32.8 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

572 ಗ್ರಾಮ ಆಡಳಿತ ಅಧಿಕಾರಿ (VAO)ಹುದ್ದೆಗಳಿಗೆ ಅರ್ಜಿ ಆಹ್ವಾನ: ವಿದ್ಯಾಮಾತಾ ಅಕಾಡೆಮಿಯಿಂದ ತರಬೇತಿ ಪ್ರಾರಂಭ: ಪಿಯುಸಿ ಮುಗಿಸಿರುವಂತಹ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶ

ಬೆಳ್ತಂಗಡಿ: ಪಿಯುಸಿ ಮುಗಿಸಿ ರಾಜ್ಯದಲ್ಲಿ ಸರಕಾರಿ ಉದ್ಯೋಗಕ್ಕೆ ಪ್ರಯತ್ನಿಸುವವರಿಗಾಗಿ KEA ಶುಭ ಸುದ್ದಿ ಒಂದನ್ನು ನೀಡಿದೆ. ಕಂದಾಯ ಇಲಾಖೆಯಲ್ಲಿ ಖಾಲಿಯಿರುವಂತಹ ಸುಮಾರು 572 ಗ್ರಾಮಾಡಳಿತ ಅಧಿಕಾರಿ(VAO) ಹುದ್ದೆಗಳ ಬೃಹತ್ ನೇಮಕಾತಿಗಳಿಗೆ ಅಧಿಕೃತ ಅಧಿಸೂಚನೆಯು ಪ್ರಕಟಗೊಂಡಿದ್ದು, ಉದ್ಯೋಗ ಆಕಾಂಕ್ಷಿಗಳಲ್ಲಿ ಇದು ಹೊಸ ಸಂಚಲವನ್ನು ಮೂಡಿಸಿದೆ.

ದ್ವಿತೀಯ ಪಿಯುಸಿ ಮುಗಿಸಿದ ಅಭ್ಯರ್ಥಿಗಳಿಗೆ ಇದು ಸರಕಾರಿ ಹುದ್ದೆಗೆ ಸೇರಲು ಅತ್ಯುತ್ತಮ ಸುವರ್ಣ ಅವಕಾಶವಾಗಿದ್ದು , ಪಿಯು ಅಥವಾ ತತ್ಸಮಾನ ವಿದ್ಯಾರ್ಹತೆ ಮುಗಿಸಿದವರಿಗೆ ಮಾತ್ರ ಅವಕಾಶವಿದೆ.


ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ತಮ್ಮ ವಯಸ್ಸು 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿಯು ಸಾಮಾನ್ಯ ವರ್ಗಕ್ಕೆ 40 ವರ್ಷಗಳಾಗಿದ್ದು , ಒಬಿಸಿ ಯವರಿಗೆ 43 ವರ್ಷ ,SC/ST ಯವರಿಗೆ 45 ವರ್ಷಗಳಾಗಿರುತ್ತದೆ.

ಮಾಜಿ ಸೈನಿಕರು ಇಲ್ಲವೇ ವಿಶೇಷ ಚೇತನರು ಅಥವಾ ವಿಧವೆಯರಿಗೆ ಇನ್ನೂ ಹೆಚ್ಚುವರಿ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಕೆಯ ಪ್ರಾರಂಭ ಜುಲೈ 11 ಆಗಿದ್ದು , ಕೊನೆಯ ದಿನಾಂಕ ಜುಲೈ 30 ಆಗಿರುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾದ ವಿದ್ಯಾಮಾತ ಅಕಾಡೆಮಿ ನೇರ ಮತ್ತು ಆನ್ಲೈನ್ ತರಬೇತಿಯನ್ನು ಆ.5ರಿಂದ ಪ್ರಾರಂಭಿಸಲಿದ್ದು , ತಕ್ಷಣವೇ ಪ್ರವೇಶಾತಿಯನ್ನು ಪ್ರಾರಂಭಿಸಲಾಗಿದೆ.

ಉದ್ಯೋಗಸ್ಥರಿಗೆ , ಗೃಹಿಣಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಾತ್ರಿ 8 ರಿಂದ 10 ರ ವರೆಗೆ ಆನ್ಲೈನ್ ತರಬೇತಿಗಳನ್ನು ನೀಡಲಾಗುತ್ತದೆ .ನೇರ ತರಗತಿಗಳಿಗೆ ಹಾಜರಾಗುವಂತಹ ಅಭ್ಯರ್ಥಿಗಳು ಇಲ್ಲಿನ APMC ರಸ್ತೆಯಲ್ಲಿರುವ ವಿದ್ಯಾ ಮಾತಾ ಅಕಾಡೆಮಿಯಿಂದ ಬೆ. 9:30 ಯಿಂದ ಸಂಜೆ 4:00 ರವರೆಗೆ ಹೆಸರು ನೋಂದಾಯಿಸಲು ಅವಕಾಶವಿದೆ. ವಾರಾಂತ್ಯ ತರಬೇತಿಗಳು ಕೂಡ ಲಭ್ಯವಿದ್ದು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9620468869 ಅಥವಾ 9945182516 ಸಂಪರ್ಕಿಸಲು ಅಕಾಡೆಮಿ ಪ್ರಕಟಣೆ ತಿಳಿಸಿದೆ.

Related posts

ಇಂದಬೆಟ್ಟು ಗ್ರಾ.ಪಂ. ನಲ್ಲಿ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ

Suddi Udaya

ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ: ಇಬ್ಬರ ವಿರುದ್ಧ ಪ್ರಕರಣ ದಾಖಲು

Suddi Udaya

ಬೋಳಿಯಾರಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ ಪ್ರಕರಣ: ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜ

Suddi Udaya

ಪಡಂಗಡಿ ಗ್ರಾ.ಪಂ. ನಲ್ಲಿ ಜಲ ಅರ್ಪಣ್ ದಿವಸ್ ಆಚರಣೆ-ನೀರು ಸರಬರಾಜು ಉದ್ಘಾಟನೆ

Suddi Udaya

ಪಟ್ರಮೆ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ವೆನಿಲಾ ಕೃಷಿ ಅನುಭವಿಯಾಗಿದ್ದ ಅಬ್ದುಲ್ಲ ಪಣಕಜೆ ನಿಧನ

Suddi Udaya
error: Content is protected !!