September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ನೀಟ್ ರಾಜ್ಯಮಟ್ಟದ ಸಾಧಕ ಚಿನ್ಮಯ್ ಗೌಡಗೆ ಎಕ್ಸೆಲ್ ಪಿಯು ಕಾಲೇಜಿನಲ್ಲಿ ಅದ್ಧೂರಿ ಸನ್ಮಾನ

ಗುರುವಾಯನಕೆರೆ: ಎಕ್ಸೆಲ್ ಪಿಯು ಕಾಲೇಜು ರಾಜ್ಯದ ಜನರ ವಿಶ್ವಾಸ ಗಳಿಸಿರುವ ಶಿಕ್ಷಣ ಸಂಸ್ಥೆಯಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವುದು ನಮ್ಮ ಹೆಮ್ಮೆ. ಸಾಧಕರನ್ನು ಪ್ರೋತ್ಸಾಹಿಸುವ ಸಂಸ್ಕೃತಿಯೇ ಎಕ್ಸೆಲ್‌ನ ವಿಶೇಷತೆ ಎಂದು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.

ಅವರು 2026ರ ನೀಟ್ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿ ಚಿನ್ಮಯ್ ಗೌಡ ಅವರನ್ನು ಎಕ್ಸೆಲ್ ಪಿಯು ಕಾಲೇಜಿನಲ್ಲಿ ಸನ್ಮಾನಿಸಿ ಮಾತನಾಡಿದರು.

ಚಿನ್ಮಯ್ ಗೌಡ ಅವರು ಈ ಹಿಂದೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿದ್ದು, ಇದೀಗ ಪ್ರಕಟವಾದ ನೀಟ್-2026 ಪರೀಕ್ಷೆಯಲ್ಲಿ 720ಕ್ಕೆ 670 ಅಂಕಗಳನ್ನು ಗಳಿಸಿ 99.97 ಪರ್ಸೆಂಟೈಲ್ ದಾಖಲಿಸಿದ್ದಾರೆ. ಈ ಸಾಧನೆಯ ಮೂಲಕ ದೇಶದ ಪ್ರತಿಷ್ಠಿತ ಏಮ್ಸ್ (AIIMS) ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಅರ್ಹತೆಯನ್ನು ಗಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಚಿನ್ಮಯ್ ಗೌಡ ಅವರ ತಾಯಿ ರಾಗಿಣಿ ಅವರು ಎಕ್ಸೆಲ್ ಸಂಸ್ಥೆ ನನ್ನ ಮಗನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದೆ. ಮಧ್ಯಮ ವರ್ಗದ ವಿದ್ಯಾರ್ಥಿಗಳ ಕನಸುಗಳನ್ನು ನನಸಾಗಿಸುವಲ್ಲಿ ಸಂಸ್ಥೆಯ ಪಾತ್ರ ಅನನ್ಯ. ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಹಾಗೂ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗೆ ನಾನು ಕೃತಜ್ಞಳಾಗಿದ್ದೇನೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಚಿನ್ಮಯ್ ಗೌಡ ಮಾತನಾಡಿ, ನನ್ನ ಸಾಧನೆಯ ಹಿಂದೆ ಸುಮಂತ್ ಕುಮಾರ್ ಜೈನ್ , ಪ್ರಾಚಾರ್ಯ ಡಾ. ಪ್ರಜ್ವಲ್ ಹಾಗೂ ಕಾಲೇಜಿನ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಯ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಸಹಕಾರವಿದೆ. ಅವರ ಋಣವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಕ್ಸೆಲ್ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಪ್ರಜ್ವಲ್, ಸಂಯೋಜಕಿ ನಿಶಾ ಪೂಜಾರಿ,ಆಡಳಿತ ಮಂಡಳಿ ಸದಸ್ಯೆಯರಾದ ಸಹನ ಮತ್ತು ಶೃತಿ, ನಿಲಯ ಪಾಲಕ ಅಭಿಜಿತ್, ಉಪಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Related posts

ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಅನುಗ್ರಹ ಸಮಾಗಮ 2025

Suddi Udaya

ಕಾಯರ್ತಡ್ಕದ ಅಂಗರಂಡ ನಿವಾಸಿ ಮುತ್ತಮ್ಮ ನಿಧನ

Suddi Udaya

ಕುತ್ಲೂರು: ಮಳೆಗೆ ಕುಸಿದ ಸೇತುವೆ ಪರೀಶಿಲನೆ ನಡೆಸಿದ ಜಿಲ್ಲಾಧಿಕಾರಿ

Suddi Udaya

ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ಕಾರ್ಕಳದಲ್ಲಿ ‘ ಕ್ರಿಯೇಟಿವ್ ಚಿಲಿಪಿಲಿ- 2026’ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ನಿಡ್ಲೆ ಪ್ರೇರಣ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಮಹಾಸಭೆ

Suddi Udaya

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರರ 2ನೇ ವರ್ಷದ ಪುಣ್ಯಸ್ಮರಣೆ ;ಶ್ರೀ ಗುರುದೇವ ಸಹಕಾರಿ ಸಂಘ ಮತ್ತು ಶ್ರೀ ಗು.ನಾ.ಸ್ವಾ.ಸೇ ಸಂಘದಿಂದ ಸಿಯೋನ್ ಆಶ್ರಮದಲ್ಲಿ ಆಚರಣೆವಸಂತ ಬಂಗೇರರು ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು: ಭಗೀರಥ ಜಿ

Suddi Udaya
error: Content is protected !!