September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿಸರ್ಕಾರಿ ಇಲಾಖಾ ಸುದ್ದಿ

ಚಿನ್ನಯ್ಯ ಹೈಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿ ವಜಾ

ಬೆಂಗಳೂರು : ಧರ್ಮಸ್ಥಳ ದೇವಸ್ಥಾನದ ವಿರುದ್ಧ 200 ಕೋಟಿ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿ ಚಿನ್ನಯ್ಯ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಜು.22 ರಂದು ವಜಾಗೊಳಿಸಿದೆ. ಪ್ರಕರಣದ ವಿಚಾರಣೆ ವೇಳೆ, ಅರ್ಜಿದಾರರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂಬ ಅಭಿಪ್ರಾಯವನ್ನೂ ನ್ಯಾಯಾಲಯ ವ್ಯಕ್ತಪಡಿಸಿದೆ.

ಧರ್ಮಸ್ಥಳ ಗ್ರಾಮದಲ್ಲಿ ತಾನು ಕಾನೂನು ಬಾಹಿರವಾಗಿ ಹಲವು ಮೃತದೇಹಗಳನ್ನು ಹೂತು ಹಾಕಿರುವುದಾಗಿ ತಲೆಬುರುಡೆಯೊಂದಿಗೆ ನ್ಯಾಯಾಲಯಕ್ಕೆ ಬಂದು ಹೇಳಿಕೆ ನೀಡಿದ್ದ ಚಿನ್ನಯ್ಯ ಎಸ್.ಐ.ಟಿ ತನಿಖೆಯ ಬಳಿಕ ತಾನು ಸುಳ್ಳು ಹೇಳುತ್ತಿರುವುದಾಗಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿ ಜೈಲು ಸೇರಿದ್ದ ಇದಾದ ಬಳಿಕ ಆತ ಹೈಕೋರ್ಟ್ ಗೆ ಈ ಅರ್ಜಿ ಸಲ್ಲಿಸಿದ್ದ. ಚಿತ್ರದುರ್ಗದ ಸಾಮಾಜಿಕ ಕಾರ್ಯಕರ್ತೆ ರಮಾ ನಾಗರಾಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.

ವಿಚಾರಣೆ ವೇಳೆ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಕೂಡ ನ್ಯಾಯಾಲಯಕ್ಕೆ ತನ್ನ ತನಿಖೆ ಪೂರ್ಣಗೊಂಡಿದ್ದು, ಅಂತಿಮ ವರದಿಯನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ, ಚಿನ್ನಯ್ಯ ಮಾಡಿರುವ ಆರೋಪಗಳಿಗೆ ಎಸ್‌ಐಟಿ ವಿರೋಧವನ್ನೂ ವ್ಯಕ್ತಪಡಿಸಿದೆ.

ಚಿನ್ನಯ್ಯ ತನ್ನ ಅರ್ಜಿಯಲ್ಲಿ, ನಟ ಪ್ರಕಾಶ್ ರಾಜ್ ಹಾಗೂ ಸಾಮಾಜಿಕ ಕಾರ್ಯಕರ್ತೆ ರಮಾ ನಾಗರಾಜ್ ಸೇರಿದಂತೆ ಕೆಲವರು 200 ಕೋಟಿ ಹಣಕಾಸಿನ ನೆರವಿನೊಂದಿಗೆ ಧರ್ಮಸ್ಥಳ ದೇವಸ್ಥಾನಕ್ಕೆ ಕಳಂಕ ತರುವ ಉದ್ದೇಶದಿಂದ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ, ಗಿರೀಶ್ ಮಟ್ಟೆಣ್ಣವರ ಹಾಗೂ ಮಹೇಶ್‌ ತಿಮರೋಡಿ ತಮ್ಮ ಮೇಲೆ ಒತ್ತಡ ಹೇರಿ ಹೇಳಿಕೆ ನೀಡಿಸಿದ್ದಾರೆ ಎಂದು ಸಹ ದೂರಿದ್ದರು.

ರಮಾ ನಾಗರಾಜ್ ಪರ ಹಿರಿಯ ವಕೀಲೆ ವೃಂದಾ ಗೋವರ್, ವಕೀಲ ನಿತಿನ್, ಹಾಗೂ ಹಿರಿಯ ವಕೀಲ ಬಾಲನ್ ಅವರ ತಂಡ ಜಯಂತ್ ಟಿ. ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಪ್ರಕರಣದ ಕುರಿತು ಹೈಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ, ಚಿನ್ನಯ್ಯ ಸಲ್ಲಿಸಿದ್ದ 200 ಕೋಟಿ ಷಡ್ಯಂತ್ರದ ಆರೋಪಗಳ ಅರ್ಜಿಯನ್ನು ವಜಾಗೊಂಡಿದೆ.

Related posts

ಕಾಯರಡ್ಕ ನಿವಾಸಿ ಮೋಹನ್ ನಾಯಕ್ ನಿಧನ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ ಗೈಡ್ ಸಂಸ್ಥಾಪಕರ ದಿನ ಹಾಗೂ ದ್ವಜ ದಿನಾಚರಣೆ

Suddi Udaya

ಕರಿಮಣೇಲು : ಮರೋಡಿ ಬೆಳ್ಳಿಬೀಡು ಬಸದಿಯ ಅನುವಂಶಿಕ ಆಡಳಿತ ಮೊಕೇಸ್ತರ ಕೆ. ಹೇಮರಾಜ್ ರವರಿಂದ ತಿಮ್ಮಣಬೆಟ್ಟು ಸ.ಉ.ಹಿ.ಪ್ರಾ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಸಮಾಜ ಸೇವಕ ಡಾ.ರವಿ ಪೂಜಾರಿ ಕಕ್ಕೆಪದವುರವರಿಗೆ ಒಳಿದು ಬಂದ ಸಮಾಜ ರತ್ನ ಪ್ರಶಸ್ತಿ

Suddi Udaya

ಸವಣಾಲು ಅ.ಹಿ.ಪ್ರಾ. ಶಾಲೆಗೆ ಮೇಲಂತಬೆಟ್ಟು ಗ್ರಾ.ಪಂ. ವತಿಯಿಂದ ಪುಸ್ತಕ ಹಾಗೂ ಪೀಠೋಪಕರಣಗಳ ಉದ್ಘಾಟನೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಮೆಡಿಕಲ್ ಯೂನಿರ್ವಸಿಟಿ ಉಪಕುಲಪತಿ ಭೇಟಿ

Suddi Udaya
error: Content is protected !!