September 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಆರಂಬೋಡಿಯಲ್ಲಿ ಹಿಂದೂ ಜಾಗರಣ ವೇದಿಕೆಯಿಂದ 41ನೇ ವರ್ಷದ ಮೊಸರು ಕುಡಿಕೆ ಉತ್ಸವಕ್ಕೆ ಸಿದ್ಧತೆ: ಅಧ್ಯಕ್ಷರಾಗಿ ಸಂಘಟಕ ಪ್ರಣೀತ್ ಹಿಂಗಾನಿ ಆಯ್ಕೆ

ಬೆಳ್ತಂಗಡಿ: ಹಿಂದೂ ಜಾಗರಣ ವೇದಿಕೆ ಆರಂಬೋಡಿ–ಎಲಿಯಾನಗೂಡು ಇದರ ಆಶ್ರಯದಲ್ಲಿ ನಡೆಯಲಿರುವ 41ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಉತ್ಸವ ಸಮಿತಿಯನ್ನು ರಚಿಸಲಾಯಿತು.

ಉತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಪ್ರಗತಿಪರ ಕೃಷಿಕರಾದ ಕಿರಣ್ ಕುಮಾರ್ ಮಂಜಿಲ, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಹಾಗೂ ನರಸಿಂಹ ಪೈ ಮಾವಿನಕಟ್ಟೆ ಅವರನ್ನು ಆಯ್ಕೆ ಮಾಡಲಾಯಿತು.

ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ ಅವರ ಆಪ್ತ ಸಹಾಯಕ, ಸಾಮಾಜಿಕ ಕ್ಷೇತ್ರದ ಮುಂಚೂಣಿ ಹಾಗೂ ಸಂಘಟಕ ಪ್ರಣೀತ್ ಹಿಂಗಾನಿ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಯುವ ಸಂಘಟಕ ನಿತೇಶ್ ಕುಮಾರ್ ಹನ್ನೆರಡುಕವಲು, ಕೋಶಾಧಿಕಾರಿಯಾಗಿ ಸಂಘಟಕ ಸುಧಾಮ ಉಪ್ಪಿರ ಅವರನ್ನು ಆಯ್ಕೆ ಮಾಡಲಾಯಿತು. ಜೊತೆಗೆ ವಿವಿಧ ಜವಾಬ್ದಾರಿಗಳಿಗೆ ಸಮಿತಿಯ ಇತರ ಸದಸ್ಯರನ್ನು ಸಹ ನೇಮಕಗೊಳಿಸಲಾಯಿತು.

ಸಭೆಯಲ್ಲಿ ಈ ಬಾರಿಯ ಮೊಸರು ಕುಡಿಕೆ ಉತ್ಸವವನ್ನು ಧಾರ್ಮಿಕ ಶ್ರದ್ಧೆ, ಸಾಂಸ್ಕೃತಿಕ ವೈಭವ ಹಾಗೂ ಜನಸಹಭಾಗಿತ್ವದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು. ಉತ್ಸವವನ್ನು ಯಶಸ್ವಿಗೊಳಿಸಲು ಸಮಿತಿಯ ಎಲ್ಲ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರ ಅಗತ್ಯವೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

Related posts

ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಶೆಟ್ಟಿ ಮತ್ತು ಸದಸ್ಯ ಸುಪ್ರೀತ್ ಪಾಡೆಂಕಿ ರವರುಗಳಿಗೆ ನುಡಿನಮನ

Suddi Udaya

ಉಜಿರೆ ಎಸ್. ಡಿ. ಎಂ. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ

Suddi Udaya

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ಷೂ ಎಸೆದ ಪ್ರಕರಣ ತನಿಖೆ ನಡೆಸಿ ಆರೋಪಿಯ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿ: ರಕ್ಷಿತ್ ಶಿವರಾಂ

Suddi Udaya

ಬೆಳ್ತಂಗಡಿ ತಾಲ್ಲೂಕಿನ 76 ಕೆರೆಗಳ ಗಡಿ ಗುರುತಿಸಿ ಗ್ರಾಮ ಪಂಚಾಯಿತ್ ಹಾಗೂ ಪಟ್ಟಣ ಪಂಚಾಯತ್ ಹಸ್ತಾಂತರ: ವಿಧಾನ ಪರಿಷತ್ ನಲ್ಲಿ ಹರೀಶ್ ಕುಮಾರ್ ಪ್ರಶ್ನೆಗೆ ಸಚಿವರ ಉತ್ತರ

Suddi Udaya

ಲಾಯಿಲ: ಡಿವೈಡರ್ ಗೆ ಬೈಕ್ ಡಿಕ್ಕಿ : ಬೈಕ್ ಸವಾರ ಗಂಭೀರ

Suddi Udaya

ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಶತ ಚಂಡಿಕಾಯಾಗದ ಪೂರ್ವಭಾವಿ ಸಭೆ

Suddi Udaya
error: Content is protected !!