November 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಹಾಸನಾಂಬ ಸನ್ನಿಧಿಯಲ್ಲಿ ಉಜಿರೆಯ ಎಸ್. ಡಿ. ಎಂ. ಪದವಿ ಪೂರ್ವ ವಿದ್ಯಾರ್ಥಿಗಳು

ಬೆಳ್ತಂಗಡಿ: ಹಾಸನದ ಜಗತ್ಪ್ರಸಿದ್ಧ ಶ್ರೀ ಹಾಸನಾಂಬ ದೇವಾಲಯದ ಮಹೋತ್ಸವದ ಸಂದರ್ಭದಲ್ಲಿ, ನ.2ರಿಂದ ನ.7ರವರೆಗೆ ಅಚ್ಚುಕಟ್ಟು ಹಾಗೂ ಶಿಸ್ತಿನಿಂದ ವಿವಿಧ ವಿಭಾಗಗಳಲ್ಲಿ ಸ್ಮರಣೀಯ ಸೇವೆ ಸಲ್ಲಿಸಿದ ಉಜಿರೆಯ ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ರೋವರ್ಸ್ ದಳದ ವಿದ್ಯಾರ್ಥಿಗಳ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ದೇವಾಲಯಕ್ಕೆ ಆಗಮಿಸಿದ ಲಕ್ಷಾಂತರ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಭದ್ರತೆ, ಸರದಿ ಸಾಲು ನಿರ್ವಹಣೆ ಹಾಗೂ ಮಾರ್ಗದರ್ಶನ ನೀಡುವಲ್ಲಿ ಯುವ ರೋವರ್ಸ್‌ ಸಿಬ್ಬಂದಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸೇವೆ ಸಲ್ಲಿಸಿದ ಉದಯೋನ್ಮುಖ ರೋವರ್ಸ್ ವಿದ್ಯಾರ್ಥಿಗಳು:
ರೋವರ್ ಫಿರೋಜ್ ಖಾನ್, ಮಣಿಕಂಠ ಕೆ., ಸರ್ವೇಶ್ ಜೈನ್, ವಿಘ್ನೇಶ ಬಿ. ಹೆಗಡೆ, ಮಾಲತೇಶ ಜಿ., ತರುಣ್ ಪಿ. ಜೈನ್, ತರುಣ್ ಕೆ. ಎನ್., ಜಿತೇಶ್, ಗೌತಮ್ ಎನ್. ಜೆ., ಪದ್ಮಪ್ರಸಾದ್ ಹಾಗೂ ಆದಿತ್ಯ.

ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರ ಅಭಿನಂದನೆ:
ಹಾಸನಾಂಬ ದೇವಿ ಮಹೋತ್ಸವದಂತಹ ಬೃಹತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲೇಜನ್ನು ಪ್ರತಿನಿಧಿಸಿ, ಸಾಮಾಜಿಕ ಹೊಣೆಗಾರಿಕೆ ಹಾಗೂ ಶಿಸ್ತಿನಿಂದ ಅಪಾರ ಸೇವೆ ಸಲ್ಲಿಸಿದ ರೋವರ್ಸ್ ದಳದ ಎಲ್ಲಾ ವಿದ್ಯಾರ್ಥಿಗಳನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರು, ರೋವರ್ಸ್ ದಳದ ನಾಯಕರು ಹಾಗೂ ಉಪಾಧ್ಯಾಯ ವೃಂದದವರು ಮುಕ್ತಕಂಠದಿಂದ ಅಭಿನಂದಿಸಿ, ಅವರ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

ವಿದ್ಯಾರ್ಥಿಗಳ ಈ ಸಮಾಜಮುಖಿ ಸೇವಾ ಮನೋಭಾವನೆಯು ಕಾಲೇಜಿನ ಘನತೆಗೆ ಮತ್ತು ಕಾಲೇಜಿನ ಸಮಾಜಮುಖಿ ಚಿಂತನೆಗೆ ಹಿಡಿದ ಕೈಗನ್ನಡಿ ಎಂದು ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಸಂತಸ ವ್ಯಕ್ತಪಡಿಸಿದ್ದಾರೆ.

Related posts

ಲಾಯಿಲ: ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದ ಉದ್ಘಾಟನೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ ಎನ್ ಬಾಲಕೃಷ್ಣ ಭೇಟಿ

Suddi Udaya

ಬೆಳ್ತಂಗಡಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ 552 ನೇ ಸೇವಾ ಯೋಜನೆ ಹಸ್ತಾಂತರ: ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಆಸರೆಯಾದ ರಾಜ ಕೇಸರಿ

Suddi Udaya

ಬೆಳ್ತಂಗಡಿ ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ವಿಶ್ವ ಯೋಗ ದಿನಾಚರಣೆ

Suddi Udaya

ಇಳಂತಿಲ ಗ್ರಾ.ಪಂ. ನಲ್ಲಿ ವಿಕಸಿತ ಭಾರತ ಗ್ಯಾರಂಟಿ ರೋಜ್‌ಗಾರ್ ಮತ್ತು ಅಜೀವಿಕ ಮಿಷನ್ ಯೋಜನೆಗಳ ಕುರಿತು ವಿಶೇಷ ಗ್ರಾಮಸಭೆ

Suddi Udaya

ಶಿರ್ಲಾಲು ಶ್ರೀ ದೈವ ಕೊಡಮಣಿತ್ತಾಯ ಮತ್ತು ಬೆರ್ಮೆರ್ ಬೈದೆರ್ಲೆ ಗರಡಿಯ ವಾರ್ಷಿಕ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!