28.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಎರಡು ವರ್ಷದ ಕತ್ತಲೆಗೆ ಅಂತ್ಯ ಹಾಡಿದ ಶಾಸಕ ಹರೀಶ್ ಪೂಂಜ: ಮಂದಹಾಸ ಮೂಡಿಸಿದ ವಿದ್ಯುತ್ ಸಂಪರ್ಕ

ಬೆಳ್ತಂಗಡಿ: ಚುನಾವಣೆ ಬಂದಾಗ ಮಾತ್ರ ನೆನಪಾಗುವ ಜನಪ್ರತಿನಿಧಿಗಳ ಮಧ್ಯೆ, ಕೆಲಸ ಮಾಡಿ ತೋರಿಸುವ ಶಾಸಕರು ಇನ್ನೂ ಇದ್ದಾರೆ ಎಂಬುದಕ್ಕೆ ಬೆಳ್ತಂಗಡಿ ತಾಲೂಕಿನ ತಣ್ಣಿರುಪಂತ ಗ್ರಾಮದ ಪಾಲೇದು ಕೊಲ್ಯಾತ್ತಾರು ನಿವಾಸಿ ಉಷಾ ಪರಮೇಶ್ವರ ಪೂಜಾರಿ ಅವರ ಕುಟುಂಬವೇ ಸಾಕ್ಷಿ.

ಎರಡು ವರ್ಷ ಕತ್ತಲಲ್ಲೇ ಜೀವನ: ಆರ್ಥಿಕವಾಗಿ ಅತೀ ಹಿಂದುಳಿದ ಉಷಾ ಅವರ ಕುಟುಂಬದಲ್ಲಿ ಪತಿ-ಪತ್ನಿ ಇಬ್ಬರೂ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಮಗನ ಫಿಸಿಯೋಥೆರಪಿ ವ್ಯಾಸಂಗಕ್ಕೆ ಹಣ ಹೊಂದಿಸುವ ಒತ್ತಡವೂ ಇದೆ. ಇದ್ದ ಚಿಕ್ಕ ಮನೆ ಕುಸಿದುಬಿದ್ದ ಬಳಿಕ, ಯಾರೋ ಹೇಳಿದ ಕಾರಣಕ್ಕೆ ಇದ್ದ ವಿದ್ಯುತ್ ಮೀಟರ್ ಅನ್ನು ಇಲಾಖೆಗೆ ಹಿಂದಿರುಗಿಸಿದ್ದರು.ನಂತರ ಪಂಚಾಯತ್ ನಿಂದ ಹೊಸ ಮನೆ ಮಂಜೂರಾಗಿ ಸಿಮೆಂಟ್ ಶೀಟ್ ಹಾಕಿ ಮನೆ ನಿರ್ಮಾಣವಾಯಿತು. ಆದರೆ ಇಲಾಖೆಯ ಕಾನೂನು ತೊಡಕು ಮತ್ತು ಹೆಚ್ಚುವರಿ ಶುಲ್ಕ ಪಾವತಿಸಲು ಆಗದ ಕಾರಣ ಕಳೆದ ಎರಡು ವರ್ಷಗಳಿಂದ ಈ ಮನೆಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಚಿಮಿಣಿ ದೀಪದ ಬೆಳಕಿನಲ್ಲೇ ದಿನ ದೂಡುವ ಪರಿಸ್ಥಿತಿ ಇತ್ತು.

ಶಾಸಕರ ಮಧ್ಯಪ್ರವೇಶದಿಂದ ಪರಿಹಾರ: ಈ ವಿಷಯವನ್ನು ಮಾಜಿ ತಾಲೂಕು ಪಂಚಾಯತ್ ಸದಸ್ಯರು ಗ್ರಾಮ ಪಂಚಾಯತ್ ನಿಂದ ದೃಢ ಪತ್ರ, ಇಂಜಿನಿಯರ್ ನಿಂದ ಮನೆ ಪೂರ್ಣಗೊಂಡ ಬಗ್ಗೆ ದಾಖಲೆಗಳೊಂದಿಗೆ ಶಾಸಕ ಶ್ರೀ ಹರೀಶ್ ಪೂಂಜಾ ಅವರ ಗಮನಕ್ಕೆ ತಂದರು.ವಿಷಯ ತಿಳಿದ ಕೂಡಲೇ ಶಾಸಕರು ಮುತುವರ್ಜಿ ವಹಿಸಿದರು. ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಅವರೊಂದಿಗೆ ಮಾತನಾಡಿ ಕನಿಷ್ಠ ಶುಲ್ಕದಲ್ಲಿ ಸಂಪರ್ಕ ನೀಡಲು ಅನುಮತಿ ಕೊಡಿಸಿದರು.ಅದರಂತೆ ಉಪ್ಪಿನಂಗಡಿಯ ಮಹಾಲಿಂಗೇಶ್ವರ ಇಲೆಕ್ಟ್ರಿಕಲ್ ಗುತ್ತಿಗೆದಾರರು ಕಡಿಮೆ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದರು.

ಕತ್ತಲಿಂದ ಬೆಳಕಿಗೆ: ಇಂದು ಉಷಾ ಅವರ ಮುಖದಲ್ಲಿ ಎರಡು ವರ್ಷದ ಬಳಿಕ ಮಂದಹಾಸ ಮೂಡಿದೆ. ಮನೆಯಲ್ಲಿ ಬಲ್ಬ್ ಬೆಳಗಿದ ಕ್ಷಣವೇ ಅವರಿಗೆ ಹೊಸ ಬದುಕು ಆರಂಭವಾದ ಅನುಭವವಾಗಿದೆ. ಸಮಾಜಭಿಮಾನದ ಮಾತು ಆಡುವುದೊಂದೇ ಅಲ್ಲ, ನೆಲದ ಮೇಲಿನ ಸಮಸ್ಯೆಗೆ ಸ್ಪಂದಿಸುವ ನಾಯಕತ್ವಕ್ಕೆ‌ಶಾಸಕರ ಸ್ಪಂದಿಸುವ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ.

Related posts

ತೋಟತ್ತಾಡಿ: ವಿದ್ಯುತ್ ಅವಘಡದಿಂದ ಗುಡ್ಡಕ್ಕೆ ಬೆಂಕಿ

Suddi Udaya

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮೇ.31 ಕೊನೆಯ ದಿನ

Suddi Udaya

ವಾಣಿ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

Suddi Udaya

ಬೆಳ್ತಂಗಡಿ: 6 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

Suddi Udaya

ಕಕ್ಕಿಂಜೆ : ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya

ಬಂಟರ ಸಂಘ ಕಾವಳಕಟ್ಟೆ ವಲಯ : ಕಲಾಭಿನಂದನೆ – 2026 ಸಂಭ್ರಮಾಚರಣೆ

Suddi Udaya
error: Content is protected !!