September 6, 2026
Uncategorized

ಬೆಳ್ತಂಗಡಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಪದಾಧಿಕಾರಿಗಳ ಪದಗ್ರಹಣ: ನೂತನ ಸಮಿತಿ ಅಧಿಕಾರ ಸ್ವೀಕಾರ

ಬೆಳ್ತಂಗಡಿ: ದುಡಿಯುವ ಕೈಗಳಿಗೆ ನ್ಯಾಯ ಎಂಬ ಘೋಷಣೆಯಡಿ ಕಾರ್ಯನಿರ್ವಹಿಸುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಬೆಳ್ತಂಗಡಿ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜು.19ರಂದು ಬೆಳ್ತಂಗಡಿಯ ಜಮಿಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ SDTU ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಸಾಲ್ಮರ, ಕಾರ್ಮಿಕ ಸಂಘಟನೆಗಳ ಅಗತ್ಯತೆ, ಕಾರ್ಮಿಕರ ಹಕ್ಕುಗಳ ರಕ್ಷಣೆ ಹಾಗೂ SDTU ಸಂಘಟನೆಯ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.

SDTU ರಾಜ್ಯ ಪ್ರಧಾನ ಕಾರ್ಯದರ್ಶಿ ಸಲೀಮ್ ಗುರುವಾಯನಕೆರೆ ಮಾತನಾಡಿ, ಆಟೋ ಚಾಲಕ-ಮಾಲಕರಿಗೆ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳು ಹಾಗೂ ಅವುಗಳನ್ನು ಪಡೆದುಕೊಳ್ಳುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ SDTU ಜಿಲ್ಲಾ ಉಪಾಧ್ಯಕ್ಷ ಪಿಲಿಪ್ ಹೆನ್ರಿ ಡಿಸೋಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಮ್ ಆಲಾಡಿ, ಬಿ.ಎಮ್.ಬಿ ಜೀತೋ ಚಾಲಕ-ಮಾಲಕರ ಸಂಘ (ಬಿ.ಸಿ.ರೋಡ್) ಅಧ್ಯಕ್ಷ ರಫೀಕ್ ಕನ್ನಡಿಕಟ್ಟೆ, ಕಾರ್ಯದರ್ಶಿ ಗುಣಕರ ಪೂಜಾರಿ, SDTU ಜಿಲ್ಲಾ ಸಮಿತಿ ಸದಸ್ಯ ಹಮೀದ್ ಕೆ.ಎಸ್., SDTU ಆಟೋ ಯೂನಿಯನ್ ಗುರುವಾಯನಕೆರೆ ಘಟಕದ ಅಧ್ಯಕ್ಷ ಹೈದರ್ ಹಾಗೂ ಉಜಿರೆ ಘಟಕದ ಅಧ್ಯಕ್ಷ ಸಲೀಮ್ ಕುಂಟಿನಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ SDTU ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಲೀಮ್ ಗುರುವಾಯನಕೆರೆ ಹಾಗೂ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಸಾಲ್ಮರ ಅವರನ್ನು ಬೆಳ್ತಂಗಡಿ ತಾಲೂಕು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಬಳಿಕ SDTU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಮ್ ಆಲಾಡಿ ಅವರು 2026–29ನೇ ಸಾಲಿನ SDTU ಬೆಳ್ತಂಗಡಿ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳನ್ನು ಘೋಷಿಸಿದರು.

ಅಧ್ಯಕ್ಷರಾಗಿ ಆರಿಫ್ ಉಜಿರೆ, ಉಪಾಧ್ಯಕ್ಷರಾಗಿ ಬಶೀರ್ ಅತ್ತಾಜೆ, ಕಾರ್ಯದರ್ಶಿಯಾಗಿ ಇಕ್ಬಾಲ್ ಪಣಕಜೆ, ಜೊತೆ ಕಾರ್ಯದರ್ಶಿಯಾಗಿ ಸಿರಾಜ್ ಬಾಬ, ಕೋಶಾಧಿಕಾರಿಯಾಗಿ ಅಬ್ದುಲ್ಲಾ ಗುರುವಾಯನಕೆರೆ, ಹಾಗೂ ಇದರೊಂದಿಗೆ 8 ಕಾರ್ಯಕಾರಿ ಸಮಿತಿ ಸದಸ್ಯರನ್ನು ಒಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು. ನಂತರ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಮರ್ಶದ್ ನಿರೂಪಿಸಿದರು. ಇಕ್ಬಾಲ್ ಪಣಕಜೆ ಸ್ವಾಗತಿಸಿ, ಬಶೀರ್ ಉಜಿರೆ ವಂದಿಸಿದರು.

Related posts

ಬೆಳಾಲ್ ಮಂಜನೊಟ್ಟುಉರೂಸ್ ಮುಬಾರಕ್:ಪೋಸ್ಟರ್ ಬಿಡುಗಡೆಗೊಳಿಸಿ ಚಾಲನೆ

Suddi Udaya

ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಹಾಗೂ ಪ್ರಶಿಕ್ಷಣ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಆಟಿಡೊಂಜಿ ದಿನ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಶಿಶಿಲ ಗ್ರಾ.ಪಂ. ಪ್ರಭಾರ ಪಂ.ಅ. ಅಧಿಕಾರಿಯಾಗಿ ದಿನೇಶ್ ಅಧಿಕಾರ ಸ್ವೀಕಾರ

Suddi Udaya

ಸಂಪೂರ್ಣ ಹಾಳಾದ ಧರ್ಮಸ್ಥಳ-ಮುಳಿಕ್ಕಾರು ರಸ್ತೆ: ಶಾಲಾ ಮಕ್ಕಳು ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣ, ಅಲ್ಲಲ್ಲಿ ಹೂತು ಹೋಗುವ ವಾಹನಗಳು

Suddi Udaya
error: Content is protected !!