27.5 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ : ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ವರ್ಗಾವಣೆ: ಬೆಳ್ತಂಗಡಿ ಆರ್ ಎಫ್ ಓ ಆಗಿ ಮಹೇಶ್ ದೇವಾಡಿಗ ಅಧಿಕಾರ ಸ್ವೀಕಾರ

ಬೆಳ್ತಂಗಡಿ : ಮಂಗಳೂರು ವಿಭಾಗದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯಾಗಿದ್ದ ತ್ಯಾಗರಾಜ್ ಅವರನ್ನು ಬೆಂಗಳೂರು ಗ್ರೇಟರ್ ಪ್ರಾಧಿಕಾರ (ಕೇಂದ್ರ ವಲಯ) ಕ್ಕೆ ವರ್ಗಾವಣೆ ಮಾಡಲಾಗಿದ್ದು. ತೆರವಾದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಸ್ಥಾನಕ್ಕೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಭಾಗದ ಕ್ಯಾದಗಿ ವಲಯ ಅರಣ್ಯಾಧಿಕಾರಿ ಮಹೇಶ್ ಎಂ ದೇವಾಡಿಗ ಅವರನ್ನು ನೇಮಕ ಮಾಡಿ ಬೆಂಗಳೂರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೇ.28 ರಂದು ಆದೇಶ ಹೊರಡಿಸಿದ್ದರು.

ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯಾಗಿದ್ದ ಟಿ. ಎನ್. ತ್ಯಾಗರಾಜ್ ಅವರು 2024 ಆಗಷ್ಟ್ 21ರಿಂದ  ಬೆಳ್ತಂಗಡಿ ಆರ್ ಎಫ್ ಓ ಆಗಿ ಕರ್ತವ್ಯ ಸೇವೆ ಸಲ್ಲಿಸಿದ್ದ ಜನಸ್ನೇಹಿ ಅಧಿಕಾರಿಯಾಗಿದ್ದರು.

ಪ್ರಸ್ತುತ ವಲಯ  ಅರಣ್ಯಾಧಿಕಾರಿ ಮಹೇಶ್ ಎಂ. ದೇವಾಡಿಗ ಅವರು ಜು.16 ರಂದು ಅಧಿಕಾರ ಸ್ವೀಕಾರಿಸಿಕೊಂಡಿದ್ದಾರೆ. ಇವರು ಸುಬ್ರಹ್ಮಣ್ಯದ ನೆಟ್ಟಣ ಡಿಪ್ಪೋ, ಚಿಕ್ಕಮಗಳೂರು, ಮೂಡಿಗೆರೆ, ಸಿದ್ದಾಪುರ ವಲಯದಲ್ಲಿ ಸೇವೆ ಸಲ್ಲಿಸಿದ್ದಾರೆ.

Related posts

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ‘ಪರೋಪಕಾರ ಸಪ್ತಾಹ’

Suddi Udaya

ಕೊಯ್ಯುರು : ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕುರಿತು ಐಇಸಿ ಚಟುವಟಿಕೆ

Suddi Udaya

ದಿ. ಎನ್ ಪದ್ಮನಾಭ ಮಾಣಿಂಜ ರವರ ಮೊದಲ ವರ್ಷದ ಪುಣ್ಯಸ್ಮರಣೆ ಆಚರಣೆ

Suddi Udaya

ಕು| ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕಳೆಂಜ ಗ್ರಾಮ ಸಮಿತಿಯಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಮನವಿ

Suddi Udaya

ಎಸ್ ಎಸ್ ಎಲ್ ಸಿ ಐಸಿಎಸ್ಇ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ವಿದ್ವತ್ ಪಿಯು ಕಾಲೇಜಿನಿಂದ ಅಭಿನಂದನೆ

Suddi Udaya

ವೇಣೂರು ಕಾರು ಚಾಲಕ ಬೈರಣ್ಣ ನಿಧನ

Suddi Udaya
error: Content is protected !!