25.6 C
ಪುತ್ತೂರು, ಬೆಳ್ತಂಗಡಿ
September 13, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಗುರು ಪೂರ್ಣಿಮೆ ಆಚರಣೆ

ಬೆಳ್ತಂಗಡಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಲಯನ್ಸ್ ಸೇವಾ ಭವನ, ಬೆಳ್ತಂಗಡಿ ಶಾಖೆಯಲ್ಲಿ ಗುರು ಪೂರ್ಣಿಮೆಯನ್ನು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಪ್ರತಿದಿನದ ಯೋಗಾಭ್ಯಾಸದ ನಂತರ ಯೋಗ ಬಂಧುಗಳು ತಮ್ಮ ಜೀವನದಲ್ಲಿ ಜ್ಞಾನ, ಸಂಸ್ಕಾರ ಹಾಗೂ ಆರೋಗ್ಯದ ದಾರಿಯನ್ನು ತೋರಿದ ಗುರುಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಅಶ್ವತ್ ಭಕ್ತಿರಸಪೂರ್ಣ ಭಜನೆ ನಡೆಸಿಕೊಟ್ಟು ಎಲ್ಲರ ಮನಸ್ಸನ್ನು ಭಕ್ತಿಭಾವದಲ್ಲಿ ತೇಲಿಸಿದರು.

ರವಿಕಲಾ ಗುರುಗಳ ಮಹತ್ವ, ಯೋಗದ ಮೌಲ್ಯ ಹಾಗೂ ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಯ ವೈಶಿಷ್ಟ್ಯವನ್ನು ಮನಮುಟ್ಟುವಂತೆ ಬೌದ್ಧಿಕದ ಮೂಲಕ ವಿವರಿಸಿದರು.

ಪೂರ್ಣಾವಧಿಯ ಯೋಗ ತರಗತಿಯನ್ನು ಗೀತಾ ನಡೆಸಿಕೊಟ್ಟರು. ಗಣಪತಿ ವಂದಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಯೋಗ ಬಂಧುಗಳು ಗುರುಗಳ ಆಶೀರ್ವಾದವೇ ಜೀವನದ ನಿಜವಾದ ಸಂಪತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಯೋಗದ ಮೂಲಕ ಆರೋಗ್ಯವಂತ ಹಾಗೂ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಸದಾ ಬದ್ಧರಾಗಿರುವ ಸಂಕಲ್ಪವನ್ನು ವ್ಯಕ್ತಪಡಿಸಿದರು.

Related posts

ಉರುವಾಲು ಸಿಡಿಲು ಬಡಿದು ಹಾನಿಯಾದ ಸೇಸಪ್ಪ ಗೌಡರ ಮನೆಗೆ ಕಣಿಯೂರು ಗ್ರಾ.ಪಂ. ನಿಂದ ಭೇಟಿ, ಪರಿಶೀಲನೆ

Suddi Udaya

ಬದ್ರಿಯಾ ಜುಮ್ಮಾ ಮಸ್ಜಿದ್ ಉಜಿರೆ ಟೌನ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಭೀಕರ ರಸ್ತೆ ಅಪಘಾತ; ಓರ್ವ ಯುವತಿಗೆ ಗಂಭೀರ ಗಾಯ

Suddi Udaya

ಇತಿಹಾಸ ಪ್ರಸಿದ್ದ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯಿ ದೈವಸ್ಥಾನದಲ್ಲಿ ಫೆಬ್ರವರಿ ತಿಂಗಳಲ್ಲಿ ಬ್ರಹ್ಮಕುಂಭಾಭಿಷೇಕ: ಅಧ್ಯಕ್ಷರಾಗಿ ಬರೋಡ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಕಾರ್ಯಾಧ್ಯಕ್ಷರಾಗಿ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಆಯ್ಕೆ

Suddi Udaya

ಅಳದಂಗಡಿಯಲ್ಲಿ ಆಮಂತ್ರಣ ದಶಮಾನೋತ್ಸವಕ್ಕೆ ಚಾಲನೆ

Suddi Udaya

ಮಚ್ಚಿನ ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಚೋತ್ಸವ ಕಾರ್ಯಕ್ರಮ

Suddi Udaya
error: Content is protected !!