32.5 C
ಪುತ್ತೂರು, ಬೆಳ್ತಂಗಡಿ
October 15, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪಣೆಜಾಲು ಶ್ರೀ ಸ್ಟಾರ್‌ ಯುವಕ ಮಂಡಲದ ಅಧ್ಯಕ್ಷರಾಗಿ ಗಣೇಶ್ ಆಚಾರ್ಯ, ಕಾರ್ಯದರ್ಶಿಯಾಗಿ ರಾಜೇಶ್

ಬೆಳ್ತಂಗಡಿ: ಪಣೆಜಾಲು ಶ್ರೀ ಸ್ಟಾರ್‌ ಯುವಕ ಮಂಡಲ ಇದರ 2026 -27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಜು.12 ರಂದು ಸಂಘದ ಕಟ್ಟಡದಲ್ಲಿ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಗಣೇಶ್ ಆಚಾರ್ಯ ಗುಂಪಲಾಜೆ , ಉಪಾಧ್ಯಕ್ಷರುಗಳಾಗಿ ವಿಲ್ಸನ್ ನೆಲ್ಸನ್ ಮೋನಿಸ್ ಗುಂಪಲಾಜೆ ಹಾಗೂ ಪ್ರೇಮನಾಥ್ ಶೆಟ್ಟಿ ಗುಂಪಲಾಜೆ, ಕಾರ್ಯದರ್ಶಿಯಾಗಿ ರಾಜೇಶ್ ಅದೇಲು, ಜೊತೆ ಕಾರ್ಯದರ್ಶಿಯಾಗಿ ವಿಘ್ನೇಶ್ ಗಾಣಿಗ ಸಿರಿಮಜಲು, ಕ್ರೀಡಾ ಕಾರ್ಯದರ್ಶಿಯಾಗಿ ಸಂದೀಪ್ ಆದೇಲು ಹಾಗೂ ಸುಪ್ರೀತ್ ಆದೇಲು, ಕೋಶಾಧಿಕಾರಿಯಾಗಿ ಪ್ರಶಾಂತ್ ಆಚಾರ್ಯ ಸಿರಿಮಜಲು, ಸಾಂಸ್ಕೃತಿಕ ನಿರ್ದೇಶಕರಾಗಿ ಜಗನ್ನಾಥ್ ಕುಲಾಲ್ ಸಿರಿಮಜಲು ಹಾಗೂ ಸಮನ್ವಿತ್ ಪಣೆಜಾಲು ಇವರುಗಳು ಆಯ್ಕೆಯಾಗಿರುತ್ತಾರೆ.

ಕಾರ್ಯಕ್ರಮದಲ್ಲಿ ಸಲಹೆಗಾರರಾದ ಯತೀಶ್ ಸಿರಿಮಜಲುರವರು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಹಾಗೂ ಜಗನ್ನಾಥ ರವರು ಮೂರು ವರ್ಷಗಳ ಅಧ್ಯಕ್ಷ ಎಂಬ ಜವಾಬ್ದಾರಿ ಸ್ಥಾನದಿಂದ ನಿರ್ಗಮಿಸಿದ ನಾಗೇಶ್ ಆದೇಲುರವರ ಸೇವೆಯನ್ನು ಕೊಂಡಾಡಿದರು. ಮುಂದೆಯೂ ಈ ಮಾದರಿಯನ್ನು ಅನುಸರಿಸಲು ಸೂಚನೆ ನೀಡಿದರು. ನಿರ್ಗಮಿತ ಅಧ್ಯಕ್ಷ ನಾಗೇಶ್ ಈ ವರೆಗೆ ತಮಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಶಾಂತರಾಜ್ ಜೈನ್, ಶಂಕರ ಗಾಣಿಗ ಸೇರಿದಂತೆ ಹಿರಿಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ನೂತನ ಕಾರ್ಯದರ್ಶಿ ರಾಜೇಶ್ ಆದೇಲು ಧನ್ಯವಾದವಿತ್ತರು.

Related posts

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಪ್ರಸನ್ನ ಶಿಕ್ಷಣ ಸಂಸ್ಥೆಗೆ ಭೇಟಿ

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಜಯಾನಂದ ಗೌಡ, ಉಪಾಧ್ಯಕ್ಷರಾಗಿ ಗೌರಿ ಅವಿರೋಧ ಆಯ್ಕೆ

Suddi Udaya

ಗುಂಡೂರಿ ಅಂಗನವಾಡಿ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಶಿಬಿರ

Suddi Udaya

ಶ್ರೀ ಗಣೇಶ ಭಜನಾ ಮಂಡಳಿ ಕುಪ್ಪೆಟ್ಟಿ, ಶ್ರೀ ದುರ್ಗಾ ಗಣೇಶ ಮಾತೃ ಮಂಡಳಿ ಮತ್ತು ಕಟ್ಟಡ ಅಭಿವೃದ್ಧಿ ಸಮಿತಿ ಕುಪ್ಪೆಟ್ಟಿ ವತಿಯಿಂದ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ಕಣಿಯೂರು ದೀಪಾ ಸಂಜೀವಿನಿ ಒಕ್ಕೂಟದ ಮಹಾಸಭೆ

Suddi Udaya

ದ್ವಿತೀಯ ಪಿಯುಸಿ ಪರೀಕ್ಷೆ: ಹೆಚ್ಚುವರಿ ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ

Suddi Udaya
error: Content is protected !!