26.2 C
ಪುತ್ತೂರು, ಬೆಳ್ತಂಗಡಿ
October 17, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ “ಶ್ರೀ ಮಂಜುನಾಥ ಬನ್ನಿಸ್ ಟಂಟೋಲ”ಕ್ಕೆ ಚಾಲನೆ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ “ಶ್ರೀ ಮಂಜುನಾಥ ಬನ್ನಿಸ್ ಟಂಟೋಲ” ಘಟಕಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಹೇಮಲತಾ ಎಂ. ಆರ್. ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಅವರು ಮಕ್ಕಳಿಗೆ ಬನ್ನಿಸ್ ಎಪ್ರೋನ್ ಧರಿಸುವ ಮೂಲಕ ಘಟಕವನ್ನು ಉದ್ಘಾಟಿಸಿ, ಮಕ್ಕಳಲ್ಲಿ ಶಿಸ್ತು, ಸೇವಾ ಮನೋಭಾವ, ನಾಯಕತ್ವ ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸುವ ಉದ್ದೇಶವನ್ನು ತಿಳಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಬೆಳ್ತಂಗಡಿಯ ಕಾರ್ಯದರ್ಶಿಯಾದ ಶ್ರೀಮತಿ ಪ್ರಮೀಳಾ ಪೂಜಾರಿ ಅವರ ನೇತೃತ್ವದಲ್ಲಿ ಮಕ್ಕಳಿಗೆ ವಿವಿಧ ಬನ್ನಿಸ್ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related posts

ಅಳದಂಗಡಿಯಲ್ಲಿ ನಡೆದ ತುಳುನಾಡ ಸಿಂಗಾರ ಕಾರ್ಯಕ್ರಮದಲ್ಲಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಗೆ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ

Suddi Udaya

ತಣ್ಣೀರುಪಂತ: ಕುದ್ರಡ್ಕದಲ್ಲಿ ಮೂವರು ಮಕ್ಕಳಿಗೆ ಹಾವು ಕಡಿತ

Suddi Udaya

ಶ್ರೀ ರಾಮ ಮಂದಿರದ ಹನುಮ ರಥಕ್ಕೆ ಸ್ವಾಗತ

Suddi Udaya

ವ್ಯಸನಬಾಧಿತ ಕುಟುಂಬದವರ ಪಾಲಿಗೆ ಪ್ರೇರಕರಾದ ಮಡಂತ್ಯಾರಿನ ಪದ್ಮನಾಭ ಸಾಲ್ಯಾನ್ ರಿಗೆ ‘ಜಾಗೃತಿ ಅಣ್ಣ’ ಪ್ರಶಸ್ತಿ, ಗೌರವಾರ್ಪಣೆ

Suddi Udaya

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

Suddi Udaya

ಬೆಳ್ತಂಗಡಿ ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ: ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ನಿವೃತ್ತ ಜಯಕೀರ್ತಿ ಜೈನ್ ರವರಿಗೆ ಬೀಳ್ಕೊಡುಗೆ

Suddi Udaya
error: Content is protected !!