32.5 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷದ “ಹೊಸ ಬ್ಯಾಚ್ ಆರಂಭೋತ್ಸವ”

ಬೆಳ್ತಂಗಡಿ: ಶಿಕ್ಷಣವು ಪ್ರತಿಯೊಬ್ಬರ ಬದುಕನ್ನು ರೂಪಿಸುವ ಶಕ್ತಿಯಾಗಿದ್ದು, ಉತ್ತಮ ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿ, ಶಿಸ್ತು ಹಾಗೂ ಉದ್ಯೋಗಮುಖಿ ತರಬೇತಿಯೇ ಇಂದಿನ ಯುವಜನರ ಯಶಸ್ಸಿನ ಅಡಿಪಾಯ ಎಂಬ ಸಂದೇಶದೊಂದಿಗೆ ಅನುಗ್ರಹ ಟ್ರೈನಿಂಗ್ ಕಾಲೇಜು (ATC), ಬೆಳ್ತಂಗಡಿ ವತಿಯಿಂದ 2026–27ನೇ ಶೈಕ್ಷಣಿಕ ವರ್ಷದ ಹೊಸದಾಗಿ ದಾಖಲಾತಿ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗಾಗಿ “ಹೊಸ ಬ್ಯಾಚ್ ಆರಂಭೋತ್ಸವ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ. ಜಿ. ತಲ್ಹತ್ ಸವಣಾಲು ವಹಿಸಿ ಮಾತನಾಡಿ, ಶಿಕ್ಷಣವು ಕೇವಲ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಕ್ಕಷ್ಟೇ ಸೀಮಿತವಾಗಿರದೆ, ಉತ್ತಮ ವ್ಯಕ್ತಿತ್ವ, ನೈತಿಕತೆ, ಕೌಶಲ್ಯ ಮತ್ತು ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಗಳಿಸುವ ಸಾಧನವಾಗಿದೆ ಎಂದರು.

ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಅಬ್ದುಲ್ ಖಾದರ್ ನಾವೂರು, ಮುಹಮ್ಮದ್ ತೌಸೀಫ್ ಕಕ್ಕಿಂಜೆ, ಅನುಗ್ರಹ ಟ್ರೈನಿಂಗ್ ಕಾಲೇಜಿನ ಮುಡಿಪು ಘಟಕದ ಪ್ರಾಂಶುಪಾಲರಾದ ರಾಘವೇಂದ್ರ ಗೌಡ ಸೋಣಂದೂರು, ಮುಡಿಪು ಘಟಕದ ಮಾರ್ಕೆಟಿಂಗ್ ಕೋಆರ್ಡಿನೇಟರ್ ಹಾರಿಶ್ ಮಲಾರ್, ಹಾಗೂ ಕಾಲೇಜಿನ ಕಟ್ಟಡದ ಮಾಲಕರಾದ ಮುಕೇಶ್ ಆರ್. ನಾಯಕ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸಂಸ್ಥೆಯ ವಾರ್ಷಿಕ ಶೈಕ್ಷಣಿಕ ಕ್ಯಾಲೆಂಡರ್, ವಿದ್ಯಾರ್ಥಿಗಳ ನಿಯಮಾವಳಿ, ಕಾಲೇಜಿನ ಉದ್ದೇಶಗಳು, ವಿವಿಧ ಉದ್ಯೋಗಮುಖಿ ಕೋರ್ಸ್‌ಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವಿಭಾಗದ ಮುಖ್ಯ ಶಿಕ್ಷಕಿ ಅಂಕಿತಾ ಉಜಿರೆ ಅವರು ವಿವರವಾಗಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಶಿಸ್ತು, ಹಾಜರಾತಿ, ಪ್ರಾಯೋಗಿಕ ತರಬೇತಿ, ಇಂಟರ್ನ್‌ಶಿಪ್ ಹಾಗೂ ಉದ್ಯೋಗಾವಕಾಶಗಳ ಕುರಿತು ಸಮಗ್ರವಾಗಿ ವಿವರಿಸಿದರು.

ಎಸಿ ಮತ್ತು ರೆಫ್ರಿಜರೇಟರ್ ಮೆಕ್ಯಾನಿಕ್ ವಿಭಾಗದ ಶಿಕ್ಷಕ ಉಮೇಶ್ ಮಂಜೊಟ್ಟಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಅನುಗ್ರಹ ಟ್ರೈನಿಂಗ್ ಕಾಲೇಜಿನ ಬೆಳ್ತಂಗಡಿ ಘಟಕದ ಫ್ಯಾಶನ್ ಡಿಸೈನಿಂಗ್ ವಿಭಾಗದ ಶಿಕ್ಷಕಿ ಶ್ರೇಯಾಂಕ ಚಾರ್ಮಾಡಿ ನಿರೂಪಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಅಬ್ದುಲ್ ಖಾದರ್ ನಾವೂರು ಹಾಗೂ ಮುಹಮ್ಮದ್ ತೌಸೀಫ್ ಕಕ್ಕಿಂಜೆ ಮಾತನಾಡಿ, SSLC, PUC ಅಥವಾ ಯಾವುದೇ ಪದವಿ (UG/PG) ಶಿಕ್ಷಣದಲ್ಲಿ ಪಾಸ್ ಆಗಿದ್ದರೂ ಅಥವಾ ಫೇಲ್ ಆಗಿದ್ದರೂ ಚಿಂತಿಸುವ ಅಗತ್ಯವಿಲ್ಲ. ತಮ್ಮ ಶಿಕ್ಷಣವನ್ನು ಮುಂದುವರಿಸಲು ಈಗಲೂ ದಾಖಲಾತಿ ಮಾಡಿಸಿಕೊಳ್ಳಲು ಸುವರ್ಣಾವಕಾಶ ಲಭ್ಯವಿದೆ ಎಂದು ತಿಳಿಸಿದರು.

ಮಾತ್ರವಲ್ಲ, ಬೆಳ್ತಂಗಡಿ ಹಾಗೂ ಮುಡಿಪು ಕೇಂದ್ರಗಳಲ್ಲಿ ಮೊದಲ ಬಾರಿಗೆ ನೇರ SSLC ಮತ್ತು PUC ವಿಶೇಷ ತರಗತಿಗಳನ್ನು ಆರಂಭಿಸಲಾಗಿದ್ದು, ವಿದ್ಯಾರ್ಥಿಗಳು Online ಅಥವಾ Offline ಮೂಲಕ ಪರೀಕ್ಷೆ ಬರೆಯುವ ಅವಕಾಶವನ್ನು ಅನುಗ್ರಹ ಟ್ರೈನಿಂಗ್ ಕಾಲೇಜು ಕಲ್ಪಿಸಿದೆ ಎಂದು ಹೇಳಿದರು. ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದವರು, ಉದ್ಯೋಗದಲ್ಲಿರುವವರು, ವಿದೇಶದಲ್ಲಿರುವವರು ಹಾಗೂ ಯಾವುದೇ ಕಾರಣಗಳಿಂದ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗದವರಿಗೆ ಈ ಅವಕಾಶ ಅತ್ಯಂತ ಉಪಯುಕ್ತವಾಗಿದ್ದು, ಆಸಕ್ತರು ಕೂಡಲೇ ದಾಖಲಾತಿ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಶಿಕ್ಷಕರು, ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹೊಸ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಲೇಜಿನ ಶಿಸ್ತು, ಗುಣಮಟ್ಟದ ಶಿಕ್ಷಣ, ಕೌಶಲ್ಯಾಧಾರಿತ ತರಬೇತಿ ಹಾಗೂ ಉದ್ಯೋಗಮುಖಿ ಶಿಕ್ಷಣ ವ್ಯವಸ್ಥೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ಸಾಹ, ಆತ್ಮವಿಶ್ವಾಸ ಮತ್ತು ಹೊಸ ಕನಸುಗಳೊಂದಿಗೆ ಆರಂಭವಾದ ಈ “ಹೊಸ ಬ್ಯಾಚ್ ಆರಂಭೋತ್ಸವ” ಕಾರ್ಯಕ್ರಮವು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಹೊಸ ಅಧ್ಯಾಯಕ್ಕೆ ಸ್ಪೂರ್ತಿದಾಯಕ ಆರಂಭವಾಗಿ ಯಶಸ್ವಿಯಾಗಿ ನೆರವೇರಿತು. ಹೆಚ್ಚಿನ ಮಾಹಿತಿಗಾಗಿ ಅನುಗ್ರಹ ಟ್ರೈನಿಂಗ್ ಕಾಲೇಜು 8861112182 ಸಂಪರ್ಕಿಸುವಂತೆ ತಿಳಿಸಲಾಗಿದೆ.

Related posts

ಚಿನ್ನಯ್ಯ ಹೈಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿ ವಜಾ

Suddi Udaya

ರಾಜ್ಯ”ಮಿನಿ ಒಲಿಂಪಿಕ್“: ಶಿಶಿರ್ ಜಯವಿಕ್ರಮ್ ನಾಯಕತ್ವದ ದ.ಕ. ವಾಲಿಬಾಲ್ ತಂಡ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ:ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ ಹರಿದಾಸ್ ಡೋಗ್ರಾರವರು ಮಂಗಳೂರು ವಿಭಾಗದಿಂದ ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಧನ್ವಂತರಿ ಪೂಜೆ ಹಾಗೂ ದುರ್ಗಾಪೂಜೆ

Suddi Udaya

ಶಿರ್ಲಾಲು ಸ.ಉ.ಪ್ರಾ. ಶಾಲೆಯ ಮಕ್ಕಳಿಗೆ ವಕೀಲರು ಮುರುಳಿ ಬಿ. ರವರಿಂದ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಮುಂಡಾಜೆ ನಶಾ ಮುಕ್ತ ಭಾರತ ಅಭಿಯಾನ ಕಾರ್ಯ ಕ್ರಮ

Suddi Udaya
error: Content is protected !!