September 6, 2026
ವರದಿಸಂಘ-ಸಂಸ್ಥೆಗಳು

ಎಸ್.ವೈ.ಎಸ್. ಮಡಂತ್ಯಾರ್ ಸರ್ಕಲ್ ವತಿಯಿಂದ ಸ್ವಚ್ಛತಾ ಅಭಿಯಾನ

ಬೆಳ್ತಂಗಡಿ: ಎಸ್ ವೈ ಎಸ್ ರಾಜ್ಯ ಸಮಿತಿಯ ನಿರ್ದೇಶನದಂತೆ ಮಡಂತ್ಯಾರ್ ಎಸ್. ವೈ. ಎಸ್. ಸರ್ಕಲ್ ವತಿಯಿಂದ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು. ಆ ಪ್ರಯುಕ್ತ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮಾಲಾಡಿ ಅಂಗನವಾಡಿ ಕೇಂದ್ರದ ಪರಿಸರವನ್ನು ಸ್ವಚ್ಛ ಗೊಳಿಸಲಾಯಿತು.

ಎಸ್‌ವೈಎಸ್ ಝೋನ್ ನಾಯಕ ಅಯ್ಯೂಬ್ ಮಹಳರಿ ನಾಯಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ಪ್ರಶಾಂತ್ ಸ್ವಾಗತಿಸಿದರು. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ರಶೀದ್ ಮಡಂತ್ಯಾರ್ ಸಂಘಟನೆಯ ಧ್ಯೇಯೋದ್ದೇಶ ತಿಳಿಸಿದರು.ಸರ್ಕಲ್ ಅಧ್ಯಕ್ಷ ನಝೀರ್ ಮದನಿ ಪುಂಜಾಲಕಟ್ಟೆ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆದು, ಶಾಲಾ ಎಸ್‌ಡಿ‌ಎಂಸಿ ಅಧ್ಯಕ್ಷ ಹಕೀಮ್, ಉಪಾಧ್ಯಕ್ಷೆ ಶೋಭಾ, ಎಸ್ ವೈ ಎಸ್ ಸರ್ಕಲ್ ಉಪಾಧ್ಯಕ್ಷ ಅಬ್ಬಾಸ್ ಪಣಕಾಜೆ, ಕಾರ್ಯದರ್ಶಿ ಇಬ್ರಾಹಿಮ್ ಕೆಜಿಎನ್, ದ‌ಅವಾ ಕಾರ್ಯದರ್ಶಿ ಮುಹಮ್ಮದ್ ಝುಹುರಿ, ಸಾಂತ್ವನ ಕಾರ್ಯದರ್ಶಿ ಮುಸ್ತಾಕ್ ಮಡಂತ್ಯಾರ್, ಸಂಘಟನಾ ಕಾರ್ಯದರ್ಶಿ ಶಂಸುದ್ಧೀನ್ ಪಾಂಡವರಕಲ್ಲು, ಎಸ್ ವೈ ಎಸ್ ಕಾರ್ಯಕರ್ತರಾದ ರಝಾಕ್ ಕಾವಲಕಟ್ಟೆ, ರಝಾಕ್ ಧೂಮಲಿಕೆ, ಮುಸ್ತಫಾ ಎಡ್ತೂರು, ಸಿದ್ದೀಕ್ ಉಸ್ತಾದ್ ಕೈಲಾರ್, ಇಲ್ಯಾಸ್ ಪುಂಜಾಲಕಟ್ಟೆ, ಹೈದರ್ ಪುಂಜಾಲಕಟ್ಟೆ , ಹಸೀಬ್ ಹುಸೈನ್ ಕೊಲ್ಪತಬೈಲ್, ಮುಹಮ್ಮದ್ ರಿಕ್ಷಾ, ಅಬ್ಬಾಸ್ ರಿಕ್ಷಾ, ತ್ವಾಹಿರ್ ಮೂಡಯೂರ್, ಹಮೀದ್ ಮೂಡಯೂರ್ , ಕಾಸಿಮ್ ಪೊಮ್ಮಾಜೆ, ಹಂಝ ಪೊಮ್ಮಾಜೆ , ಶಮೀರ್ ಮಾಲಾಡಿ, ರವೂಫ್ ಮಾಲಾಡಿ , ಶಾಹುಲ್ ಹಮೀದ್ ಬರ್ನ, ವಾಸಿಹ್ ಲತೀಫಿ ಮೊದಲಾದವರು ಸಕ್ರೀಯವಾಗಿ ಶ್ರಮ ಸೇವೆ ನೀಡಿದರು.ಶಿಕ್ಷಕ ವಿನೋದ್ ವಂದಿಸಿದರು.

Related posts

ಇಂದು ಆನ್ ಸಿಲ್ಕ್ಸ್ ನಲ್ಲಿ ಸ್ಪೆಷಲ್ ಡಿಸ್ಕೌಂಟ್ ಸೇಲ್: ಪ್ರತೀ ಬ್ರ್ಯಾಂಡೆಡ್ ವಸ್ತ್ರಗಳಿಗೆ ಶೇ.35% ರಿಂದ 50% ಡಿಸ್ಕೌಂಟ್ ಸೇಲ್

Suddi Udaya

ಉಜಿರೆ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯ ಮಾಹಿತಿ ಕಾರ್ಯಗಾರ

Suddi Udaya

ಕೊಯ್ಯೂರು: ಬೆರ್ಕೆ ನಿವಾಸಿ ಚಂದಪ್ಪ ಗೌಡ ಹೃದಯಾಘಾತದಿಂದ ನಿಧನ

Suddi Udaya

ಯಕ್ಷಭಾರತಿಯಿಂದ ಯಕ್ಷಗಾನ ನಾಟ್ಯ ತರಬೇತಿ ಆರಂಭ

Suddi Udaya

ಚಾರ್ಮಾಡಿ ಕತ್ತರಿಗುಡ್ಡೆ ರಸ್ತೆ ಕಾಂಕ್ರಿಟೀಕರಣಗೊಳಿಸಿ ಅಭಿವೃದ್ಧಿಗೊಳಿಸಲು ಆಗ್ರಹಿಸಿ ಎಸ್ ಡಿ ಪಿ ಐ ಮನವಿ

Suddi Udaya

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಅದ್ಧೂರಿಯ ಚಾಲನೆ: ಸುಶಾಸನ’ ಆಡಳಿತ ಕಾಯಾ೯ಲಯ, ‘ಸುರಭಿ’ ಬ್ರಹ್ಮಕಲಶೋತ್ಸವ ಕಾಯಾ೯ಲಯ, ‘ಸಮೃದ್ಧಿ’ ಹಸಿರುವಾಣಿ ಉಗ್ರಾಣ, ‘ಸುಪ್ರಸಾದ’ ಭೋಜನ ಶಾಲೆ, ‘ಸುರುಚಿ’ ಪಾಕಶಾಲೆ ಉದ್ಘಾಟನೆ

Suddi Udaya
error: Content is protected !!