September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಕ್ಯಪದವು ಎಲ್.ಸಿ.ಆರ್ ಪದವಿಪೂರ್ವ ವಿಭಾಗದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನೆ

ಕಕ್ಯಪದವು : ಪಾದೆಗುತ್ತು ಲಿಂಗಪ್ಪ ಮಾಸ್ತರ್ ಎಜುಕೇಷನಲ್ ಟ್ರಸ್ಟ್ (ರಿ.) ನಿಂದ ನಡೆಸಲ್ಪಡುವ ಎಲ್.ಸಿ.ಆರ್ ವಿದ್ಯಾಸಂಸ್ಥೆಗಳು ಕಕ್ಯಪದವು ಇಲ್ಲಿನ ಪದವಿಪೂರ್ವ ವಿಭಾಗದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಜು.22 ರಂದು ನೆರವೇರಿತು.

ಉದ್ಘಾಟಕರಾಗಿ ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸ ಕರು ,ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳಾದ ದಾಮೋದರ ಇ.ಇವರು ಭಾಗವಹಿಸಿ ಎನ್.ಎಸ್.ಎಸ್.ಕೇವಲ ಒಂದು ಯೋಜನೆಯಲ್ಲ ಅದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಒಂದು ಉತ್ತಮ ವೇದಿಕೆಯಾಗಿದೆ ಎಂದರು.

ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ ಅಧ್ಯಕ್ಷೀಯ ಮಾತುಗಳಿಂದ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವದ ಕುರಿತು ಪ್ರೇರಣಾತ್ಮಕ ಮಾತುಗಳ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವದ ಬದಲಾವಣೆಯಲ್ಲಿ ಎನ್.ಎಸ್.ಎಸ್ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಸಂಸ್ಥೆಯ ಸಂಚಾಲಕರಾದ ಶ್ರೀಮತಿ ಬಬಿತಾ.ಆರ್.ನಾಥ್ ಅಧ್ಯಕ್ಷತೆ ವಹಿಸಿ, ಕಾರ್ಯದರ್ಶಿಗಳಾದ ಶ್ರೀ ಮತಿ ಶಿವಾನಿ ಆರ್.ನಾಥ್, ಟ್ರಸ್ಟಿಗಳಾದ ಶ್ರೀಯುತ ಯಜ್ಞೇಶ್ ರಾಜ್ , ಸಂಯೋಜಕರಾದ ಯಶವಂತ್.ಜಿ.ನಾಯಕ್, ಮುಖ್ಯಶಿಕ್ಷಕಿ ಶ್ರೀಮತಿ ವಿಜಯಾ.ಕೆ ಉಪಸ್ಥಿತರಿದ್ದರು.

ರಾಷ್ಟ್ರೀಯ ಯೊಜನಾ ಘಟಕದ ಯೋಜನಾಧಿಕಾರಿಗಳಾದ ವಿಂದ್ಯಾಶ್ರೀ ಎ, ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಪದವಿಪೂರ್ವ ವಿಭಾಗದ ಮುಖ್ಯಸ್ಥರಾದ ಸೌಮ್ಯ ಎನ್ ವಂದಿಸಿ, ಸಹಯೋಜನಾಧಿಕಾರಿ ಜಯಶ್ರೀ. ಕಾರ್ಯಕ್ರಮ ನಿರೂಪಿಸಿದರು.

Related posts

ಅಮೇರಿಕಾದಲ್ಲಿ ನೆಲೆಸಿದರೂ ಭಾರತೀಯ ಸಂಸ್ಕಾರದ ಧಾರ್ಮಿಕ ವಿಧಿ ವಿಧಾನಗಳನ್ನು ಬಳಸಿ ಗೃಹ ಪ್ರವೇಶ

Suddi Udaya

ಇಂದಬೆಟ್ಟು ಪಲ್ಲದಕೋಡಿ ನಿವಾಸಿ ಜಗದೀಶ್ ನಿಧನ

Suddi Udaya

ಅ.31: ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ವತಿಯಿಂದ ದೀಪಾವಳಿ ದೋಸೆಹಬ್ಬ ಹಾಗೂ ಗೋ ಪೂಜಾ ಉತ್ಸವ

Suddi Udaya

ಬೆಳ್ತಂಗಡಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಗೆ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯಿಂದ ಉಚಿತ ಕಲಿಕಾ ಸಾಮಗ್ರಿಗಳ ವಿತರಣೆ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಡೆಂಗ್ಯೊ ನಿರ್ಮೂಲನೆ ಮತ್ತು ಸ್ವಚ್ಚತೆ ಕಾರ್ಯಕ್ರಮ

Suddi Udaya

ಪಡಂಗಡಿ: ಸಿಡಿಲು ಬಡಿದು ಕಟ್ಟಡಕ್ಕೆ ಬೆಂಕಿ

Suddi Udaya
error: Content is protected !!