24.7 C
ಪುತ್ತೂರು, ಬೆಳ್ತಂಗಡಿ
September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಾರ್ಡಿಯೋಲೋಜಿ ಡೋರ್ ಸ್ಟೆಪ್ ಸಂಸ್ಥೆಯಿಂದ ಮದ್ದಡ್ಕದ ಡಾ| ನಿಜಾಮ್, ಡಾ| ಆಶಿಕಾ ರವರಿಗೆ ಅತ್ಯಾಧುನಿಕ 3 ಚಾನೆಲ್ ಇಸಿಜಿ ಮೆಷಿನ್ ಕೊಡುಗೆ

ಕುವೆಟ್ಟು: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗುತ್ತಿದ್ದು ಇದನ್ನು ಪತ್ತೆ ಹಚ್ಚುವ ಇ ಸಿ ಜಿ ಯಂತ್ರವನ್ನು ಕಾರ್ಡಿಯೋಲೋಜಿ at ಡೋರ್ ಸ್ಟೆಪ್ (CAD) ಸಂಸ್ಥೆಯಿಂದ ಮದ್ದಡ್ಕ ಅಫಿಯಾ ಕ್ಲಿನಿಕ್ ನ ವೈದ್ಯರಾದ ಡಾ| ನಿಜಾಮ್ ಹಾಗೂ ಡಾ| ಆಶಿಕಾ ರವರಿಗೆ ಅತ್ಯಾಧುನಿಕ 3 ಚಾನೆಲ್ ಇಸಿಜಿ ಮೆಷಿನ್ ನ್ನು ಜು.30 ರಂದು ರಂದು ಪ್ರದೀಪ್ ನಾಯಕ್ ಬಲ್ಕತ್ಯಾರು ನೀಡಿದರು.

ಹೃದಯಕ್ಕೆ ಸಂಬಂಧಿಸಿದ ತಪಾಸಣೆ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿ ಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ಅಸ್ಪತ್ರೆಗೆ ಹೋಗಲು ಅನುಕೂಲವಾಗಬಹುದು ಈ ನಿಟ್ಟಿನಲ್ಲಿ ಹಳ್ಳಿ ಪ್ರದೇಶಗಳಲ್ಲಿ ಇಂತಹ ವ್ಯವಸ್ಥೆ ಅಗತ್ಯವಾಗಿದೆ ಎಂದು ಸ್ಥಳೀಯರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೋಗಿಯ ಇ ಸಿ ಜಿ ಯ ರಿಪೋರ್ಟ್‌ (CAD)ಕಾರ್ಡಿಯಾಲಾಜಿ ಅಟ್ ಡೊರು ಸ್ಟೆಪ್(ರಿ)ಇದರ ಸ್ಥಾಪಕರು ಮಂಗಳೂರಿನ ಪ್ರಖ್ಯಾತ ಹೃದ್ರೋಗ ತಜ್ಞ ಡಾ। ಪದ್ಮನಾಭ ಕಾಮತ್ ರವರು ರಿಪೋರ್ಟ್ ನೋಡಿ ತಕ್ಷಣ ರೋಗಿಯ ಮುಂದಿನ ಚಿಕಿತ್ಸೆಗೆ ನೀಡಲು ಅನುಕೂಲವಾಗಲಿದೆ. ಡಾ| ನಿಜಾಮ್ ಮಾತನಾಡಿ ಯಾವ ಸಮಯದಲ್ಲು ನನ್ನನ್ನು ತುರ್ತು ತಪಾಸಣೆಗೆ ಭೇಟಿಯಾಗಬಹುದು ಎಂದು ಹೇಳಿದರು.

Related posts

ಉಜಿರೆ: ಶ್ರೀ ಧ.ಮಂ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ‘ವಾಣಿಜ್ಯ ವ್ಯವಹಾರಗಳ ಅಧ್ಯಯನದಲ್ಲಿ ಯಾಂತ್ರಿಕ ಬುದ್ಧಿಮತ್ತೆಯ ಪಾತ್ರ’ ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya

ವಿಧಾನ ಪರಿಷತ್ ಚುನಾವಣೆ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಪದವಿಧರ ಕ್ಷೇತ್ರ ಶೇ 78.82 ಶಿಕ್ಷಕರ ಕ್ಷೇತ್ರ ಶೇ 81.54 ಮತದಾನ

Suddi Udaya

ಕೊಕ್ಕಡ ಶ್ರೀ ಕ್ಷೇ. ಧ.ಗ್ರಾ. ಯೋಜನೆಯ ಉಪ್ಪಾರಪಳಿಕೆ ಕಾರ್ಯಕ್ಷೇತ್ರದಲ್ಲಿ ವಿಶ್ವಜ್ಯೋತಿ ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ

Suddi Udaya

ದಿ| ಪ್ರವೀಣ್ ಬೆಳಾಲು ರವರ ಮನೆಗೆ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

Suddi Udaya

ಲಾಯಿಲ: ಸರ್ಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡ ತೆರವಿಗೆ ತಹಶೀಲ್ದಾರ್ ಆದೇಶ; ಕಟ್ಟಡಕ್ಕೆ ನೋಟೀಸ್ ಅಂಟಿಸಿದ ಅಧಿಕಾರಿಗಳು

Suddi Udaya

ಒಲಿಂಪಿಯಾಡ್ ಪರೀಕ್ಷೆಯಲ್ಲಿ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya
error: Content is protected !!