26 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಮನರಂಜನಾ ಕ್ಷೇತ್ರದಲ್ಲಿ ಎಐ ಬಳಕೆ ಕುರಿತು ವಿಶೇಷ ಉಪನ್ಯಾಸ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಬಿ.ವೋಕ್ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗದ ವತಿಯಿಂದ “ಎಂಟರ್‌ಟೈನ್‌ಮೆಂಟ್ ಕಂಟೆಂಟ್ ಕ್ರಿಯೇಷನ್‌ನಲ್ಲಿ ಕೃತಕ ಬುದ್ಧಿಮತ್ತೆ (AI)” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಆಗಸ್ಟ್ 3ರಂದು ಎಸ್‌ಡಿಎಂ ಪಿಜಿ ಕೇಂದ್ರದ ಎವಿ–01 ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಝೀ5 ಸಂಸ್ಥೆಯ ಸೀನಿಯರ್‌ ಮ್ಯಾನೇಜರ್‌ (ಕಂಟೆಂಟ್‌), ಸನಲ್ ನಾಯರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮನರಂಜನಾ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಹೆಚ್ಚುತ್ತಿರುವ ಬಳಕೆ, ಕಂಟೆಂಟ್ ನಿರ್ಮಾಣದ ವಿವಿಧ ಹಂತಗಳಲ್ಲಿ ಎಐನ ಪಾತ್ರ ಹಾಗೂ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿನ ಹೊಸ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕೃತಕ ಬುದ್ಧಿಮತ್ತೆಯನ್ನು ಸೃಜನಾತ್ಮಕವಾಗಿ ಮತ್ತು ಜವಾಬ್ದಾರಿಯುತವಾಗಿ ಬಳಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸಂವಾದದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಎಐಯ ಭವಿಷ್ಯದ ಸಾಧ್ಯತೆಗಳ ಕುರಿತು ಸಂಪನ್ಮೂಲ ವ್ಯಕ್ತಿ, ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಎಸ್‌ಡಿಎಂ ಬಿವೋಕ್‌ ಡಿಜಿಟಲ್‌ ಮೀಡಿಯಾ ಫಿಲ್ಮ್‌ ಮೇಕಿಂಗ್‌ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ ಉಪಸ್ಥಿತರಿದ್ದರು.

Related posts

ಪ್ರಕಾಶ್ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಕಾಶೋತ್ಸವ

Suddi Udaya

ಅನನ್ಯ ಭಟ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಅನನ್ಯ ಭಟ್ ನಾಪತ್ತೆ ಎಂಬ ವಿಷಯವೇ ಸುಳ್ಳು: ಸುಜಾತ ಭಟ್ ಸ್ವಷ್ಟನೆ

Suddi Udaya

ಕರ್ನಾಟಕ ರಾಜ್ಯ ಪ್ಯಾರಾಮೆಡಿಕಲ್ ಬೋರ್ಡ್ ರ್‍ಯಾಂಕ್ ಪ್ರಕಟ: ಗೇರುಕಟ್ಟೆ ಮನ್ ಶರ್ ಪ್ಯಾರಾಮೆಡಿಕಲ್ ಕಾಲೇಜಿಗೆ DMIT ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಒಟ್ಟು 6 ರ್‍ಯಾಂಕ್

Suddi Udaya

ಡಾನ್ಸ್ ರಿಯಾಲಿಟಿ ಶೋ: ಬೆಳ್ತಂಗಡಿಯ ಟಿವಾ ಡಾನ್ಸ್ ಕ್ರೀವ್ ವಿದ್ಯಾರ್ಥಿನಿ ಕು| ವಂಶಿ ತಂಡ ದ್ವಿತೀಯ ಸ್ಥಾನ

Suddi Udaya

ಉಜಿರೆ: ಶ್ರೀ ಧ.ಮಂ. ಮಹಿಳಾ ಐಟಿಐ ಕಾಲೇಜಿನಲ್ಲಿ ಸ್ತ್ರೀ ಆರೋಗ್ಯ ಮಾಹಿತಿ ಕಾರ್ಯಾಗಾರ

Suddi Udaya

ಎಕ್ಸಲೆಂಟ್ ವಾಣಿಜ್ಯ ವಿಭಾಗ – ಮರು ಮೌಲ್ಯಮಾಪನದಲ್ಲಿ 2 ರ‍್ಯಾಂಕ್ ಸೇರ್ಪಡೆ

Suddi Udaya
error: Content is protected !!