27.6 C
ಪುತ್ತೂರು, ಬೆಳ್ತಂಗಡಿ
October 16, 2026
Uncategorized

ಉಡುಪಿಯ ಪೇಜಾವರ ಮಠಾಧೀಶರು ಪವಿತ್ರ ಕ್ಷೇತ್ರವಾದ ಶ್ರೀ ಮಧ್ವ ಮಂಟಪಕ್ಕೆ ಭೇಟಿ

ಕಲಿಯುಗದಲ್ಲಿ ಪರಿಶುದ್ದವಾದ ಮನಸ್ಸಿನಿಂದ ಭಗವಂತನ ಸ್ಮರಣೆ ಅತ್ಯಗತ್ಯ: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಪುಂಜಾಲಕಟ್ಟೆ : ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಜು.13 ಸೋಮವಾರ ಕಾವಳಪಡೂರು ಗ್ರಾಮದ ಮಧ್ವದಲ್ಲಿರುವ ಶ್ರೀ ಮಧ್ವಾಚಾರ್ಯರು ವಿಶ್ರಾಂತಿ ಪಡೆದ ಪವಿತ್ರ ಕ್ಷೇತ್ರವಾದ ಶ್ರೀ ಮಧ್ವ ಮಂಟಪಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಓಂಕಾರ ಫ್ರೆಂಡ್ಸ್ ಹಾಗೂ ಓಂಕಾರ ಮಹಿಳಾ ಘಟಕ ಮಧ್ವ ಹಾಗೂ ಯಕ್ಷಕೂಟ ಮಧ್ವ ವತಿಯಿಂದ ಭಕ್ತಿಪೂರ್ವಕವಾಗಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀಗಳು ದೇವರು ಸಮಾಜದಲ್ಲಿರುವ ಎಲ್ಲರ ಹೃದಯದಲ್ಲು ನೆಲೆಸಿದ್ದಾನೆ‌. ಕಲಿಯುಗದಲ್ಲಿ ಪರಿಶುದ್ದವಾದ ಮನಸ್ಸಿನಿಂದ ಭಗವಂತನ ಸ್ಮರಣೆ ಅತ್ಯಗತ್ಯವಾಗಿದೆ ಎಂದರು.
ಇದೇ ವೇಳೆ ಶ್ರೀ ಮಧ್ವ ಮಂಟಪದಲ್ಲಿ ಬಾಲಗೋಕುಲ, ಕುಣಿತ ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸಲು ಸ್ಥಳಾವಕಾಶ ಕಲ್ಪಿಸಬೇಕೆಂದು ಶ್ರೀಗಳಿಗೆ ಮನವಿ ಸಲ್ಲಿಸಲಾಯಿತು.
ಶ್ರೀ ಮಧ್ವ ಮಂಟಪದ ವ್ಯವಸ್ಥಾಪಕರಾದ ರಾಘವೇಂದ್ರ ಭಟ್ ಮಠ ಮದ್ದಡ್ಕ, ಯಕ್ಷಕೂಟ ಮಧ್ವ ಇದರ ಸಂಚಾಲಕ ಭಾಸ್ಕರ ಶೆಟ್ಟಿ ಮಧ್ವ, ಓಂಕಾರ ಫ್ರೆಂಡ್ಸ್ ಹಾಗೂ ಓಂಕಾರ ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಆಟಿಡೊಂಜಿ ದಿನ

Suddi Udaya

ಅಳದಂಗಡಿಯಲ್ಲಿ ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆಯ ಶೆಡ್ ಗೆ ಬಂತು ಸೋಲಾರ್ ಲೈಟ್ – ಡಿ .ಸಿ. ಕರೆ ಮಾಡಿ ಅಜ್ಜಿಯ ಬಗ್ಗೆ ಮಾಹಿತಿ ಸಂಗ್ರಹ: ‌ಸುದ್ದಿ ಉದಯ ಪತ್ರಿಕೆಯ ಸ್ಪೆಷಲ್ ರಿಪೋರ್ಟ್ ಗೆ ಸಾರ್ವಜನಿಕರ ವ್ಯಾಪಕ ಮೆಚ್ಚುಗೆ

Suddi Udaya

ಸೌತಡ್ಕ ದೇವಸ್ಥಾನ: ಗಂಟೆ ಹಗರಣ ಮತ್ತು ಹುಂಡಿ ಹಗರಣದ ಮರು ತನಿಖೆ ನಡೆಸಿ ವರದಿ ನೀಡಲು ಸೂಚನೆ

Suddi Udaya

ಕುಮಟಾದಲ್ಲಿ ಶ್ರೀ ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾಚರಣೆ:ಶಾಸಕ ಹರೀಶ್ ಪೂಂಜ ಸಹಿತ ಬೆಳ್ತಂಗಡಿಯಿಂದ ಹಲವು ಗಣ್ಯರು ಭಾಗಿ

Suddi Udaya

ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ.

Suddi Udaya

ಬೆಳ್ತಂಗಡಿ: ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲಾ ಮಂತ್ರಿಮಂಡಲದ ಚುನಾವಣೆ

Suddi Udaya
error: Content is protected !!