26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಶ್ರೀ ಧ ಮಂ ಸ್ವಾಯತ್ತ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಕಾಳಿದಾಸ ಜಯಂತಿ ಆಚರಣೆ

ಉಜಿರೆ: ಕವಿಕುಲಗುರುವಾದ ಕಾಳಿದಾಸನು ಎಲ್ಲಾ ಕಾಲಕ್ಕೂ ಸಲ್ಲುವಂತಹ ಶ್ರೇಷ್ಠ ಕಾವ್ಯಗಳನ್ನು ಭಾರತೀಯ ಸಾಹಿತ್ಯದಲ್ಲಿ ಸೃಷ್ಟಿಸಿದವನು ಎಂದು ಎಸ್‌ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಕೃತ ಅಧ್ಯಾಪಕ ಹರೀಶ್ ಕುಮಾರ್ ಅಭಿಪ್ರಾಯ ಪಟ್ಟರು.

ಅವರು ಉಜಿರೆ ಶ್ರೀ ಧ ಮಂ ಸ್ವಾಯತ್ತ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಜು.15 ರಂದು ಕಾಳಿದಾಸ ಜಯಂತಿ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾಳಿದಾಸನು ಸಂಸ್ಕೃತ ಮತ್ತು ಭಾರತೀಯ ಸಾಹಿತ್ಯದ ಇತಿಹಾಸದಲ್ಲೇ ಅಸಾಮಾನ್ಯ ಕವಿಯಾಗಿದ್ದು ಆತನ ಸ್ಥಾನವನ್ನು ಬೇರೆ ಯಾರೂ ತುಂಬಲು ಸಾಧ್ಯವಿಲ್ಲ ಏಕೆಂದರೆ ಆತನು ಓರ್ವ ಅದ್ಭುತ ರಸಸಿದ್ದ ಕವಿ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಸಂಸ್ಕೃತ ವಿಭಾಗದ ಮುಖ್ಯಸ್ಥರು ಮತ್ತು ಕಾಲೇಜಿನ ಆಡಳಿತಾಂಗ ಕುಲಸಚಿವರಾದ ಡಾ. ಶ್ರೀಧರ ಎನ್ ಭಟ್ ಕಾಳಿದಾಸ ಜಯಂತಿ ಆಚರಣೆಯ ವಿಶೇಷತೆ ಮತ್ತು ಕಾಳಿದಾಸನು ಬರೀ ಸಂಸ್ಕೃತ ಸಾಹಿತ್ಯದ ಶ್ರೇಷ್ಠ ಕವಿ ಅಲ್ಲ, ಬದಲಾಗಿ ಇಡೀ ವಿಶ್ವದ ಶ್ರೇಷ್ಠ ಕವಿಗಳಲ್ಲಿ ಅವನು ಒಬ್ಬನು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಂಸ್ಕೃತ ವಿಭಾಗದ ಭಿತ್ತಿ ಪತ್ರಿಕೆಯಾದ ಸುಭೋದಿನಿ ಇದರ ಅನಾವರಣ ಕಾರ್ಯಕ್ರಮವನ್ನು ಸಹ ನಡೆಸಲಾಯಿತು.

ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೇಯಸ್ ಜೆ ಪಾಳಂದೆ ಸ್ವಾಗತಿಸಿದರು, ವಿಭಾಗದ ಇನ್ನೋರ್ವ ಸಹಪ್ರಾಧ್ಯಾಪಕಿ ಮೇಘನ ಎನ್ ಸಿ ಹಾಗೂ ಸಂಸ್ಕೃತ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ವಿದ್ಯಾರ್ಥಿಗಳಾದ ಶ್ರೀವರ್ಧನ್ ಆರ್ ಮೆಂಡಿಗೇರಿ ಕಾರ್ಯಕ್ರಮವನ್ನು ನಿರೂಪಿಸಿ ಶ್ರೀದೇವೀ ಶರಧಿ ಪ್ರಾರ್ಥಿಸಿ ಶ್ರುತಾ ವಂದಿಸಿದರು.

Related posts

ಭಾರಿ ಗಾಳಿ-ಮಳೆ: ಪಟ್ರಮೆ ಅನಾರುವಿನಲ್ಲಿ ಹಲವು ಮನೆಗಳಿಗೆ ಹಾನಿ

Suddi Udaya

ಉಜಿರೆ ನಿನ್ನಿಕಲ್ಲು ಬಳಿ 30ಕೆ.ವಿ ವಿದ್ಯುತ್ ಘಟಕ ಸ್ಥಾಪನೆಯ ಬಗ್ಗೆ ವಿಧಾನ ಪರಿಷತ್ ಅಧಿವೇಶನಲ್ಲಿ ಪ್ರಶ್ನಿಸಿದ ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್

Suddi Udaya

ಅಳದಂಗಡಿ ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘದ ವಾರ್ಷಿಕ ಪೂಜಾ ಕಾರ್ಯಕ್ರಮದ ಪೂರ್ವಭಾವಿ ಸಭೆ

Suddi Udaya

ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್ ಬೆಳ್ತಂಗಡಿ ಇದರ ನೂತನ ಕಛೇರಿ ಉದ್ಘಾಟನಾ ಸಮಾರಂಭ

Suddi Udaya

ಕಣಿಯೂರು: ಶ್ವೇತ ಸಮೂಹ ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ರಜತ ಮಹೋತ್ಸವ

Suddi Udaya

ಉಜಿರೆ: ಅತ್ತಾಜೆ ಅರಫಾ ಜಾಮಿಅಃ ಮಸ್ಜಿದ್ ನಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

Suddi Udaya
error: Content is protected !!