26.9 C
ಪುತ್ತೂರು, ಬೆಳ್ತಂಗಡಿ
October 16, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಖೋಟಾ ನೋಟು ಮುದ್ರಣ ಜಾಲ ಪತ್ತೆ ಪ್ರಕರಣ: ಆರೋಪಿಗಳು 6 ದಿನ ಪೊಲೀಸ್ ಕಷ್ಟಡಿಗೆ

ಬೆಳ್ತಂಗಡಿ: ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧ ಏಳು ಮಂದಿ ಆರೋಪಿಗಳನ್ನು ಉಪ್ಪಿನಂಗಡಿ ಇನ್ಸ್‌ಪೆಕ್ಟರ್ ನಾಗರಾಜ್ ಇ.ಪಿ ನೇತೃತ್ವದ ತಂಡ ಜು.16ರಂದು ಸಂಜೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಆರು ದಿನಗಳ ಕಾಲ ಪೊಲೀಸ್ ಕಷ್ಟಡಿಗೆ ನೀಡಿ ಆದೇಶಿಸಿದೆ.

ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿ ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದ ಕೇಂದ್ರವೊಂದಕ್ಕೆ ಜು.15 ರಂದು ಮಧ್ಯರಾತ್ರಿ 1 ಗಂಟೆಗೆ ಉಪ್ಪಿನಂಗಡಿ ಪೊಲೀಸರ ನೇತೃತ್ವದ ತಂಡ ದಾಳಿ ನಡೆಸಿದ ಸಂದರ್ಭದ ಬಂಧಿತ 7 ಏಳು ಮಂದಿ ಆರೋಪಿಗಳಾದ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನಿನ್ನಿಕಲ್ಲು ನಿವಾಸಿ ಅಬ್ದುಲ್ ಖಾದರ್ ಮಗ ಸಿರಾಜುದ್ದೀನ್(34), ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಉಸ್ಮಾನ್ ಪಿಎ ಮಗ ಇರ್ಷಾದ್(31), ಪುತ್ತೂರು ಕಸಬ ಗ್ರಾಮದ ಬಪ್ಪಳಿಗೆ ನಿವಾಸಿ ಹಸನ್ ಕುಂಙ ಮಗ ಇಬ್ರಾಹಿಂ(60), ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಎಂ.ಎ.ಆರ್ಕೇಡ್ ಬಿಲ್ಡಿಂಗ್ ನಿವಾಸಿ ಮಹಮ್ಮದ್ ಮಗ ಸಲ್ಮಾನ್ ಪಾರೀಸ್(25), ಕಾಸರಗೋಡು ಜಿಲ್ಲೆಯ ಚಂಗುಲ ಗ್ರಾಮದ ಚೆನ್ನಡ್ಕ್ ಕ್ವಾಟ್ರಸ್ ನಿವಾಸಿ ಮಹಮ್ಮದ್ ಮಗ ಶರೀಫ್(51), ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮರಕವಾಡ ಗ್ರಾಮದ ಪುಂಡಲೀಕ ಮಗ ಸಂದೀಪ್ ಪುಂಡಲೀಕ ಶೋಳಂಬಿ(30), ಕಾಸರಗೋಡು ಜಿಲ್ಲೆಯ ಆಮೂರು ಗ್ರಾಮದ ಪೊರ್ಕಡ ನಿವಾಸಿ ಅಬ್ದುಲ ಮಗ ಮಹಮ್ಮದ್ ನಬಾಸ್(37) ಬಂಧಿತ ಆರೋಪಿಗಳು ಜು.16 ರಂದು ಸಂಜೆ ಬೆಳ್ತಂಗಡಿ ನ್ಯಾಯಾಲಯದ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ಮನು.ಬಿ.ಕೆ ರವರ ಮುಂದೆ ಹಾಜರು ಪಡಿಸಿ, ಬಳಿಕ ವಿಚಾರಣೆಯ ಹಿನ್ನೆಲೆ ನ್ಯಾಯಾಲಯ ಆರು ದಿನಗಳ ಕಸ್ಟಡಿಗೆ ನೀಡಿ ಆದೇಶಿಸಿದೆ.

Related posts

ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘದ ಕಚೇರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಭೇಟಿ

Suddi Udaya

ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಯೋಗ ದಿನಾಚರಣೆ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನ ಗ್ರಂಥಾಲಯ ವಿಭಾಗದ ವತಿಯಿಂದ ಓದುವ ಸಪ್ತಾಹ

Suddi Udaya

ಉಜಿರೆ : ಕಾಲೇಜು ವಿದ್ಯಾರ್ಥಿ ಚಂದ್ರಶೇಖರ್ ಗೌಡ ನಿಧನ

Suddi Udaya

ಕಡಿರುದ್ಯಾವರ: ರಸ್ತೆಗೆ ಬಿದ್ದ ವಿದ್ಯುತ್ ಕಂಬಗಳು

Suddi Udaya

ಎಸ್.ಎಸ್.ಎಲ್.ಸಿ ಮರು ಮೌಲ್ಯ ಮಾಪನ: ಲಾಯಿಲ ವಿದ್ಯಾರ್ಥಿನಿ ತನ್ವಿ ಭಟ್ ಎಂ ಅವರಿಗೆ 624 ಅಂಕ, ರಾಜ್ಯಕ್ಕೆ 2 ನೇ ಸ್ಥಾನ, ಬೆಳ್ತಂಗಡಿ ತಾಲೂಕಿಗೆ ಪ್ರಥಮ

Suddi Udaya
error: Content is protected !!