26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗುಂಡೂರಿ ದ.ಕ.ಜಿ.ಪಂ.ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಕಿಟ್ ವಿತರಣೆ

ವೇಣೂರು: ದಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ದ.ಕ. ಜಿ.ಪಂ.ಕಿ.ಪ್ರಾ. ಶಾಲೆ ಗುಂಡೂರಿ ಇಲ್ಲಿಯ ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಕಿಟ್ ವಿತರಣಾ ಕಾರ್ಯಕ್ರಮ ಜು.11ರಂದು ಶಾಲೆಯಲ್ಲಿ ನಡೆಯಿತು.

ಶಾಲೆಯ ಹಳೆ ವಿದ್ಯಾರ್ಥಿ, ವೇಣೂರು ಲಯನ್ಸ್ ಕ್ಲಬ್ ನಿಕಟಪೂರ್ವಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮ ಶಾಲೆಗೆ 1ನೇ ತರಗತಿಗೆ ದಾಖಲಾಗುವ ಪ್ರತಿಯೊಬ್ಬ ವಿದ್ಯಾರ್ಥಿಗೆ ವೈಯಕ್ತಿಕವಾಗಿ ರೂ.5,000 ನೀಡುವ ಭರವಸೆಯನ್ನು ವ್ಯಕ್ತಪಡಿಸಿದರು.

ಯಂಗ್ ಬಾಯ್ಸ್ ಕ್ರಿಕೆಟ್ ಟೀಮ್ ಗುಂಡೂರಿ ಇವರಿಂದ ಟಿ ಶರ್ಟ್, ಐಡಿ-ಬೆಲ್ಟ್, ಕೆ.ಎಫ್.ಸಿ. ಕ್ರಿಕೆಟರ್ಸ್ ಕೊಂಚಾಡಿ ಇವರಿಂದ ತಟ್ಟೆ, ಲೋಟ, ಹಾಗೂ ಹರೀಶ್ ಕುಮಾರ್ ಪೊಕ್ಕಿ ಇವರಿಂದ ಟಿ ಶರ್ಟ್ ಮತ್ತು ಪ್ಯಾಂಟ್ ನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ಲುಕಾಸ್ ಕೊರಯಾ, ಕಾರ್ಯದರ್ಶಿ ಜಯರಾಮ್ ಹೆಗ್ಡೆ, ಆರಂಬೋಡಿ ಗ್ರಾ.ಪಂ. ಉಪಾಧ್ಯಕ್ಷೆ ತೇಜಸ್ವಿನಿ, ಶ್ರೀ. ಕ್ಷೆ.ಧ. ಗ್ರಾ. ಯೋಜನೆ ಗುಂಡೂರಿ ಒಕ್ಕೂಟದ ಅಧ್ಯಕ್ಷ ಸದಾನಂದ ಪೂಜಾರಿ, ಪ್ರಕಾಶ್ ಪೂಜಾರಿ ಯಂಗ್ ಬಾಯ್ಸ್ ಕ್ರಿಕೇಟ್ ಟೀಮ್ ಗುಂಡೂರಿ, ಕೆ.ಎಫ್.ಸಿ. ಕ್ರಿಕೆಟರ್ಸ್ ಯತೀಶ್ ಕೊಂಚಾಡಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರವೀಣ್ ಆಚಾರ್ಯ, ಶಿಕ್ಷಕವೃಂದ ಮತ್ತು ಶಾಲಾಭಿವೃದ್ಧಿ ಸಮಿತಿಯವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶೈಲಜಾ ಸ್ವಾಗತಿಸಿ ವಂದಿಸಿದರು. ಶಿಕ್ಷಕಿ ದಿಶಾಂತ ನಿರೂಪಿಸಿದರು.

Related posts

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ವತಿಯಿಂದ ಕೆಂಪೇಗೌಡ ಜಯಂತಿ ಆಚರಣೆ ಹಾಗೂ ಬೃಹತ್ ರಕ್ತದಾನ ಶಿಬಿರ

Suddi Udaya

ಕುಂಡದಬೆಟ್ಟು ಮಂಜುಶ್ರೀ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ಆನಂದ, ಕಾರ್ಯದರ್ಶಿಯಾಗಿ ಸಂದೀಪ್ ಆಯ್ಕೆ

Suddi Udaya

ಕೈಗಾರಿಕೋದ್ಯಮಿ ಅಶ್ವಥ್ ಹೆಗ್ಡೆ ಬಳಂಜರವರು ನಂದಗೋಕುಲ ಗೋಶಾಲೆಗೆ ಭೇಟಿ

Suddi Udaya

ನೆರ್ತನೆ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪವನ್, ಕಾರ್ಯದರ್ಶಿ ಸಂದೀಪ್ ಆಯ್ಕೆ

Suddi Udaya

ಯುವವಾಹಿನಿ ಕೆಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಸಾಧಕ ಹರೀಶ್ ಕೆ ಪೂಜಾರಿ ಬೈಲಬರಿ ಬಳಂಜ

Suddi Udaya

ಕೊಕ್ಕಡದ ಸರ್ಕಾರಿ ಪ್ರೌಢ ಶಾಲೆಯ ಮೂರು ವಿದ್ಯಾರ್ಥಿಗಳಿಗೆ ಜೇಸಿಐ ಭಾರತ ವಿದ್ಯಾರ್ಥಿವೇತನ

Suddi Udaya
error: Content is protected !!