27.8 C
ಪುತ್ತೂರು, ಬೆಳ್ತಂಗಡಿ
September 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಕಳಿಯ ಗ್ರಾ.ಪಂ.ನಲ್ಲಿ ಮೆಸ್ಕಾಂನಿಂದ ಗೃಹಜ್ಯೋತಿ ಫಲಾನುಭವಿಗಳ ಹೆಚ್ಚುವರಿ ಮಾಹಿತಿ ಸಂಗ್ರಹಣೆ ಕಾರ್ಯಕ್ರಮ

ಬೆಳ್ತಂಗಡಿ: ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಫಲಾನುಭವಿಗಳ ಹೆಚ್ಚುವರಿ ಮಾಹಿತಿ ಸಂಗ್ರಹಣೆ ಕಾರ್ಯಕ್ರಮವು ಬೆಳ್ತಂಗಡಿ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಕಳಿಯ ಗ್ರಾಮ ಪಂಚಾಯತ್ ನಲ್ಲಿ ಜು.28ರಂದು ನಡೆಯಿತು. ಸುಮಾರು 260 ಫಲಾನುಭವಿಗಳ ಮಾಹಿತಿಯನ್ನು ಸಂಗ್ರಹಿಸಲಾಯಿತು.

ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಮರೀಟಾ ಪಿಂಟೋ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಸಮಿತಿ ಸದಸ್ಯೆ ಸೌಮ್ಯ ಲಾಯಿಲ, ಕೇಶವ ಓಡಿಲ್ನಾಳ, ಮೆಸ್ಕಾಂನ ಶಿವಶಂಕರ್, ಶ್ವೇತಾ ಭಾಗವಹಿಸಿದ್ದರು.

ಬೆಳ್ತಂಗಡಿ ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್,ಸದಸ್ಯೆ ವಂದನಾ ಭಂಡಾರಿ, ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ಕರೀಮ್ ಗೇರುಕಟ್ಟೆ, ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿವಾಕರ ಎಂ, ಕೇಶವ ಪೂಜಾರಿ ನಾಳ, ಮಾಜಿ ಉಪಾದ್ಯಕ್ಷೆ ಕುಸುಮ ಎನ್ ಬಂಗೇರ, ಮಾಜಿ ಸದಸ್ಯ ಸುಧಾಕರ ಮಜಲು ಮೋಹಿನಿ, ಹರೀಶ್ ಕುಮಾರ್, ಲತೀಫ್ ಪರಿಮ, ಶಕುಂತಲಾ ಭೇಟಿ ನೀಡಿದರು.

ಅಭಿವೃದ್ಧಿ ಅಧಿಕಾರಿ ಕುಂಞ ಕೆ ಸ್ವಾಗತಿಸಿದರು. ಮೆಸ್ಕಾಂನ ಹರೀಶ್ ಮತ್ತು ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಸುಚಿತ್ರಾ, ಶಶಿಕಲಾ, ನಂದಿನಿ, ರವಿ ಎಚ್, ಸುರೇಶ್ ಗೌಡ, ಗ್ರಂಥಾಲಯದ ಸಿಬ್ಬಂದಿ ಪ್ರಮೀಳಾ, ಸಂಜೀವಿನಿಯ ಚಂದ್ರಿಕಾ, ಪ್ರಜ್ಞಾ, ಸ್ಥಳೀಯರಾದ ಸಿದ್ದೀಕ್ ಜಿ.ಎಚ್, ರಹಿಮಾನ್ ಮಾಸ್ಟರ್ ಸಹಕರಿಸಿದರು.

Related posts

ನ.7: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಬೆಳ್ತಂಗಡಿ : ತಾಲೂಕು ಆಶಾ ಕಾರ್ಯಕರ್ತರ ಸಭೆ

Suddi Udaya

ರಾಜ್ಯ ಮಟ್ಟದ ಪ್ರೌಢ ಶಾಲಾ ಬಾಲಕರ ವಿಭಾಗದ ಕಬ್ಬಡಿ ಪಂದ್ಯಾಟ: ಸುಲ್ಕೇರಿ ಶ್ರೀರಾಮ ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya

ಪಡಂಗಡಿ ಹಾಗೂ ಕನ್ನಡಿಕಟ್ಟೆ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಗರ್ಡಾಡಿ: ಕುಂಡದಬೆಟ್ಟು ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು

Suddi Udaya

ಧರ್ಮಸ್ಥಳ: ಬಸ್‌ ಕಿಟಕಿಯಿಂದ ಇಳಿಯಲು ಯತ್ನಿಸಿದ ವ್ಯಕ್ತಿ ಆಯತಪ್ಪಿ ರಸ್ತೆಗೆ ಬಿದ್ದು ಸಾವು

Suddi Udaya
error: Content is protected !!