September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್.ಡಿ.ಎಂ ಕಾಲೇಜಿನಲ್ಲಿ ‘ಸಿಗ್ಮಾ’ ಅಸೋಸಿಯೇಷನ್ ಉದ್ಘಾಟನೆ

ಉಜಿರೆ: “ದೈನಂದಿನ ಜೀವನದ ಸರಳ ವ್ಯಾಪಾರ-ವಹಿವಾಟಿನಿಂದ ಹಿಡಿದು ಬಾಹ್ಯಾಕಾಶ ತಂತ್ರಜ್ಞಾನದವರೆಗೆ ಪ್ರತಿಯೊಂದು ರಂಗದಲ್ಲೂ ಗಣಿತದ ಪಾತ್ರ ಅತ್ಯಂತ ಅನಿವಾರ್ಯವಾಗಿದೆ,” ಎಂದು ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯದ E&C ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಮಿತ್ ಕೆ. ಜೈನ್ ಹೇಳಿದರು.

ಅವರು ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಗಣಿತ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ಸಿಗ್ಮಾ’ ಅಸೋಸಿಯೇಷನ್-ನ ಉದ್ಘಾಟನೆ ಮಾಡಿ ನಂತರ “ಖರೀದಿಯಿಂದ ಬಾಹ್ಯಾಕಾಶ ಎಂಜಿನಿಯರಿಂಗ್‌ವರೆಗೆ ಗಣಿತದ ಪಾತ್ರ” ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ನೀಡಿದರು.

ಈ ವೇಳೆ ದೈನಂದಿನ ಜೀವನದಲ್ಲಿ ಗಣಿತದ ಅನ್ವಯಿಕತೆ, ತಾಂತ್ರಿಕ ಪ್ರಗತಿಯಲ್ಲಿ ಅದರ ಕೊಡುಗೆ ಹಾಗೂ ಗಣಿತ ಕಲಿಕೆಯಿಂದ ದೊರೆಯುವ ಉದ್ಯೋಗಾವಕಾಶಗಳ ಕುರಿತು ಪ್ರಾಯೋಗಿಕ ಉದಾಹರಣೆಗಳೊಂದಿಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.


ಇ-ಮ್ಯಾಗಝಿನ್ ಬಿಡುಗಡೆ : ಇದೇ ಸಂದರ್ಭದಲ್ಲಿ ಗಣಿತ ವಿಭಾಗದ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ ಹಾಗೂ ಗಣಿತಾಸಕ್ತಿಯಿಂದ ಸಿದ್ಧಪಡಿಸಿದ ಇ- ಮ್ಯಾಗಝಿನ್ ಹಾಗೂ ಭಿತ್ತಿ ಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣಿತ ವಿಭಾಗದ ಮುಖ್ಯಸ್ಥ ಹಾಗೂ ಕಾಲೇಜಿನ ಪರೀಕ್ಷಾಂಗದ ಕುಲಸಚಿವರಾದ ಗಣೇಶ್ ನಾಯಕ್ ಬಿ. ವಹಿಸಿದ್ದರು. ವಿದ್ಯಾರ್ಥಿನಿ ಕೃತಿ ಪ್ರಾರ್ಥಿಸಿದರು. ಶಿಲ್ಪಾ ಸ್ವಾಗತಿಸಿ, ವಿದ್ಯಾರ್ಥಿನಿ ನಮ್ರತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

ನಾಲ್ಕೂರು: ಗಾಳಿ ಮಳೆಗೆ ಬಾಕ್ಯರಡ್ಡದಲ್ಲಿ ಹಟ್ಟಿ ಕುಸಿತ

Suddi Udaya

ಅಗ್ನಿವೀರ್ ಜಿಡಿ ಹುದ್ದೆಗೆ ಆಯ್ಕೆಯಾದ ಗುರುಕಿರಣ್ ರವರಿಗೆ ಶ್ರೀ ರಾಮ್ ಫ್ರೆಂಡ್ಸ್ ಬಾಜಾರು ವತಿಯಿಂದ ಸನ್ಮಾನ

Suddi Udaya

ಕೊಕ್ಕಡ: ಮಜ್ದೂರ್ ಸಂಘದ ಕೊಕ್ಕಡ ವಲಯದ ನೂತನ ಕಛೇರಿಯ ಉದ್ಘಾಟನೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

Suddi Udaya

ಬೆದ್ರಬೆಟ್ಟು ರಿಫಾಯಿಯ್ಯ ಜುಮಾ ಮಸ್ಜಿದ್‌ನಲ್ಲಿ ಬಕ್ರೀದ್ ಆಚರಣೆ

Suddi Udaya

ಪ್ರಾಣಿಗಳ ಹತ್ಯೆ ನಿಷೇಧ ಕಟ್ಟುನಿಟ್ಟಾಗಿ ಪಾಲಿಸಲು ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡದಿಂದ ಬೆಳ್ತಂಗಡಿ ಪೋಲೀಸ್ ಠಾಣೆಗೆ ಮನವಿ

Suddi Udaya
error: Content is protected !!