September 6, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಗುರುವಾಯನಕೆರೆ: ಎಕ್ಸೆಲ್ ಕಾಲೇಜು ನೀಟ್ ಟಾಪರ್ ಮೌರ್ಯ ವೈ.ಡಿ.ಗೆ ಅದ್ಧೂರಿ ಸನ್ಮಾನ

ಗುರುವಾಯನಕೆರೆ: ರಾಷ್ಟ್ರಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್-2026’, ರಾಜ್ಯ ಮಟ್ಟದ ‘ಕೆ-ಸಿಇಟಿ’ (KCET) ಹಾಗೂ ‘ಜೆಇಇ ಮೇನ್ಸ್’ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಪ್ರತಿಮ ಸಾಧನೆಗೈದು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಂಸ್ಥೆಗೆ ಕೀರ್ತಿ ತಂದಿರುವ ಹೆಮ್ಮೆಯ ವಿದ್ಯಾರ್ಥಿ ಮೌರ್ಯ ವೈ.ಡಿ. ಅವರನ್ನು ⁠ಎಕ್ಸೆಲ್ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ವತಿಯಿಂದ ಅತ್ಯಂತ ಅಭಿಮಾನ ಪೂರ್ವಕವಾಗಿ ಸನ್ಮಾನಿಸಲಾಯಿತು.

ತ್ರಿವಳಿ ಪರೀಕ್ಷೆಗಳಲ್ಲಿ ಮೌರ್ಯನ ಅಸಾಧಾರಣ ಮುನ್ನಡೆ: ಎಕ್ಸೆಲ್ ನ ಅಗ್ರಗಣ್ಯ ಸಾಧಕ ಮೌರ್ಯ ವೈ.ಡಿ. ದೇಶ ಹಾಗೂ ರಾಜ್ಯ ಮಟ್ಟದ ಮೂರೂ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಸ್ಥಾನ ಪಡೆಯುವ ಮೂಲಕ ತಮ್ಮ ಸರ್ವತೋಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

ನೀಟ್ (NEET UG) ಸಾಧನೆ: ನೀಟ್ ಪರೀಕ್ಷೆಯಲ್ಲಿ ಒಟ್ಟು 720 ಅಂಕಗಳಿಗೆ 673 ಅಂಕಗಳನ್ನು ಗಳಿಸಿ, 99.6691 ಪರ್ಸೆಂಟೈಲ್ ನೊಂದಿಗೆ ಅಖಿಲ ಭಾರತ ಮಟ್ಟದಲ್ಲಿ 271 ನೇ ರ್‍ಯಾಂಕ್ ಮುಡಿಗೇರಿಸಿಕೊಂಡಿದ್ದಾರೆ.*ಕರ್ನಾಟಕ ಸಿಇಟಿ (KCET) ಸಾಧನೆ*: ರಾಜ್ಯ ಮಟ್ಟದ ಕೆ-ಸಿಇಟಿ ಪರೀಕ್ಷೆಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಕ್ಕೆ 75 ನೇ ರ್‍ಯಾಂಕ್ ಪಡೆದು ಸಾಧನೆಗೈದಿದ್ದಾರೆ.*ಜೆಇಇ ಮೇನ್ಸ್ (JEE Mains*): ಜೆ ಇ ಇ ಮೇನ್ಸ್ ಪ್ರವೇಶ ಪರೀಕ್ಷೆಯಲ್ಲೂ 99.6691ಪರ್ಸೆಂಟೈಲ್ ಗಳಿಸಿ ಜಿಲ್ಲಾ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಕೃತಜ್ಞತೆ ಸಲ್ಲಿಸಿದ ಸಾಧಕ: ಸನ್ಮಾನ ಸ್ವೀಕರಿಸಿ ಮಾತನಾಡಿದ ಮೌರ್ಯ ವೈ.ಡಿ., “ಎಕ್ಸೆಲ್ ಸಂಸ್ಥೆಯ ಕಟ್ಟುನಿಟ್ಟಾದ ಶಿಸ್ತುಬದ್ಧ ವಾತಾವರಣ, ಪರಿಣಿತ ಉಪನ್ಯಾಸಕರು ತಡರಾತ್ರಿಯವರೆಗೂ ಲಭ್ಯವಿದ್ದು ನಮ್ಮ ಕಲಿಕೆಯಸಂಶಯ ಪರಿಹರಿಸುತ್ತಿದ್ದ ಪ್ರವೃತ್ತಿ ಮತ್ತು ನಿರಂತರ ಮಾದರಿ ಪರೀಕ್ಷೆಗಳೇ ನನ್ನ ಈ ಬಹುಮುಖ ಯಶಸ್ಸಿಗೆ ಭದ್ರ ಬುನಾದಿಯಾಗಿದೆ.ಎಕ್ಸೆಲ್ ಸಂಸ್ಥೆಯ ಅಧ್ಯಕ್ಷರಿಗೆ, ಪ್ರಾಂಶುಪಾಲರು,ಪ್ರಾಧ್ಯಾಪಕರು, ನಿಲಯ ಪಾಲಕರಿಗೆ ನಾನು ಚಿರಋಣಿ “ಎಂದು ಹೆಮ್ಮೆಯಿಂದ ನುಡಿದರು.

ಮೌರ್ಯ ಅವರೊಂದಿಗೆ ವಿವಿಧ ವಿಭಾಗಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮಿಂಚಿದ ಎಕ್ಸೆಲ್ ಸಾಧಕರನ್ನು ಮುಕ್ತಕಂಠದಿಂದ ಶ್ಲಾಘಿಸಿ, ಗೌರವಿಸಲಾಯಿತು. ಎಕ್ಸೆಲ್ ಕಾಲೇಜಿನ 470ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರಕಾರಿ ವೈದ್ಯಕೀಯ ಸೀಟು ಪಡೆಯಲು ಅವಕಾಶ. ಗಳಿಸಿದ್ದು,ಗುಣಮಟ್ಟದ ಶಿಕ್ಷಣಕ್ಕೆ ಸಂದ ಜಯ ಎಂದು ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.

ಸಾಧಕ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ, ಶಾಲು ಹೊದಿಸಿ ,ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಿದ ಸುಮಂತ್ ಕುಮಾರ್ ಜೈನ್ ಅವರು “ಪ್ರತಿ ವರ್ಷದಂತೆ ಈ ಬಾರಿಯೂ ನಮ್ಮ ಎಕ್ಸೆಲ್ ಸಂಸ್ಥೆಯು ಗುಣಮಟ್ಟದ ಶಿಕ್ಷಣ ದಿಂದ ರಾಷ್ಟ್ರ ಮಟ್ಟದ ತರಬೇತಿಯಲ್ಲಿ ಕರ್ನಾಟಕದಲ್ಲೇ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಪೋಷಕರ ನಂಬಿಕೆ ಹಾಗೂ ಶಿಕ್ಷಕರ ಸಮರ್ಪಣಾ ಭಾವಕ್ಕೆ ಈ ಐತಿಹಾಸಿಕ ಫಲಿತಾಂಶವೇ ಸಾಕ್ಷಿ” ಎಂದು ಪ್ರಶಂಸಿಸಿದರು.

ಅರಮಲೆಬೆಟ್ಟ ಕ್ಯಾಂಪಸ್ ನ ಪ್ರಾಂಶುಪಾಲರಾದ ಡಾ ಪ್ರಜ್ವಲ್, ನೀಟ್ ಸಂಯೋಜಕ ಶ್ರೀನಿಧಿ ರಾಜ್ ಶೆಟ್ಟಿ, ನಿಲಯ ಪಾಲಕ ಅಭಿಜಿತ್,ಆಡಳಿತ ಮಂಡಳಿಯ ಪದಾಧಿಕಾರಿಗಳು, ಮೌರ್ಯ ವೈ ಡಿ ಅವರ ತಂದೆ ದರ್ಶನ್ ವೈ ಎಂ, ತಾಯಿ ಎ ಜೆ ಸುವರ್ಣ, ಎಕ್ಸೆಲ್ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

Related posts

ಮಡಂತ್ಯಾರು ವಲಯದ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya

ರೆಖ್ಯ: ಶ್ರೀಮತಿ ಬಿರ್ಕು ನಿಧನ

Suddi Udaya

ನಾಳ : ತೇರಾ ಬಾಕಿಮಾರು ಗದ್ದೆಯಲ್ಲಿ ನೇಜಿ ನಾಟಿ

Suddi Udaya

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರು ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಧರ್ಮಸ್ಥಳ ಹಾಗೂ ಶಾಂತಿವನ ಭೇಟಿ

Suddi Udaya

ಕಾಯರ್ತಡ್ಕ : ಪುತ್ಯೆ ನಿವಾಸಿ ಮೋಹನ ಗೌಡ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ಸರಕಾರಿ ಪ್ರೌಢಶಾಲೆಯಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ

Suddi Udaya
error: Content is protected !!