26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ವರದಿಸಂಘ-ಸಂಸ್ಥೆಗಳು

ಪ್ರಾಣಿಗಳ ಹತ್ಯೆ ನಿಷೇಧ ಕಟ್ಟುನಿಟ್ಟಾಗಿ ಪಾಲಿಸಲು ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡದಿಂದ ಬೆಳ್ತಂಗಡಿ ಪೋಲೀಸ್ ಠಾಣೆಗೆ ಮನವಿ

ಬೆಳ್ತಂಗಡಿ: ಬಕ್ರೀದ್ ಮತ್ತಿತರ ಹಬ್ಬ ಸಂದರ್ಭಗಳಲ್ಲಿ ಜಾನುವಾರು ಮತ್ತು ಇತರೆ ಪ್ರಾಣಿಗಳ ಹತ್ಯೆ ನಿಷೇಧವಿದ್ದು ಅದನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲು ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡದಿಂದ ಬೆಳ್ತಂಗಡಿ ಪೋಲೀಸ್ ಠಾಣೆಗೆ ಜೂ.5ರಂದು ಮನವಿ ನೀಡಲಾಯಿತು.

ಮನವಿಯಲ್ಲಿ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ ಜಾರಿಯಲ್ಲಿದ್ದು ಅದರ ಪ್ರಕಾರ ಕುರ್ಬಾನಿಗೆ (ಯಾವುದೇ ರೀತಿಯ ಹತ್ಯೆ) ನಿಷೇಧವಿದೆ. ಹಾಗೂ ಕುರ್ಬಾನಿಗೆ ಜಾನುವಾರು ಸಾಗಾಟವೂ ಶಿಕ್ಷಾರ್ಹ ಅಪರಾಧವಾಗಿದೆ. ಕುರ್ಬಾನಿ ಕೊಟ್ಟ ಸ್ಥಳವನ್ನು ಸರಕಾರ ಮುಟ್ಟುಗೋಲು ಮಾಡಲು ಅವಕಾಶವಿದೆ. ರಾಜ್ಯದಲ್ಲಿ ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯಿದೆ ೧೯೫೯ ತಿದ್ದುಪಡಿ 1975 ಇದರ ಪ್ರಕಾರವೂ ಜಾನುವಾರು ಬಲಿ (ಕುರ್ಬಾನಿ) ನಿಷೇಧವಿರುತ್ತದೆ.
ಸುಪ್ರೀಂ ಕೋರ್ಟ್ WP (Civil) 309:2003 ದಿನಾಂಕ 30.01.2014 06.01.2009 WP 1443 / 2008 ಹಾಗೂ ಕಾಲ ಕಾಲಕ್ಕೆ ಸರಕಾರ ವಿವಿಧ ಆದೇಶಗಳಂತೆ ರಾಜ್ಯದಲ್ಲಿ ಜಾನುವಾರುಗಳ ಕುರ್ಬಾನಿ ಕಟ್ಟುನಿಟ್ಟಾಗಿ ತಡೆಯಲು ನಾವು ಮನವಿ ಮಾಡುತ್ತಿದ್ದೇವೆ. ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಜಾನುವಾರು ಸಾಗಾಟವಾಗದಂತೆ ನಾಕಾಬಂದಿ ಹಾಕಬೇಕು. ಕಿವಿಯೋಲೆ ಇಲ್ಲದ ಜಾನುವಾರುಗಳನ್ನು ಸಾರ್ವಜನಿಕ ಜಾಗದಲ್ಲಿ ಶೇಖರಿಸಿ ಇಡದಂತೆ, ಮೇಯಲು ಬಿಡದಂತೆ ಸೂರ್ಯಾಸ್ತದಿಂದ ಸೂರ್ಯೋದಯವರೆಗೆ ಕಾಲ್ನಡಿಗೆಯಲ್ಲಿ ಜಾನುವಾರು ಸಾಗಾಟ ನಿಷೇಧವಿದ್ದು ಹಾಗಾಗಿ ಈ ಸಮಯದಲ್ಲಿ ಸಾಗಾಟ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ಮಾಧ್ಯಮದ ಮೂಲಕ ಪ್ರಚಾರ ಮಾಡಬೇಕು. ಅದನ್ನು ಉಲಂಘಿಸಿ ಕಿವಿಯೋಲೆ ಇಲ್ಲದ ಶೇಖರಿಸಿಟ್ಟ, ಮೇಯಲು ಬಿಟ್ಟ, ಜಾನುವಾರುಗಳನ್ನು ವಶಪಡಿಸಿ, ಜಾನುವಾರು ನಿಷೇಧ ಕಾಯಿದೆ ೨೦೨೦ರಂತೆ ಪ್ರಕರಣ ದಾಖಲಿಸಬೇಕು. ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಕಸಾಯಿಖಾನೆಯ ಮೇಲೆ ನಿಗಾ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಕಸಾಯಿಖಾನೆಯ ಮೇಲೆ ನಿಗಾ ಇಡಲು ಸೂಚಿಸಬೇಕು. ಕಾಯಿದೆಯಂತೆ ಜಾನುವಾರು ಹತ್ಯೆ ತಡೆಯುವ ಅಧಿಕಾರ ಸಾರ್ವಜನಿಕರಿಗೂ ಇದೆ. ಆದರೆ ಮೊದಲೇ ಪೊಲೀಸರು ಅಕ್ರಮ ಜಾನುವಾರು ಸಾಗಾಟ, ಶೇಖರಣೆ, ಹತ್ಯೆ ತಡೆಯಲು ಸಾರ್ವಜನಿಕರು ಅಧಿಕಾರ ಉಪಯೋಗಿಸಲು ಅವಕಾಶ ಸಿಗದಂತೆ ಎಚ್ಚರ ವಹಿಸಬೇಕು. ಈ ಎಲ್ಲ ಕಾರ್ಯಗಳಲ್ಲಿ ಕಾನೂನು ಪ್ರಕಾರವಾಗಿ ತಮಗೆ ಸಹಕರಿಸಲು ನಮ್ಮ ಕಾರ್ಯಕರ್ತರು ಸದಾ ಸಿದ್ಧರಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದಿನೇಶ್ ಚಾರ್ಮಾಡಿ ಬಜರಂಗದಳ ಪುತ್ತೂರು ಜಿಲ್ಲಾ ಸಹ ಸಂಯೋಜಕ್, ಗಣೇಶ್ ಕಳೆಂಜ ವಿಶ್ವ ಹಿಂದೂ ಪರಿಷದ್ ಗೋ ರಕ್ಷಾ ಪ್ರಮುಖ್ ಪುತ್ತೂರು ಜಿಲ್ಲೆ, ವಿಷ್ಣು ಮರಾಠೆ ಅಧ್ಯಕ್ಷರು ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ, ರಮೇಶ್ ಧರ್ಮಸ್ಥಳ ಗೋರಕ್ಷಾ ಪ್ರಮುಖ್ ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ, ನಾಗೇಶ್ ಕಲ್ಮಂಜ ಪ್ರಚಾರ ಪ್ರಸಾರ ಪ್ರಮುಖ್ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡ, ಅಶೋಕ್ ಕಳೆಂಜ ಸತ್ಸಂಗ ಪ್ರಮುಖ್ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡ, ಶ್ರೀಮತಿ ಕಾವ್ಯ ಬೆಳ್ತಂಗಡಿ ಮಾತೃಮಂಡಳಿ ಪ್ರಮುಖ್ ಬೆಳ್ತಂಗಡಿ ಪ್ರಖಂಡ, ಚಂದ್ರ ಕಳೆಂಜ ಬಜರಂಗದಳ ಸಂಚಾಲಕರು ಗ್ರಾಮ ಸಮಿತಿ ಕಳೆಂಜ ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ ವಿದ್ವತ್ ಕಾಲೇಜಿನಲ್ಲಿ ಕಿಚನಾಮಿಕ್ಸ್ ಸಡಗರ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ನೂತನ ಅನ್ನಛತ್ರ ಉದ್ಘಾಟನೆ

Suddi Udaya

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 15ನೇ ನೂತನ ಶಾಖೆ ಮಡಂತ್ಯಾರಿನಲ್ಲಿ ಉದ್ಘಾಟನೆ

Suddi Udaya

ಭಾರೀ ಮಳೆ ಹಿನ್ನೆಲೆ: ಬೆಳ್ತಂಗಡಿ ತಾಲೂಕಿಗೆ ದ.ಕ. ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಭೇಟಿ

Suddi Udaya

ಮೇಲಂತಬೆಟ್ಟು:ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಸಂಭ್ರಮದ ನಾಗರ ಪಂಚಮಿ ಆಚರಣೆ

Suddi Udaya

ಉಜಿರೆ ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ “ಸಾಧ್ಯತೆಗಳ ಹಾದಿಗಳು: ವೈಯಕ್ತಿಕ ಕಲಿಕೆಯ ವಿನ್ಯಾಸ” ಕಾರ್ಯಾಗಾರ

Suddi Udaya
error: Content is protected !!