September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿವರದಿ

‘ಕರ್ಂಗೋಲು ಕಂಗುಲು’ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ‘ಕುದ್ಕಬಚ್ಚಿರೆ’ ಕಥಾ ಸಂಕಲನ ಬಿಡುಗಡೆ

ಮಂಗಳೂರು : ಕಡಲ್ ಮಾಯಿಲ್ ಫಿಲ್ಮ್ ಮತ್ತು ಕಡಲ್ ಸ್ಟುಡಿಯೋಸ್, ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಅಂಡ್ ಎಜುಕೇಶನ್ (ರಿ) ಸಹಭಾಗಿತ್ವದಲ್ಲಿ ಕುದ್ಕಬಚ್ಚಿರೆ ತುಳು ಕತೆ ಪುಸ್ತಕ ಹಾಗೂ ಸಾಗರ್ ಬನ್ನಂಜೆ ಮತ್ತು ಜಯಂತ್ ನಿಟ್ಟಡೆ ನಿರ್ದೇಶನ/ ನಿರ್ಮಾಣದ ‘ಕಂಗುಲು-ಕರ್ಂಗೋಲು’ (ಮೂಲನಿವಾಸಿ ಆಚರಣೆ) ಡಾಕ್ಯುಮೆಂಟರಿ ಸಿನಿಮಾ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಸಂದೇಶ ಫೌಂಡೇಶನ್ ಫಾರ್ ಎಜುಕೇಶನ್ (ರಿ) ನಂತೂರು ಇದರ ಸಭಾಂಗಣದಲ್ಲಿ
ಜು.19ರಂದು ನೆರವೇರಿತು.

ಜನಪದ ಮತ್ತು ರಂಗಭೂಮಿ ಕಲಾವಿದ ಶೀನಾ ನಾಡೋಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಸಂದೇಶ ಫೌಂಡೇಶನ್, ನಿರ್ದೇಶಕರಾದ ಫಾ.ರೋಶನ್ ರೋಸರಿಯೋ ಮತ್ತು ತುಳು ಸಾಹಿತಿ ಅತ್ರಾಡಿ ಅಮೃತಾ ವಿವಿಧ ಬರಹಗಾರರು ಬರೆದ ‘ಕುದ್ಕಬಚ್ಚಿರೆ’ ತುಳು ಕಿರುಗತಾ ಸಂಕಲನವನ್ನು‌ ಬಿಡುಗಡೆಗೊಳಿಸಿ ಮಾತನಾಡಿ ಶುಭ ಹಾರೈಸಿದರು.
ಪ್ರದರ್ಶನಗೊಂಡ ಸಾಕ್ಷ್ಯ ಚಿತ್ರವನ್ನು ವೀಕ್ಷಿಸಿದ ತುಳು ಜನಪದ ವಿದ್ವಾಂಸರಾದ ಡಾ.ವಾಸುದೇವ ಬೆಳ್ಳೆ, ಡಾ.ಯದುಪತಿ ಗೌಡ,
ಕೆ.ಕೆ. ಪೇಜಾವರ , ಪಾಂಗಳ ಬಾಬು ಕೊರಗ ಮುಂತಾದವರು ವಿಶ್ಲೇಷಣಾ ಮಾತುಗಳನ್ನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲ ಕಾಲ ಚಿಂತನಾರ್ಹ ಸಂವಾದ ನಡೆಯಿತು.

ಸಂವಾದದಲ್ಲಿ ಸಾಕ್ಷ್ಯಚಿತ್ರ ತಂಡದ ಸೃಜನಶೀಲ ಸಾಧನೆಯ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು. ಆಯ್ದ ಕತಾ ವಿಜೇತರಿಗೆ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಮೆಚ್ಚುಗೆ ಪಡೆದ ಕತೆಗಾರರಿಗೆ ಬಹುಮಾನ ವಿತರಿಸಲಾಯಿತು. ಸಾಗರ್ ಬನ್ನಂಜೆ ಮತ್ತು ಜಯಂತ್ ನಿಟ್ಟಡೆ ಸಾಕ್ಷ್ಯಚಿತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಸಾಗರ್ ಸ್ಟುಡಿಯೋಸ್ ಹಾಗೂ ಮಾಯಿಲು ಫಿಲ್ಮ್ಸ್ ಜುಗುಲ್ ಬಂಧಿ ಪಯಣದಲ್ಲಿ ಎರಡು ಮೂಲನಿವಾಸಿ ಸಮುದಾಯಗಳು ಉಳಿಸಿಕೊಂಡು ಬಂದಿರುವ ಪರಸ್ಪರ ಸಾಮ್ಯತೆಯೊಂದಿಗೆ ವಿಭಿನ್ನತೆಯನ್ನೂ ಕಾಪಾಡಿಕೊಂಡು ಬಂದಿರುವ ಆರಾಧನಾ ಹಿನ್ನೆಯುಳ್ಳ ಸಾಂಸ್ಕೃತಿಕ, ಸಾಂಪ್ರದಾಯಿಕ ಮತ್ತು ಜನಪದ ಆಚರಣೆಗಳ ಸೊಗಡುತನವನ್ನು ಶೋಧಿಸಿ ಯಥಾಸ್ಥಿತಿಯಾಗಿ ಅಷ್ಟೇ ಅದ್ಭುತವಾಗಿ ಪೋಣಿಸಿ ಕಂಗುಲು-ಕರ್ಂಗೋಲು ಸಾಕ್ಷ್ಯಚಿತ್ರವನ್ನು ದೃಶ್ಯ ಮತ್ತು ಧ್ವನಿಗಳಲ್ಲಿ ಸೆರೆ ಹಿಡಿದು ಅಧ್ಯಯನ ಯೋಗ್ಯವಾಗಿ ಪ್ರಸ್ತುತಪಡಿಸಿರುವುದು ಅಭಿನಂದನಾರ್ಹವಾಗಿದೆ.
ಈ ಸಾಕ್ಷ್ಯಚಿತ್ರವನ್ನು ನಿರ್ದೇಶನ ಮಾಡಿದವರು ಸಾಧನೆಯ ಉತ್ಸಾಹವನ್ನು ನರ ನಾಡಿಗಳಲ್ಲಿ ಮೈಗೂಡಿಸಿಕೊಂಡಂತಿರುವ
ಸಾಗರ್ ಬನ್ನಂಜೆ ಜಯಂತ್ ನಿಟ್ಟಡೆ. ಛಾಯಾಗ್ರಹಣ ಹಾಗೂ ಸಂಕಲನದಲ್ಲಿ ಸಾಥ್ ನೀಡಿದವರು ಶಿಪಪ್ರಸಾದ್ ಮಣಿಪಾಲ, ಪ್ರದೀಪ್ ಗರ್ಡಾಡಿ ಹಾಗೂ ಅಧ್ಯಯನ ತಂಡದಲ್ಲಿ ಪದ್ಮಾವತಿ ಇಂದಬೆಟ್ಟು , ರೋಶನ್ ರೆಂಕೆದಗುತ್ತು ಅಭ್ಯುದಯ ಅರ್ವ ಮುಂತಾದವರು ಉಪಸ್ಥಿತರಿದ್ದರು. ಪೂರ್ಣಿಮಾ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ವೀಲ್ ಚೇರ್ ವಿತರಣೆ 

Suddi Udaya

ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಪ್ರಯುಕ್ತ ಉಜಿರೆ ಶ್ರೀ ಜನಾರ್ಧನ ದೇವಸ್ಥಾನದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಶ್ರೀ ದೇವರಿಗೆ ವಿಶೇಷ ಪೂಜೆ

Suddi Udaya

ನಾವೂರು ಗ್ರಾಮ ಪಂಚಾಯತ್‌ನಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾದ್ಯಮ (ರಾಜ್ಯ ಪಠ್ಯಾಕ್ರಮ) ಶಾಲೆಯಲ್ಲಿ ಹೊಸ ವರ್ಷ ಆಚರಣೆ

Suddi Udaya

ಶಿಶಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ನಾಳ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ತಾಳಮದ್ದಳೆ

Suddi Udaya
error: Content is protected !!