25 C
ಪುತ್ತೂರು, ಬೆಳ್ತಂಗಡಿ
September 13, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಮಂಜುಶ್ರೀ ಸೀನಿಯರ್ ಛೇಂಬರ್ ವತಿಯಿಂದ ತುಳು ಕೂಟ ಇಸ್ರೇಲ್ ಸಹಕಾರದಲ್ಲಿ ಸುರೇಂದ್ರ ಬಲ್ಯಾಯಕೋಡಿರಿಗೆ ವೈದ್ಯಕೀಯ ನೆರವು ಹಸ್ತಾಂತರ

ಅಳದಂಗಡಿ: ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ವತಿಯಿಂದ ತುಳುಕೂಟ ಇಸ್ರೇಲ್ ಸಹಕಾರದಿಂದ ಅಪಘಾತದಿಂದ ಕಾಲು ಮುರಿತ್ತಕ್ಕೆ ಚಿಕಿತ್ಸೆ ಪಡೆಯುತ್ತಿರುವ ಸುರೇಂದ್ರ ಬಲ್ಯಾಯಕೋಡಿ ಇವರಿಗೆ ಧನ ಸಹಾಯ ಹಸ್ತಾಂತರ ಕಾರ್ಯಕ್ರಮ ಜು. 29 ರಂದು ಅಳದಂಗಡಿ ಅರಮನೆಯಲ್ಲಿ ನಡೆಯಿತು.

ಧನಸಹಾಯ ಹಸ್ತಾಂತರ ಮಾಡಿದ ಅಳದಂಗಡಿ ಅರಮನೆಯ ಅರಸರಾದ ಡಾ. ಪದ್ಮಪ್ರಸಾದ್ ಅಜಿಲರು ಮಾತನಾಡಿ ಮಂಜುಶ್ರೀ ಸೀನಿಯರ್ ಛೇಂಬರ್ ಮತ್ತು ಇಸ್ರೇಲ್ ತುಳುಕೂಟ ಹಲವು ಸಮಾಜಮುಖಿ ಕಾರ್ಯಕ್ರಮ ಮಾಡಿರುವುದು ತಿಳಿದು ಕೊಂಡಿರುತ್ತೇನೆ ಅರ್ಹ ವ್ಯಕ್ತಿಯನ್ನು ಗುರುತಿಸಿ ಈ ಧನ ಸಹಾಯ ನೀಡಿದ್ದೀರಿ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಮಂಜುಶ್ರೀ ಸೀನಿಯರ್ ಛೇಂಬರ್ ಅಧ್ಯಕ್ಷ ಜಾನ್ ಅರ್ವಿನ್ ಡಿಸೋಜ ವಹಿಸಿದ್ದರು.

ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಎನ್. ಮಂಜುನಾಥ ರೈ, ಕಾರ್ಯಕ್ರಮದ ಸಂಚಾಲಕ ಶುಭಾಶ್ಚಂದ್ರ ರೈ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಳದಂಗಡಿ ಸತ್ಯ ದೇವತಾ ದೇವಸ್ಥಾನದ ಮೋಕ್ತೆಸರ ಶಿವಪ್ರಸಾದ್ ಅಜಿಲ, ಸೀನಿಯರ್ ಛೇಂಬರ್ ಉಪಾಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ, ವಿಲ್ಸನ್ ಗೊನ್ಸಾಲಿಸ್, ಕೋಶಾಧಿಕಾರಿ ಪದ್ಮ ಕುಮಾರ್, ಸದಸ್ಯರುಗಳಾದ ಅಶೋಕ್ ಶೆಟ್ಟಿ, ವಿಶ್ವನಾಥ್ ಲಾಯಿಲ, ಪ್ರಸನ್ನ ಕುಮಾರ್, ಹರೀಶ್ ಶೆಟ್ಟಿ, ಸಂತೋಷ ಹೆಗ್ಡೆ, ರಾಧಾಕೃಷ್ಣ, ಭಾನುಪ್ರಸನ್ನ, ರೋನಾಲ್ಡ್ ಲೋಬೊ ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷ ಲ್ಯಾನ್ಸಿ ಪಿರೇರಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಉಮೇಶ್ ಕುಮಾರ್ ವಂದಿಸಿದರು.

Related posts

ಬಂಗಾಡಿ ಶಾಲೆಯ ಶಿಕ್ಷಕ ಅಮಿತಾನಂದ ಹೆಗ್ಡೆ ರವರಿಗೆ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Suddi Udaya

ಪೆರಿಂಜೆ ಶ್ರೀ ಧ.ಮ೦.ಅ. ಪ್ರೌಢ ಶಾಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

Suddi Udaya

ಜಾರಿಗೆಬೈಲಿನಲ್ಲಿ ಕೆ.ಎಮ್.ಜೆ. ವತಿಯಿಂದ “ಪ್ರಜಾ ಭಾರತ” ಸೌಹಾರ್ಧ ಕಾರ್ಯಕ್ರಮ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಆಶ್ರಯದಲ್ಲಿ ಪ್ರಕಟಿಸಿದ “ಸಿರಿ ಧಾನ್ಯ ಸಿರಿ-ಸರಿ” ಕೃತಿ ಹೇಮಾವತಿ ವೀ. ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಚುನಾವಣೆ: ಹೈಕೋರ್ಟು ತೀರ್ಪು ಪ್ರಕಟ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆ

Suddi Udaya

ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಹತ್ಯಡ್ಕ ಪರಿಸರದಲ್ಲಿ ಮರಗಳ ಮಾರಣ ಹೋಮ-ಸಚಿವರಿಗೆ ದೂರು

Suddi Udaya
error: Content is protected !!