24.1 C
ಪುತ್ತೂರು, ಬೆಳ್ತಂಗಡಿ
September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಬಸ್ ನಲ್ಲಿ ಮೊಬೈಲ್ ಕಳ್ಳತನ

ಬೆಳ್ತಂಗಡಿ : ಬಸ್ ಗಳಲ್ಲಿ ಮೊಬೈಲ್ ಕಳ್ಳತನ ಮಾಡಿದ ಘಟನೆ ಬುಧವಾರ ಸಂಜೆ ನಡೆದಿದೆ. ಉಜಿರೆಯಿಂದ ಚಾರ್ಮಾಡಿ ಮೂಲಕ ಸಂಚರಿಸುವ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಕಡೆ ಸಂಚರಿಸುವ ಬಸ್ ಗಳಲ್ಲಿ 3 ಮಂದಿಯ ಮೊಬೈಲ್ ಕಳ್ಳತನವಾಗಿದೆ.ಸಂಜೆ ಹೊತ್ತು ಬಸ್ ಗಳಲ್ಲಿ ವಿಪರೀತ ರಶ್ ಇರುತ್ತದೆ. ಈ ವೇಳೆ ಮೊಬೈಲ್ ಕಳ್ಳತನ ನಡೆದಿದ್ದು,ಎರಡು ಬಸ್ ಗಳಲ್ಲಿ ಕಕ್ಕಿಂಜೆ ತಲುಪಿದ ವೇಳೆ ಮೊಬೈಲ್ ಬ್ಯಾಗ್ ಗಳಿಂದ ನಾಪತ್ತೆಯಾಗಿರುವುದು ತಿಳಿದುಬಂದಿದೆ.

ಮೊಬೈಲ್ ಕಳೆದುಕೊಂಡವರು ಯುವತಿಯರಾಗಿದ್ದು ಎಲ್ಲರೂ ಖಾಸಗಿ ಉದ್ಯೋಗಿಗಳಾಗಿದ್ದಾರೆ. ಈ ವೇಳೆ ಕಕ್ಕಿಂಜೆಯಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ತಪಾಸಣೆ ಮಾಡಿದ್ದರೂ ಕಳ್ಳತನವಾದ ಮೊಬೈಲ್ ಗಳು ಪತ್ತೆಯಾಗಿಲ್ಲ. ಉಜಿರೆಯಲ್ಲಿ ಬಸ್ ಹತ್ತುವ ವೇಳೆ ವಿಪರೀತ ರಶ್ ಮಧ್ಯೆ ಮೊಬೈಲ್ ಗಳನ್ನು ಕಳ್ಳತನ ನಡೆಸಿರುವ ಸಾಧ್ಯತೆಯಿದ್ದು,ಇದರ ಹಿಂದೆ ಮೊಬೈಲ್ ಕಳ್ಳರ ತಂಡ ಸಕ್ರಿಯವಾಗಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಬಸ್ ನಿರ್ವಾಹಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಮೊಬೈಲ್ ಕಳೆದುಕೊಂಡವರಿಗೆ ತಿಳಿಸಿದ್ದಾರೆ.

Related posts

ಬೆಳ್ತಂಗಡಿ ತಾಲೂಕು ಮಟ್ಟದ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನೋತ್ಸವ ಮತ್ತು ಶಿಕ್ಷಕರ ದಿನಾಚರಣೆ

Suddi Udaya

ಪುದುವೆಟ್ಟು: ನಡ್ಯೇಲು ಕಾಡಾನೆ ದಾಳಿ : ಅಪಾರ ಕೃಷಿ ಹಾನಿ

Suddi Udaya

ಬೆಳ್ತಂಗಡಿ ಮಾರಿಗುಡಿ ದೇವಸ್ಥಾನದ ಪ್ರಧಾನ ಅರ್ಚಕ ಯುವರಾಜ ಹೆಗ್ಡೆ ನಿಧನ

Suddi Udaya

ಬೆಳ್ತಂಗಡಿ: ಡಾ. ಬಿ.ಆರ್‌. ಅಂಬೇಡ್ಕರ್‌ ಹುಟ್ಟುಹಬ್ಬ ಕಾರ್ಯಕ್ರಮ

Suddi Udaya

ಮುಂಡಾಜೆಯ ರಸ್ತೆ ಬದಿ ಕಾಡಾನೆ ಪ್ರತ್ಯಕ್ಷ

Suddi Udaya

ಮಾ.15: ಅಳದಂಗಡಿ ನೊಚ್ಚ ಮನೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

Suddi Udaya
error: Content is protected !!