July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಪಡಂಗಡಿ ಹಾಗೂ ಕನ್ನಡಿಕಟ್ಟೆ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಪಡಂಗಡಿ: 1982 ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಪ್ರಾರಂಭಿಸುವಾಗ ಬೆಳ್ತಂಗಡಿ ತಾಲೂಕಿನ ಸ್ಥಿತಿ ಗತಿಗಳನ್ನ ಅವಲೋಕನ ಮಾಡಿಕೊಳ್ಳುವ ಸಂದರ್ಬ ಬಂದಿದೆ.

ತಾಲೂಕಿನ ಜನರಿಗೆ ತಮ್ಮ ಜೀವನವನ್ನ ಕಟ್ಟಿಕೊಳ್ಳಲು ಬೇಕಾದ ಶಕ್ತಿಯನ್ನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನೀಡಿದೆ ಜೀವನಕ್ಕೆ ಬೇಕಾದ ಅರ್ಥಿಕ ಸಹಕಾರ, ವಿದ್ಯಾಭ್ಯಾಸಕ್ಕೆ ಬೇಕಾದ ಸುಜ್ಞಾನ ನಿಧಿ ಶಿಷ್ಯ ವೇತನ, ಮೂಲ ಸೌಕರ್ಯ ಅಭಿವೃದ್ಧಿಗೆ ಪೂರಕವಾದ ಮನೆ ರಚನೆಗೆ ಸಹಕಾರ ಅನಾರೋಗ್ಯ ಪೀಡಿತ ರೀಗೆ ಆರೋಗ್ಯದ ಸಂಕಲ್ಪಕೆ ಸಂಪೂರ್ಣ ಸುರಕ್ಷಾ, ಅರ್ಥಿಕ ಭದ್ರತೆಯ ಕ್ರೋಢೀಕರಣಕ್ಕೆ ಒದ್ದಾಟ ಮಾಡುತ್ತಿದ್ದ ಬಡ ಜನರಿಗೆ ಆರ್ಥಿಕ ಸಬಲೀಕರಣ ವನ್ನು ಕಲ್ಪಿಸಿ ಸ್ವಾವಲಂಬನೆಯ ಬದುಕನ್ನ ಪ್ರಗತಿ ಬಂಧು ಸ್ವಸಹಾಯ ಸಂಘಗಳು ಒದಗಿಸಿದೆ ಎಂದು ಬೆಳ್ತಂಗಡಿ ತಾಲೂಕು ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜಾ ರವರು ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಗರ್ಡಾಡಿ ವಲಯದ ಪಡOಗಡಿಯ ಸಮೃದ್ಧಿ ಸಬಾ ಭವನದಲ್ಲಿ ಆಯೋಜಿಸಲಾದ ಪಡOಗಡಿ ಹಾಗು ಕನ್ನಡಿ ಕಟ್ಟೆ ಒಕ್ಕೂಟ ಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ನೂತವಾಗಿ ರಚನೆಯಾದ ಒಕ್ಕೂಟಗಳ ಪದಾಧಿಕಾರಿಗಳಿಗೆ ನಾಯಕತ್ವ ಗುಣವನ್ನು ಬೆಳೆಸಿ ಕೊಂಡು ಕಾರ್ಯ ನಿರ್ವಹಿಸಬೇಕೆಂದು ಶುಭ ಹಾರೈಸಿದರು.

ಸಾಧಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೇ ಗೌಡರವರು ಯೋಜನೆಯ ಮೂಲ ಉದ್ದೇಶ ಸೇವೆ ಮತ್ತು ಪರಿಕಲ್ಪನೆ ಸತ್ಯ ಎಂದರೆ ಕಷ್ಟದಲ್ಲಿ ಇರುವ ವ್ಯಕ್ತಿಗೆ ಸಹಕಾರ ನೀಡುವುದು ದುಶ್ಚಟಗಳ ವಿರುದ್ಧ, ಮೂಡನಂಬಿಕೆ ಗಳ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ
ವಿವಿಧ ರೀತಿಯಲ್ಲಿ ಬರುವ ಸಮಸ್ಯೆಗಳನ್ನ ನಿಭಾಯಿಸುವ ಕೌಶಲ್ಯ ವನ್ನು ಬೆಳೆಸಿಕೊಳ್ಳಬೇಕು ಜಾತಿ ಮತ ಧರ್ಮ ರಾಜಕೀಯ ವನ್ನು ಮೀರಿ ಎಲ್ಲರಿಗೂ ಒಂದೇ ರೀತಿಯ ಕಾರ್ಯಕ್ರಮಗಳನ್ನ ಯೋಜನೆಯು ನೀಡಿದೆ ಸ್ವ ಉದ್ಯೋಗ ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತರಬೇತಿಯನ್ನು ನೀಡಿ ಅರ್ಥಿಕ ಸಹಕಾರ ವನ್ನು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಒದಗಿಸಲಾಗುತ್ತಿದೆ ಇದರಿಂದಾಗಿ ಆರ್ಥಿಕ ಪ್ರಗತಿ ಯ ಮೂಲಕ ಬಡ ಕುಟುಂಬ ಗಳ ಅಭಿವೃದ್ದಿಗೆ ಸಹಕಾರಿಯಾಗಿದೆ ಎಂದರು.

ದೇವಸ್ಥಾನಗಳ ಅಭಿವೃದ್ದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ದೇಣಿಗೆ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸಂಘ ಸಂಸ್ಥೆ ಗಳಿಗೆ, ಶಾಲೆಯ ಅಭಿವೃದ್ಧಿಗೆ, ಸಮುದಾಯ ಭವನಕ್ಕೆ ಅನುದಾನಗಳನ್ನು ಒದಗಿಸಿ ಸಮುದಾಯದ ಸಮಸ್ಯೆಗಳಿಗೆ ಸ್ಪಂದನೆ ನೀಡಲಾಗುತ್ತಿದೆ ಬದುಕಿನಲ್ಲಿ ಕೀಳರಿಮೆ ಇಟ್ಟುಕೊಳ್ಳಬಾರದು ನಮ್ಮ ದೇಶದ ದೊಡ್ಡ ಸಂಪತ್ತು ಮಾನವ ಸಂಪತ್ತು ಅದರ ಸದ್ಬಳಕೆ ಆಗಬೇಕು ನಮ್ಮ ಏಳಿಗೆಯನ್ನು ನಾವೇ ಮಾಡಿಕೊಳ್ಳಬೇಕು ಅಭಿವೃದ್ದಿಗೆ ಪೂರಕವಾದ ಯೋಜನೆಯನ್ನ ಹಾಕಿಕೊಂಡು ನಾವೇ ಅದರ ಅನುಷ್ಟಾನ ಮಾಡಿದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು ದುಡಿಯುವ ಸಮಯದಲ್ಲಿ ದುಡಿದು ಭವಿಷ್ಯದ ಹಿತ ದೃಷ್ಟಿಯಿಂದ ಉಳಿತಾಯ ಮಾಡಿದರೆ ಮುಂದಿನ ಬದುಕು ನೆಮ್ಮದಿಯಿಂದ ಕೂಡಿರುತ್ತದೆ ಎಂದು ವಿವರಿಸಿದರು.

ಪಡOಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಜೈನ್ ರವರು ಮಾತನಾಡುತ್ತ ಸಮಾಜಕ್ಕೆ ಮಾದರಿಯಾಗಿ ಸಮಾಜಕ್ಕೆ ಸೇವೆ ನೀಡುವ ಕೆಲಸವನ್ನು ಯೋಜನೆ ಮಾಡಿದ ಪರಿಣಾಮ ಸಂತೋಷ ದಿಂಡ ಬದುಕುವ ವಾತಾವರಣ ಪ್ರತಿಯೊಂದೂ ಹಳ್ಳಿಯಲ್ಲಿಯೂ ನಿರ್ಮಾಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರೆ ಫಾ ರೋಶನ್ ಕ್ರಾಸ್ತಾ ಧರ್ಮಗುರುಗಳು, ಆಡಳಿತ ಅಧಿಕಾರಿ ಸಂತ ರಫಾಯಲ್ ಚರ್ಚ್ fr L.M ಪಿಂಟೋ ಆಸ್ಪತ್ರೆ ಬದ್ಯಾರ್ ರವರು ಮಾತನಾಡುತ್ತ ಮನುಷ್ಯನಿಗೆ ಯಾವಾಗ ಕಾಯಿಲೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಇಂಥಹ ಸಂದರ್ಬದಲ್ಲಿ ಕುಟುಂಬ ಸಂದಿಗ್ತ ಪರಿಸ್ಥಿತಿ ಗೆ ಒಳಗಾಗುತ್ತದೆ ಪ್ರಗತಿ ಬಂಧು ಸ್ವಸಹಾಯ ಸಂಘಗಳು ಕಷ್ಟ ಕಾಲದಲ್ಲಿ ಸಹಕಾರಿ ಅಗುತ್ತದೆ ಸರ್ವ ಧರ್ಮದ ಸದಸ್ಯರು ಸೇರಿದಾಗ ಮಾತ್ರಾ ಸಮಗ್ರ ಅಭಿವೃದ್ದಿ ಅಗುತ್ತದೆ ಎಲ್ಲಾರೂ ತಮ್ಮ ಆರೋಗ್ಯದ ಕಡೆಗೆ ಗಮನ ನೀಡಬೇಕೆಂದು ಮನವರಿಕೆ ಮಾಡಿದರು ವೇದಿಕೆಯಲ್ಲಿ ಶ್ರೀ. ಪಿ. ಹೆಚ್. ಮುಹಮ್ಮದ್ ಆಶ್ರಫ್ ಧರ್ಮಗುರುಗಳು, ಮೊಹಿದ್ದೀನ್ ಜಮ್ಮಾ ಮಸೀದಿ ಪಡOಗಡಿ, ಶ್ರೀ ಆಂಥೋನಿ ಫೆರ್ನಾಂಡಿಸ್,ಅದ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪಡOಗಡಿ, ದ. ಕ 1 ಜಿಲ್ಲಾ ನಿರ್ದೇಶಕರಾದ ಶ್ರೀ ಮಹಾಬಲ ಕುಲಾಲ್, ನೂತನ ಒಕ್ಕೂಟದ ಅಧ್ಯಕ್ಷ ರಾದ ಸುರೇಶ್ ಪೂಜಾರಿ, ಉಸ್ಮಾನ್, ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ವಿನೋದಾ ಉಪಸ್ಥಿತರಿದ್ದರು.

ಸಬಾದ್ಯಕ್ಷತೆಯನ್ನು ಪಡOಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಸುವರ್ಣ ವಹಿಸಿದ್ದರು

ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ ಸ್ವಾಗತಿಸಿದರು, ಸೇವಾ ಪ್ರತಿನಿಧಿ ಶ್ರೀಮತಿ ರೇಷ್ಮಾ ವರದಿ ಮಂಡಿಸಿದರು ಮೇಲ್ವಿಚಾರಕರಾದ ಗುಣಕರ್, ವಸಂತ ನಿರೂಪಿಸಿದರು ವಲಯ ಮೇಲ್ವಿಚಾರಕ ರಾದ ಶ್ರೀಮತಿ ಹೇಮಾವತಿ ಧನ್ಯವಾದವಿತ್ತರು ಗುರುವಾಯನಕೆರೆ ವಲಯ ಮೇಲ್ವಿಚಾರಕ ರಾದ ಶ್ರೀಮತಿ ಯಶೋದಾ, ಕನ್ನಡಿ ಕಟ್ಟೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸ್ವಾತಿ ಸಹಕರಿಸಿದರು

Related posts

ಅಂತರ್ ಪಾಲಿಟೆಕ್ನಿಕ್ ತಾಂತ್ರಿಕ ಪ್ರದರ್ಶನ: ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya

ಗಡಿಪಾರು ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮಹೇಶ್ ಶೆಟ್ಟಿ ತಿಮರೋಡಿ

Suddi Udaya

ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಉಜಿರೆ ಕಾಲೇಜಿನ ವಿದ್ಯಾರ್ಥಿ ವಿನುತಾ ಆರ್. ನಾಯ್ಕ್ ಆಯ್ಕೆ

Suddi Udaya

51ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಸರಕಾರ ಆದೇಶ

Suddi Udaya

ಕನ್ಯಾಡಿ II ಸ.ಉ.ಹಿ.ಪ್ರಾ. ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya
error: Content is protected !!