September 6, 2026
ತಾಲೂಕು ಸುದ್ದಿಬೆಳ್ತಂಗಡಿವರದಿಸರ್ಕಾರಿ ಇಲಾಖಾ ಸುದ್ದಿ

ಅಭಿವೃದ್ಧಿ ಅಧಿಕಾರಿಗಳಾದ ಸಫಾನ, ಸುಮ ವರ್ಗಾವಣೆ: ಧರ್ಮಸ್ಥಳ ಪಿಡಿಓ ಆಗಿ ನಾಗೇಶ್, ಸುಲ್ಕೇರಿಗೆ ಗೌರಿಶಂಕರ್, ಪಟ್ರಮೆಗೆ ಹೊನ್ನಮ್ಮ, ಮೇಲಂತಬೆಟ್ಟುಗೆ ಜಗದೀಶ್ ನೇಮಕ

ಬೆಳ್ತಂಗ ಡಿ: ತಾಲೂಕಿನ ಪಡಂಗಡಿ, ನೆರಿಯ, ಮಚ್ಚಿನ, ಕಳೆಂಜ ಮತ್ತು ಪಟ್ರಮೆ ಗ್ರಾಮ ಪಂಚಾಯ್ ಅಭಿವೃದ್ಧಿ ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. ಧರ್ಮಸ್ಥಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ನಾಗೇಶ್ ಅವರು ಪುತ್ತೂರು ತಾಲೂಕಿನ ಆರ್ಯಪು ಗ್ರಾ.ಪಂ.ನಿಂದ ವರ್ಗಾವಣೆಗೊಂಡು ಇಲ್ಲಿಗೆ ನೇಮಕಗೊಂಡಿದ್ದಾರೆ.

ನೆರಿಯ ಗ್ರಾ.ಪಂ. ಪಿಡಿಓ ಸುಮ ಎ.ಜೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಕ್ಕೆ ಗ್ರಾ.ಪಂ.ಗೆ ವರ್ಗಾವಣೆಯಾಗಿದ್ದಾರೆ. ಮಚ್ಚಿನ ಗ್ರಾಮ ಪಂಚಾಯತ್ ಪಿಡಿಒ ಗೌರಿಶಂಕರ್ ಸಣಕಲ್ಲು ಸುಲ್ಕೇರಿ ಗ್ರಾ.ಪಂ.ಗೆ ವರ್ಗಾವಣೆಗೊಂಡಿದ್ದಾರೆ. ಪಡಂಗಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಫನಾ ಮುಲ್ಕಿ ತಾಲೂಕಿನ ಕಿಲ್ಪಾಡಿ ಗ್ರಾ.ಪಂ.ಗೆ ವರ್ಗಾವಣೆಯಾಗಿದ್ದಾರೆ. ಕಳೆಂಜ ಗ್ರಾ.ಪಂ.ಪಿಡಿಒ ಹೊನ್ನಮ್ಮ ಪಟ್ರಮೆ ಗ್ರಾ.ಪಂ.ಗೆ, ಮುಲ್ಕಿ ತಾಲೂಕು ಬಳ್ಕುಂಜೆ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಜಗದೀಶ್ ಬೆಳ್ತಂಗಡಿಯ ಮೇಲಂತಬೆಟ್ಟು ಗ್ರಾ.ಪಂ.ಗೆ ವರ್ಗಾವಣೆಗೊಂಡಿದ್ದಾರೆ. ತೆರವುಗೊಂಡ ಸ್ಥಳಗಳಿಗೆ ಅಭಿವೃದ್ಧಿ ಅಧಿಕಾರಿಗಳ ನೇಮಕ ಪ್ರಕ್ರಿಯೆ ಚಾಲ್ತಿಯಲ್ಲಿದೆ.

Related posts

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮುಂಡಾಜೆ ಬಂಟರ ಗ್ರಾಮ ಸಮಿತಿಯಿಂದ ಅಗರಿಯಲ್ಲಿ ಕೆಸರೊಡೊಂಜಿ ದಿನ ಬಂಟೆರ್ ಕಾರ್ಯಕ್ರಮ

Suddi Udaya

ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಸದ್ದು ಗದ್ದಲದೊಂದಿಗೆ ಪ್ರಾರಂಭಗೊಂಡ ಶಿರ್ಲಾಲು ಗ್ರಾಮಸಭೆ

Suddi Udaya

ವೇಣೂರು ನೂತನ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಶೋನಮನ ಕಾರ್ಯಕ್ರಮ

Suddi Udaya
error: Content is protected !!