September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹರಿದಾಸ ಗಾಂಭೀರ ಅವರಿಗೆ ನರೇಂದ್ರ ಕುಮಾರ್ ಸಂಸ್ಮರಣಾ ಪ್ರಶಸ್ತಿ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ಸದಸ್ಯರಾಗಿ, ಯಕ್ಷಭಾರತಿಯ ಉಪಾಧ್ಯಕ್ಷರಾಗಿ ನಿರಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಹರಿದಾಸ ಗಾಂಭೀರ ಧರ್ಮಸ್ಥಳ ಅವರು ನಿವೃತ್ತ ಕ್ರೀಡಾ ಶಿಕ್ಷಕ, ಕಲಾವಿದ ,ಕಲಾಪೋಷಕ ದಿ| ನರೇಂದ್ರಕುಮಾರ್ ಅವರ ಸಂಸ್ಮರಣಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಆ 2 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಯಕ್ಷಭಾರತಿ ಸಂಯೋಜನೆಯಲ್ಲಿ ನಡೆಯಲಿರುವ ಗೋವಿಂದ ನಮನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ನರೇಂದ್ರ ಮಾಸ್ಟರ್ ಅವರ ಶಿಷ್ಯನಾಗಿ,ಬಾಲ್ಯದಲ್ಲಿ ಕ್ರಿಕೆಟ್,ಕೋಕೋ ,ಕಬಡ್ಡಿಯಲ್ಲಿ ಉತ್ತಮ ಆಟಗಾರರಾಗಿ ಹರಿದಾಸ ಗಾಂಭೀರ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಯಾಗಿ ತಮ್ಮ ಮಾತಿನ ವೈಖರಿಯಿಂದ ಎಲ್ಲರ ಅಭಿಮಾನ, ಮೆಚ್ಚುಗೆ ಗಳಿಸಿದ್ದರು. ಪ್ರತಿ ವರ್ಷ ಶ್ರೀ ಕ್ಷೇತ್ರದಲ್ಲಿ ನಡೆಯುವ ಪುರಾಣ ವಾಚನ-ಪ್ರವಚನ ಕಾರ್ಯಕ್ರಮದಲ್ಲಿ ಕಳೆದ ಮೂರುವರೆ ದಶಕಕ್ಕಿಂತಲೂ ಹೆಚ್ಚು ಕಾಲ ಭಾಗವಹಿಸಿದ ಹಿರಿಯೆ ಅವರದು.

ರಾಜಕೀಯ ,ಸಹಕಾರ ಹಾಗೂ ಸೇವಾ ಕ್ಷೇತ್ರದಲ್ಲೂ ಅವರು ಸಮರ್ಪಣಾ ಭಾವದಿಂದ ತನ್ನನ್ನು ತೊಡಗಿಸಿಕೊಂಡವರು .ಯಕ್ಷಗಾನ ಕಲಾಪೋಷಕರಾಗಿ ಹಲವಾರು ಯಕ್ಷಗಾನ ಕಾರ್ಯಕ್ರಮಗಳಿಗೆ ಪೂ ರ್ಣ ಸಹಕಾರ ನೀಡುತ್ತಾ ಬಂದವರು. ನರೇಂದ್ರ ಮಾಸ್ಟರ್ ಅವರ ಆಪ್ತ ಶಿಷ್ಯರಲ್ಲಿ ಹರಿದಾಸ ಗಾಂಭೀರರೂ ಓರ್ವರಾಗಿ ನಿಕಟ ಸಂಪರ್ಕ ಹೊಂದಿದ್ದರು. ನರೇಂದ್ರಕುಮಾರ್ ಅವರ ಹೆಸರಿನ ಚೊಚ್ಚಲ ಪ್ರಶಸ್ತಿ ಗೆ ಹರಿದಾಸ ಗಾಂಭೀರ ಅವರ ಆಯ್ಕೆ ಅರ್ಥಪೂರ್ಣ ಹಾಗೂ ಸಮಯೋಚಿತವಾದುದು. .

Related posts

ಕಡಿರುದ್ಯಾವರ : ಮಾರಿಯಮ್ಮ ಸೇವಾ ಸಮಿತಿ ಶ್ರೀ ಮಾರಿಯಮ್ಮ ದೇವಿ ಮತ್ತು ಗುಳಿಗ ದೈವದ ಪುನರ್ ಪ್ರತಿಷ್ಠೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಕರಾಟೆ ಚಾಂಪಿಯನ್‌ಶಿಪ್: ಶ್ರೇಯಸ್ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ

Suddi Udaya

ಕನ್ಯಾಡಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಅಂತರಾಷ್ಟ್ರೀಯ ಆಖಾಡ ಪರಿಷತ್ ನ ಅಧ್ಯಕ್ಷ ಹರಿಗಿರಿ ಮಹಾರಾಜ ಭೇಟಿ : ಅಯೋಧ್ಯೆಯ ಶಾಖಾಮಠದ ಭೂಮಿ ಪೂಜೆಗೆ ಆಹ್ವಾನ

Suddi Udaya

ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ “ಸ್ಕ್ರ್ಯಾಚ್ ಗೇಮಿಂಗ್ ಕ್ರಾಫ್ಟಿಂಗ್ ಸ್ಪರ್ಧೆ”

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya
error: Content is protected !!