24.2 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘದ ಮಹಾಸಭೆ: ರೂ.55.40 ಲಕ್ಷ ನಿವ್ವಳ ಲಾಭ, ಶೇ. 12ಡಿವಿಡೆಂಟ್ ಘೋಷಣೆ

ಉಜಿರೆ: ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘ ಇದರ 2025-26 ನೇ ವರ್ಷದ ವಾರ್ಷಿಕ ಮಹಾಸಭೆಯು ಜು 25 ರಂದು ಸಂಘದ ಸಭಾಂಗಣದಲ್ಲಿ ಜರಗಿತು.

ಮಹಾಸಭೆಯ ಸಭಾ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಕೇರಿಮಾರ್ ರವರು ವಹಿಸಿ ಮಾತನಾಡಿ ಸಂಘ ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದು ಅಧಿಕ ಲಾಭವನ್ನು ಗಳಿಸುತ್ತಾ ಮುನ್ನಡೆಯುತ್ತಿದೆ. ಲಾಭಾಂಶವನ್ನು ಹಂಚಿಕೆ ಮಾಡಿ ಶೇ.11 ಡಿವಿಡೆಂಡನ್ನು ಘೋಷಣೆ ಮಾಡಿ ಸಂಘದ ಪ್ರಗತಿಯಲ್ಲಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಕೋರಿದರು.

ವೇದಿಕೆಯಲ್ಲಿ ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಸಂಘದ ಉಪಾಧ್ಯಕ್ಷರಾದ ಶ್ರೀಧರ ಪೂಜಾರಿ, ನಿರ್ದೇಶಕರಾದ ಅರುಣ ಕುಮಾರ್, ಗುರುರಾಜ್ ಅಂತರ, ರಜತ ಗೌಡ, ಅರವಿಂದ ಕಾರಂತ, ಅನಿಲ್ ಪ್ರಕಾಶ್ ಡಿಸೋಜಾ, ಶ್ರೀಮತಿ ಪುಷ್ಪಾವತಿ ಆ‌ರ್ ಶೆಟ್ಟಿ, ಶ್ರೀಮತಿ ವಾರಿಜ ಎಸ್ ಗೌಡ, ಅಣ್ಣು ನಾಯ್ಕ, ಸಾದು, ಶ್ರೀ ಸುದರ್ಶನ್ ವಲಯ ಮೇಲ್ವಿಚಾರಕರು ಮತ್ತು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸರಸ್ವತಿ ಸಿ ರೈ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನಿಧನ ಹೊಂದಿದ ಸದಸ್ಯರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಗೌರವ ಡಾಕ್ಟರೇಟ್ ಪಡೆದ ಸಹಕಾರಿ ಯೂನಿಯನ್ ನಿರ್ದೇಶಕಿ ಡಾ. ಸಾವಿತ್ರಿ ರೈ ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಸದಾಶಿವ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಧಿಕಾರಿ ಸರಸ್ವತಿ ಸಿ ರೈ ವರದಿ ಮಂಡಿಸಿದರು. ಮೋಹನ್ ಗೌಡ ಕಾರ್ಯಕ್ರಮ ನಿರ್ವಹಿಸಿ, ರಜತ್ ಗೌಡ ವಂದಿಸಿದರು.

Related posts

ಬಾಂಜಾರು ಮಲೆ ಶ್ರೀ ಮಹಾಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಬಗ್ಗೆ ಸಾರ್ವಜನಿಕ ಸಮಾಲೋಚನಾ ಸಭೆ

Suddi Udaya

ತೆಕ್ಕಾರು: ಗಾಂಜಾ ನಶೆಯಲ್ಲಿ ಅನುಚಿತ ವರ್ತನೆ: ಇಬ್ಬರು ಯುವಕರು ಪೊಲೀಸರ ವಶಕ್ಕೆ

Suddi Udaya

ಅಂಡಿಂಜೆ ಸ.ಉ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Suddi Udaya

ಉಜಿರೆ ಗ್ರಾ.ಪಂ. ಗೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಭೇಟಿ

Suddi Udaya

ಅರಸಿನಮಕ್ಕಿಯಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಇನ್ವರ್ಟರ್ ಕೇಳಲು ಬಂದವರಿಂದ ಮನೆಯಂಗಳಕ್ಕೆ ಅಕ್ರಮ ಪ್ರವೇಶ ಕಬ್ಬಿಣದ ರಾಡ್‌ನಿಂದ ಹಲ್ಲೆ

Suddi Udaya
error: Content is protected !!