September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿ ಬಂಟರ ವಲಯ ಸಮಿತಿಯಿಂದ ‘ಬಂಟೆರ್ನ ಆಟಿದ-ಕೂಟ’

ಅಳದಂಗಡಿ: ಅಳದಂಗಡಿ ಬಂಟ ಸಮಾಜದ ಆಟಿದ ಕೂಟವು ಅಳದಂಗಡಿ ದೀಪಾ ಸಭಾಭವನ ಯಲ್ಲಿ ಜು.19ರಂದು ವಿಜ್ರಂಭಣೆಯಿಂದ ನಡೆಯಿತು.

ಭಾಸ್ಕರ ಶೆಟ್ಟಿ ಕಾರ್ಯಾಣ, ಮತ್ತು ಸಹಕಾರಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ವೇಳೆ ತಾಲೂಕಿನ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ ಶೆಟ್ಟಿ ನೊಚ್ಚರವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಪ್ರಕಾಶ್ ಶೆಟ್ಟಿಯವರು ಸಮುದಾಯದ ಜೊತೆಗಿರುವ ಅನುಬಂಧ, ಆರ್ಥಿಕವಾಗಿ ಹಿಂದುಳಿದ ಸ್ವಜಾತಿ ಬಾಂಧವರ ಮೇಲಿನ ಅನುಕಂಪ, ಸುಧಾರಣೆಗಾಗಿ ಕೈಗೊಳ್ಳಬೇಕಾದ ಅನುಷ್ಠಾನಗಳ ಬಗ್ಗೆ ಅನುಸರಿಸಬೇಕಾದ ಅನುಭವವನ್ನು ಹಂಚಿಕೊಂಡರು.

ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅಂಕಗಳಿಸಿ ಪೋಷಕರಿಗೆ, ಕಲಿತ ವಿದ್ಯಾ ಮಂದಿರಕ್ಕೆ ಹಾಗೂ ಬಂಟ ಸಮುದಾಯಕ್ಕೆ ಕೀರ್ತಿ ತಂದ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಹಾಗೂ ಸಭಾ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ ಆಶ್ರಯದಾತರನ್ನು,ಭೋಜನ ವ್ಯವಸ್ಥೆಯನ್ನು ನಿರ್ವಹಿಸಿದ ಅನ್ನದಾತರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

‘ಬಂಟೆರ್ನ ಆಟಿದ-ಕೂಟ’ವು ಸಾಂಘಿಕ ಮನೋಭಾವ, ಜನ ಸಂಪರ್ಕ, ಸೃಜನಶೀಲ ಕಾರ್ಯದಕ್ಷತೆ, ಗಣನೀಯ ಪ್ರಮಾಣದಲ್ಲಿ ಸಮುದಾಯದ ಸದಸ್ಯರನ್ನು ಒಟ್ಟುಗೂಡಿಸುವ ನಿಲುವಿನಲ್ಲಿ ಯಶಸ್ವಿಯಾಗಿದೆ. ಬಂಟ ಸಮುದಾಯದ ಮಾತೆ – ಭಗಿನಿಯರ ಸ್ವಯಂ ರಚಿತ ಮೂವತ್ತು ಬಗೆಯ ಶುಚಿ ರುಚಿಯಾದ ತಿನಿಸುಗಳು ಘಮಘಮಿಸುತ್ತಿದ್ದವು.

ಈ ಸಂದರ್ಭದಲ್ಲಿ ವಲಯದ ಪದಾಧಿಕಾರಿಗಳು ಹಾಗೂ ಬಂಟ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ವಿಧ್ಯಾರ್ಥಿಗಳಿಂದ ಅದ್ವಿತೀಯ ಸಾಧನೆ: 593 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣ, ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದುಕೊಂಡು ಸಾಧನೆ: ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್

Suddi Udaya

ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಘಟಕದ ಉಪಾಧ್ಯಕ್ಷರಾಗಿ ಬಿ.ಅಶ್ರಫ್ ನೆರಿಯಾ ಆಯ್ಕೆ

Suddi Udaya

ಸೂಳಬೆಟ್ಟು ಬರಾಯ ಶ್ರೀಗೋಪಾಲಕೃಷ್ಣ ದೇವರ ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ಪೂರ್ವಭಾವಿ ಪ್ರಾರ್ಥನೆ

Suddi Udaya

ಧರ್ಮಸ್ಥಳ: ಹೂತ ಮೃತದೇಹಗಳ ಅವಶೇಷ ಹೊರತೆಗೆಯುವ ಕಾರ್ಯ ಪ್ರಾರಂಭ :ಬಿಗಿ ಪೊಲೀಸ್ ಬಂದೋಬಸ್ತ್

Suddi Udaya

ಚೊಚ್ಚಲ ಪ್ರಯತ್ನದಲ್ಲೇ ಗಮನ ಸೆಳೆದ ವಿದ್ವತ್ ನ NEET ಫಲಿತಾಂಶ: ಪ್ರತಿಷ್ಠಿತ AIIMS ಪ್ರವೇಶಾತಿಗೆ ಬೇಕಾದ ಅರ್ಹತೆ ಪಡೆದ ವಿದ್ಯಾರ್ಥಿಗಳು

Suddi Udaya

ಉಜಿರೆ: ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಘಟಿಕೋತ್ಸವ ಹಾಗೂ ವಿದ್ಯಾರ್ಥಿನಿಯರ ಸ್ವಾಗತ ಕಾರ್ಯಕ್ರಮ

Suddi Udaya
error: Content is protected !!