September 6, 2026
ತಾಲೂಕು ಸುದ್ದಿವರದಿ

ಅಳದಂಗಡಿ ಶ್ರೀ ಸೋಮನಾಥೇಶ್ವರಿ ಮಕ್ಕಳ ಭಜನಾ ಸಮಿತಿ ವತಿಯಿಂದ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ

ಅಳದಂಗಡಿ ಶ್ರೀ ಸೋಮನಾಥೇಶ್ವರಿ ಮಕ್ಕಳ ಭಜನಾ ಸಮಿತಿ ವತಿಯಿಂದ ಏಳರಿಂದ ಹತ್ತನೇ ತರಗತಿವರೆಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಶ್ರೀ ಸೋಮನಾಥೇಶ್ವರಿ ಭಜನಾ ಮಂಡಳಿಯಲ್ಲಿ ಗೌರವಿಸಲಾಯಿತು.

ಮಕ್ಕಳ ಭಜನಾ ಸಮಿತಿಯ ಅಧ್ಯಕ್ಷ ರಘು ದೇವಾಡಿಗರು ಮಾತನಾಡಿ ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿ ಬಗ್ಗೆ ತಿಳಿಸಿದರು. ಭಜನೆಗೂ ಬಂದು ಹೆಚ್ಚು ಅಂಕಗಳನ್ನು ಪಡೆದು ಭಜನಾ ಸಮಿತಿಗೆ ಗೌರವ ತಂದಿದ್ದೀರಿ ಎಂದು ಮಕ್ಕಳನ್ನು ಅಭಿನಂದಿಸಿದರು. ಇನ್ನು ಮುಂದೆ ನಡೆಯುವ ಭಜನೆಗೂ ನಿಮ್ಮ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಮಕ್ಕಳ ಭಜನಾ ಸಮಿತಿ ಕಾರ್ಯದರ್ಶಿ ಹರೀಶ್ ಸಾಲ್ಯಾನ್, ಪದಾಧಿಕಾರಿಗಳಾದ ಇಂದುಧರ್, ಜಯ ಪೂಜಾರಿ, ಶ್ರೀಮತಿ ಅರುಣ ಕುಲಾಲ್ ಉಪಸ್ಥಿತರಿದ್ದರು. ಮಂಜುನಾಥ ಆಚಾರ್ಯ ಅಳದಂಗಡಿ ನಿರೂಪಿಸಿದರು.

Related posts

ಮುಂಡಾಜೆಯಲ್ಲಿ ಯುವವಾಹಿನಿ ಬಿರುವೆರೆ ಗೊಬ್ಬು ಕೆಸರ್ ದ ಕಂಡಡ್ ಕಾರ್ಯಕ್ರಮ

Suddi Udaya

ಉಜಿರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುನರ್ ನಿರ್ಮಾಣ ಯಶೋನಮನ ಶೀರ್ಷಿಕೆಯಡಿಅಭಿವೃದ್ಧಿ ಕಾರ್ಯಗಳ ಹಸ್ತಾಂತರ

Suddi Udaya

ಬಂದಾರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ದಿನೇಶ್ ಖಂಡಿಗ ಆಯ್ಕೆ

Suddi Udaya

ಇಂದಬೆಟ್ಟು ಗ್ರಾಮದ ಸರ್ವೆ ನಂಬರ್ 234/ ರಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ ಜಾಗದ ಅತಿಕ್ರಮಣ : ತೆರವುಗೊಳಿಸಿದ ಬೆಳ್ತಂಗಡಿ ತಹಶೀಲ್ದಾರ್.

Suddi Udaya

ಕೈಲಾರು ರಾಜಗೋಪಾಲ್ ಭಟ್ ರಿಂದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಗೆ ವಾಸ್ತು ಗಿಡ ಸಮರ್ಪಣೆ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!