರೂ.3000 ನಗದು ಕಳವು ಮಾಡಿದ್ದಾರೆ. ವಕೀಲರಾದ ವೈ. ರಾಧಾಕೃಷ್ಣ, ಮತ್ತು ಉಷಾ ಇವರ ಕಛೇರಿಯ ಬಾಗಿಲನ್ನು ಮುರಿದು ಉಷಾರವರ ಪರ್ಸ್ ಕಳವು ಮಾಡಿದ್ದು ಅದರಲ್ಲಿ ರೂ.10,000 ರೂಪಾಗಿ ಇರುವುದಾಗಿ ತಿಳಿಸಿದ್ದಾರೆ. ಬಳಿಕ ಇನ್ನೊಂದು ರೂಂ ಹಾಗೂ ಬಾತ್ ರೂಂನ ಬೀಗ ಮುರಿದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿಯ ಮಾತೃಶ್ರೀ ಹೋಟೇಲ್ ನಡೆಸುತ್ತಿರುವ ಪ್ರಮೋದ್ ಪೂಜಾರಿ ಅವರು ನೀಡಿರುವ ದೂರಿನಲ್ಲಿ ಹೋಟೆಲ್‌ನ ಬಾಗಿಲನ್ನು ಮುರಿದು ಒಳನುಗ್ಗಿ ಕ್ಯಾಶ್ ಟೇಬಲ್‌ನಲ್ಲಿದ್ದ ರೂ. 5 ಸಾವಿರ, ಡ್ರಾವರ್‌ನಲ್ಲಿದ್ದ ರೂ.2500 ರೂಪಾಯಿ ನಗದನ್ನು ಕಳವು ಮಾಡಿದ್ದಾರೆ. ವಕೀಲ ಜಯರಾಮ ಮಣಿಯಾನಿಯವರ ಕಚೇರಿ, ಹಿಮಾಲಯ ಫೈನಾನ್ಸ್, ಜಿತೇಶ್ ವಕೀಲರ ಕಚೇರಿ, ಶಿವಪ್ರಸಾದ್ ರಾವ್ ಅವರ ಶಬರಿ ಎಂಟರ್‌ ಪ್ರೈಸಸ್ ಹಾಗೂ ವಕೀಲ ರಾಮಚಂದ್ರ ಗೌಡರ ಕಚೇರಿ ಬೀಗ ಮುರಿದು ಒಳಗ ಹೋಗಿದ್ದು ಯಾವುದೇ ನಗದು ಕಳವು ಆಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.

ಕಾರ್ಯಾಚರಣೆ: ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದಲ್ಲಿ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಮ್ ಮತ್ತು ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಭಾರೀ ಮಳೆಗೆ ಶಿಶಿಲ ಸೇತುವೆ ಮುಳುಗಡೆ

Suddi Udaya

ಧರ್ಮಸ್ಥಳ ಮೇಳದ ತಿರುಗಾಟ ಪ್ರಾರಂಭ

Suddi Udaya

ಫೆ 8:ಬಳಂಜ ಯುವ ಬಿಲ್ಲವ ವೇದಿಕೆಯಿಂದ ವಾರ್ಷಿಕ ಕ್ರೀಡಾಕೂಟ ಬ್ರಹ್ಮಶ್ರೀ-2026: ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧೆಗಳು

Suddi Udaya

ಕೊಕ್ಕಡ ಅರೆಕಾ ಪ್ಲೇಟ್ ಇಂಡಸ್ಟ್ರಿಸ್ ಮಾಲಕ ಶ್ರೀಕಾಂತ್ ರಿಂದ ಉಪ್ಪಾರಪಳಿಕೆ ಯಿಂದ ಗೋಳಿತೊಟ್ಟು ರಸ್ತೆಯಲ್ಲಿ ಇದ್ದ ಗಿಡಗಂಟಿ ಹಾಗೂ ಪೊದೆಗಳ ದುರಸ್ತಿ ಕಾರ್ಯ

Suddi Udaya

ಕುಕ್ಕಾವು ಸ.ಹಿ.ಪ್ರಾ. ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿ ಲೀಲಾ ರವರಿಗೆ ಅಭಿನಂದನಾ ಸಮಾರಂಭ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ-ಶ್ರೀಮತಿ ಸರೋಜ ಶೆಟ್ಟಿ ದಂಪತಿಯ 25ನೇ ವರ್ಷದ ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ

Suddi Udaya
error: Content is protected !!