24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿ

ಜು.29ರಿಂದ ಸೆ.14ರವರೆಗೆ ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾಚರಣೆ: ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತಾಚರಣೆ: ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಬೈಂದೂರು ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಜುಲೈ 29ರಿಂದ ಸೆಪ್ಟೆಂಬರ್ 14ರವರೆಗೆ ನಡೆಯಲಿರುವ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ಚಾತುರ್ಮಾಸ್ಯ ವ್ರತಾಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಜು. 20 ರಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ನಡೆಯಿತು.

ಆಮಂತ್ರಣವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಲೋಕಕಲ್ಯಾಣಕ್ಕಾಗಿ ಚಾತುರ್ಮಾಸ್ಯ ವ್ರತಾಚರಣೆ ನಡೆಯುತ್ತಿದ್ದು, ಅದರ ಮೂಲಕ ಜನರಲ್ಲಿ ಧಾರ್ಮಿಕ ಸಂಸ್ಕಾರ ಹಾಗೂ ಆಧ್ಯಾತ್ಮಿಕ ಚಿಂತನೆ ಬೆಳೆಸುವ ಕಾರ್ಯ ನಡೆಯಲಿದೆ. ವ್ರತಾಚರಣೆಯಿಂದ ಆತ್ಮಶಕ್ತಿ ವೃದ್ಧಿಯಾಗುವುದರ ಜೊತೆಗೆ ಸಮಾಜದಲ್ಲಿ ಸನಾತನ ಮೌಲ್ಯಗಳನ್ನು ಬಿತ್ತರಿಸುವ ಕಾರ್ಯವೂ ನಡೆಯಲಿದೆ. ಇಂದಿನ ಯುವ ಸಮುದಾಯಕ್ಕೆ ಸಂಸ್ಕಾರ ಶಿಕ್ಷಣ ಅತ್ಯಗತ್ಯವಾಗಿದ್ದು, ಚಾತುರ್ಮಾಸ್ಯದ ಮೂಲಕ ಅದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.

ಸೆಪ್ಟೆಂಬರ್ 3ರಂದು ಶ್ರೀಗಳ ಪಟ್ಟಾಭಿಷೇಕ ವರ್ಧಂತಿ ಮಹೋತ್ಸವವು ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಲಿದ್ದು, ನವೆಂಬರ್ 25ರಂದು ಹರಿದ್ವಾರ ಶಾಖಾ ಮಠದ ದಶಮಾನೋತ್ಸವ ಸಂಭ್ರಮಾಚರಣೆ ಹರಿದ್ವಾರದಲ್ಲಿ ಜರುಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿರಸಿ ಶಾಸಕ ಭೀಮಣ್ಣ ಟಿ. ನಾಯ್ಕ, ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹಾಗೂ ಕ್ಷೇತ್ರದ ಟ್ರಸ್ಟಿಗಳಾದ ಚಿತ್ತರಂಜನ್ ಮಂಗಳೂರು, ಪೀತಾಂಬರ ಹೇರಾಜೆ ಬೆಳ್ತಂಗಡಿ, ಚಂದ್ರ ಎಸ್.ಕೆ. ಸಾಗರ ಮತ್ತು ಹೆಚ್.ಆರ್. ನಾಯ್ಕ ಕುಮಟಾ,ನಾಗೇಶ ಕುಮಾರ್ ಗೌಡ ಅವರು ಚಾತುರ್ಮಾಸ್ಯ ವ್ರತಾಚರಣೆಯ ಯಶಸ್ಸಿಗೆ ಭಕ್ತರು ಮತ್ತು ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಜಯಕುಮಾರ್ ಸೊರಕೆ ಪುತ್ತೂರು, ಚಿದಾನಂದ ಮೂರ್ತಿ ಮಂಗಳೂರು, ರವಿದಾಸ್ ಬೆಂಗಳೂರು,ಕೆ. ಸಂಜೀವ ಪೂಜಾರಿ ಭಂಟ್ವಾಳ, ರಘುನಾಥ ಮಾಬೆನ್ ಉಡುಪಿ, ಕೇಶವ ಬಂಗೇರ ಕಳಿಯ, ಪ್ರಶಾಂತ್ ಎಂ. ಪಾರೆಂಕಿ, ಪುರುಷೋತ್ತಮ ಡಿ.ಎ. ಧರ್ಮಸ್ಥಳ), ಪಿ. ರಾಜೇಶ್ ಪೂಜಾರಿ ಮೂಡುಕೋಡಿ, ಬೇಬಿ ಕುಂದರ್ ಬಂಟ್ವಾಳ,ಯತೀಶ್ ಸುವರ್ಣ ಕನ್ಯಾಡಿ, ತುಕಾರಾಮ್ ಸಾಲಿಯಾನ್, ಬಾಲಕೃಷ್ಣ ಎ. ಶೆಟ್ಟಿ, ಪಿ. ತಿಮ್ಮಪ್ಪ ಗೌಡ, ದೇವಿಪ್ರಸಾದ್, ಜಯಪ್ರಕಾಶ್ ಬಂಟ್ವಾಳ, ವಕೀಲ ಅನಿಲ್ ಕುಮಾರ್ ಬೆಳ್ತಂಗಡಿ, ಲೋಕೇಶ್ ಶಾಂತಿ,ಪ್ರಕಾಶ್ ದೇಶಿಕೇಂದ್ರ, ಮಹೇಶ್ ಶಾಂತಿ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

Related posts

ಮನ್ ಷ್ಯರ್ ಅಕಾಡಮಿಯ ಕಾಲೇಜು ಉಪಪ್ರಾಂಶುಪಾಲೆ ಗೌತಮಿ ಶರಣ್. ಪಿ. ಆರ್.ಪ್ರಾಂಶುಪಾಲರಾಗಿ ಪದೋನ್ನತಿ

Suddi Udaya

ಶಿಶಿಲ ಶ್ರೀ ದುರ್ಗಾಪರಮೇಶ್ವರಿ ಯುವಕಮಂಡಲದ ವತಿಯಿಂದ ಶ್ರಮದಾನ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ವತಿಯಿಂದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್ ಚೇರ್ ವಿತರಣೆ

Suddi Udaya

ಡಿ.21: ನಾರಾವಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರ ಪ್ರಮಾಣ ವಚನ: ಶಿರ್ಲಾಲು ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

Suddi Udaya

ಬೆಳ್ತಂಗಡಿ ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಅವಿರೋಧ ಆಯ್ಕೆ

Suddi Udaya
error: Content is protected !!