26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

ಬೆಳ್ತಂಗಡಿ: ತಾಲೂಕಿನಲ್ಲಿ ಎರಡು ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತಣ್ಣೀರುಪಂತದ ಕೊಡಂಗೆ ಮತ್ತು ತೆಕ್ಕಾರಿನ ಬಾಜಾರು ಅಂಗನವಾಡಿ ಕಾರ್ಯಕರ್ತೆ ಹುದ್ದೆ ಹಾಗೂ ಬಾರ್ಯದ ಪೆರಿಯೊಟ್ಟು, ಕೊಕ್ಕಡದ ಹಳ್ಳಿಂಗೇರಿ, ಉಜಿರೆಯ ಅತ್ತಾಜೆ, ಕೊಯ್ಯೂರಿನ ಬಜಿಲ, ಮಲವಂತಿಗೆಯ ಎಳನೀರು ಮತ್ತು ಗುತ್ಯಡ್ಕ, ನೆರಿಯದ ಬಾಂಜಾರುಮಲೆ, ಬೆಳಾಲಿನ ಕೊಲ್ಪಾಡಿ, ಕೊಯ್ಯೂರಿನ ಪೆರ್ಮುದೆ ಕೊಪ್ಪದಬೈಲ್, ಚಿಬಿದ್ರೆಯ ಕಲ್ಲಗುಂಡ, ಇಂದಬೆಟ್ಟಿನ ಇಂದಬೆಟ್ಟು, ಕೊಕ್ಕಡದ ಸೌತಡ್ಕ, ಬೆಳಾಲಿನ ದೊಂಪದಪಲ್ಕೆ ಬಿ ಇಲ್ಲಿ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ನೆರಿಯ ಬಾಂಜಾರುಮಲೆ ಪ.ಪಂಕ್ಕೆ ಮೀಸಲಾಗಿದ್ದು, ಉಳಿದ ಎಲ್ಲಾ ಹುದ್ದೆಗಳು ಸಾಮಾನ್ಯರಿಗೆ ನೀಡಲಾಗಿದೆ.

ಅಂಗನವಾಡಿ ಕಾರ್ಯಕರ್ತೆಗೆ ಪಿಯುಸಿ, ಸಹಾಯಕಿ ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ವಯಸ್ಸು 19ರಿಂದ 35 ವರ್ಷ, ಅರ್ಜಿ ಸಲ್ಲಿಸಲು ಆ.10 ಕೊನೆಯ ದಿನವಾಗಿದೆ. ಅರ್ಜಿ ಫಾರಂಗಳನ್ನು ಶಿಶುಅಭಿವೃದ್ಧಿ ಯೋಜನಾ ಕಚೇರಿಯಿಂದ ಪಡೆದು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ೦೮೨೫೬-೨೯೫೧೩೪ನ್ನು ಸಂಪರ್ಕಿಸಬಹುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ ದೇಶಭಕ್ತಿ ಗೀತ ಗಾಯನ ಹಾಗೂ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳಿಗೆ ಜನಪದ ಗೀತ ಗಾಯನ ಸ್ಪರ್ಧಾ ಕಾರ್ಯಕ್ರಮ

Suddi Udaya

ಬೆಳಗಾವಿ ಅಧಿವೇಶನದ ನಡುವೆ ಕೆಸಿಎ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿದ ಶಾಸಕರುಗಳು: ಗಮನ ಸೆಳೆದ ಶಾಸಕ ಹರೀಶ್ ಪೂಂಜರ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ

Suddi Udaya

ನಕಲಿ ಚಿನ್ನದ ಹಾವಳಿ ತಡೆಗೆ ಶಾಸಕರಿಗೆ ಮನವಿ

Suddi Udaya

ಪೆರಿಯಶಾಂತಿ-ಕುದ್ರಾಯ: ಅನಧಿಕೃತ ಗೂಡಂಗಡಿಗಳ ತೆರವಿಗೆ ಅರಣ್ಯ ಇಲಾಖೆ ಸೂಚನೆ

Suddi Udaya

ಪಿಲ್ಯ ಉಲ್ಫೆ ಪ್ರದೇಶದಲ್ಲಿ ಕಂಡು ಬಂದ ಚಿರತೆ

Suddi Udaya

ಉರುವಾಲುಪದವು ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತ ಸಮಿತಿ ಮತ್ತು ಸಂಘ-ಸಂಸ್ಥೆಗಳ ಜಂಟಿ ಸಭೆ

Suddi Udaya
error: Content is protected !!