26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವನಮಹೋತ್ಸವ ಆಚರಣೆ: ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಪರಿಸರದಲ್ಲಿ ಗಿಡ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ

ಮಡಂತ್ಯಾರು: ರೋಟರಿ ಕ್ಲಬ್ ಮಡಂತ್ಯಾರು ಹಾಗೂ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ, ಬಳ್ಳಮಂಜ ಇವರ ಸಂಯುಕ್ತ ಆಶ್ರಯದಲ್ಲಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ದೇವಸ್ಥಾನದ ಪರಿಸರದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ವಿವಿಧ ಜಾತಿಯ ಗಿಡಗಳನ್ನು ದೇವಸ್ಥಾನದ ಆವರಣದಲ್ಲಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಹಾಗೂ ಹಸಿರು ವಾತಾವರಣ ನಿರ್ಮಾಣದ ಮಹತ್ವವನ್ನು ಸಾರಲಾಯಿತು. ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ರೋ. ಡಾ. ಹರ್ಷ ಸಂಪಿಗೆತ್ತಾಯ ಅವರ ಮುಂದಾಳತ್ವದಲ್ಲಿ, ರೋಟರಿ ಕ್ಲಬ್ ಮಡಂತ್ಯಾರಿನ ಅಧ್ಯಕ್ಷ ರೋ. ಪ್ರಶಾಂತ್ ಶೆಟ್ಟಿ ಮೂಡಯೂರು ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.

ವಲಯ ಅರಣ್ಯ ಅಧಿಕಾರಿ ಹಾಗೂ ಮಡಂತ್ಯಾರು ಮತ್ತು ಮಚ್ಚಿನ ಗ್ರಾಮ ಪಂಚಾಯತ್‌ಗಳ ಆಡಳಿತಾಧಿಕಾರಿ ಲೋಕೇಶ್ ಎಸ್. ಎನ್. ಅವರ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಡಂತ್ಯಾರಿನ ಸದಸ್ಯರಾದ ರೋ. ಹರ್ಷ ನಾರಾಯಣ ಶೆಟ್ಟಿ, ರೋ. ಅಶೋಕ್ ಗುಂಡಿಯಲ್ಕೆ, ರೋ. ಜೆರಲ್ಡ್ ಮೀರಾಂದ, ರೋ. ಚಂದ್ರಕಾಂತ್ ನಿಡ್ಡಾಜೆ, ರೋ. ವಿಶ್ವನಾಥ ಶೆಟ್ಟಿ ಹಂಬೆಟ್ಟು, ರೋ. ಅವಿನಾಶ್ ಕುಲಾಲ್ ಬಳ್ಳಮಂಜ, ರೋ. ಸದಾನಂದ ಶೆಟ್ಟಿ ಮಡಪ್ಪಾಡಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ಇಂದಬೆಟ್ಟು: ಸಂವಿಧಾನ ಜಾಗೃತಿ ಜಾಥ

Suddi Udaya

ಕಲ್ಮಂಜದಲ್ಲಿ ಕಾಡಾನೆಗಳ ಹಾವಳಿ: ಬಾಳೆ ಕೃಷಿ, ಅಡಿಕೆ ಬೆಳೆ ಹಾನಿ

Suddi Udaya

ಫೆ.6 : ನಡ ಗ್ರಾಮ ಪಂಚಾಯತ್ ನ ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಅಂಡಿಂಜೆ: ಗ್ರಾ.ಪಂ. ನಲ್ಲಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ಕಾರ್ಯಕ್ರಮ

Suddi Udaya

ಗುರುವಾಯನಕೆರೆ- ಶಕ್ತಿನಗರ ನಗರಲಂಕಾರ ದೀಪ ಲೋಕಾರ್ಪಣೆ

Suddi Udaya

ಅಳದಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಡಗಕಾರಂದೂರು ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya
error: Content is protected !!