28.8 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗ್ರಾಮೀಣ ಜನರಿಗೆ ಬ್ಯಾಂಕಿಂಗ್ ಸೇವೆ ತಲುಪಿಸಿದ ಯಶೋಗಾಧೆ

ಬೆಳ್ತಂಗಡಿ: ಸುರೇಖಾ ಅವರು ಅವರು ತ್ರಿವರ್ಣ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ (ರಿ) ಇದರಲ್ಲಿ ಬ್ಯಾಂಕ್ ಕರೆಸ್ಪಾಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸೇವೆಯಿಂದ ಗ್ರಾಮದಲ್ಲಿನ ಜನರಿಗೆ ಬ್ಯಾಂಕಿಂಗ್ ಸೇವೆಗಳು ಸುಲಭವಾಗಿ ಹಾಗೂ ತ್ವರಿತವಾಗಿ ಲಭ್ಯವಾಗಿದೆ.

ಗ್ರಾಮದ ವೃದ್ಧರು ಮಹಿಳೆಯರು ರೈತರು ಹಾಗೂ ಕೂಲಿ ಕಾರ್ಮಿಕರು, ಬ್ಯಾಂಕ್‌ಗೆ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಬಹಳಷ್ಟು ಕಡಿಮೆಯಾಗಿದೆ. ಹಣ ಠೇವಣಿ, ಹಣ ಹಿಂಪಡೆಯುವುದು ಆಧಾರ್ ಆಧಾರಿತ ವಹಿವಾಟು, ಖಾತೆ ತೆರೆಯುವುದು, ಸರ್ಕಾರಿ ಯೋಜನೆಗಳ ಹಣ ವಿತರಣೆ ಹಾಗೂ ಇತರ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಮದಲ್ಲಿಯೇ ಒದಗಿಸುವ ಮೂಲಕ ಜನರ ಸಮಯ ಮತ್ತು ವೆಚ್ಚ ಉಳಿತಾಯವಾಗುತ್ತಿದೆ. ಸುರೇಖಾ ಅವರ ನಿರಂತರ ಸೇವೆಯಿಂದ ಗ್ರಾಮದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಜಾಗೃತಿ ಹೆಚ್ಚಿದ್ದು ನಗದು ರಹಿತ ವ್ಯವಹಾರಗಳ ಬಳಕೆಯ ವೃದ್ಧಿ ಮತ್ತು ಬ್ಯಾಂಕ್ ರಜಾ ದಿನಗಳಲ್ಲೂ ಸೇವೆ ಸಲ್ಲಿಸುವುದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ವಿಶೇಷವಾಗಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಹಾಗೂ ಹಿರಿಯ ನಾಗರಿಕರು ಈ ಸೇವೆಯಿಂದ ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ.

ಪ್ರಸ್ತುತ ಇವರ ಸೇವೆಯಾದ ಗ್ರಾಮದಲ್ಲಿ1300ಕ್ಕೂ ಹೆಚ್ಚು ಕುಟುಂಬಗಳು ಬ್ಯಾಂಕಿಂಗ್ ಸೌಲಭ್ಯವನ್ನು ಪಡೆದುಕೊಂಡಿದ್ದು ಪ್ರತಿದಿನ ಸರಾಸರಿ 5 ಲಕ್ಷ ವಹಿವಾಟುಗಳು ನಡೆಯುತ್ತಿವೆ. ಜನರ ವಿಶ್ವಾಸಗಳಿಸಿರುವ ಸುರೇಖಾ ಅವರ ಕಾರ್ಯ ಗ್ರಾಮೀಣ ಆರ್ಥಿಕ ಸಬಲೀಕರಣಕ್ಕೆ ಉತ್ತಮ ಮಾದರಿಯಾಗಿದೆ.

Related posts

ರಾಜ್ಯಮಟ್ಟದ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ : ಹೇಮಚಂದ್ರರಿಗೆ ಬೆಸ್ಟ್ ಲಿಪ್ಟರ್ ಕರ್ನಾಟಕ ಪ್ರಶಸ್ತಿ

Suddi Udaya

ಮಡಂತ್ಯಾರು : ಕುಕ್ಕಳದಲ್ಲಿ ಅಪಾಯದಂಚಿನಲ್ಲಿರುವ ವಿದ್ಯುತ್ ಕಂಬ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ ರವರಿಂದ ಕೃತಕ ಕಾಲಿನ ವ್ಯವಸ್ಥೆಗೆ ಸಹಾಯಹಸ್ತ

Suddi Udaya

ಕೊಕ್ಕಡ: ನೂತನ ಶ್ರೀ ಲಕ್ಷ್ಮೀ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ಉದ್ಘಾಟನೆ

Suddi Udaya

ಜೆಸಿಐ ಮಡಂತ್ಯಾರು ಆತಿಥ್ಯದಲ್ಲಿ ಅದ್ದೂರಿ ವ್ಯವಹಾರ ಸಮ್ಮೇಳನ 2025 – ಮೃದಂಗ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.1,979 ಕೋಟಿ ವ್ಯವಹಾರ, ರೂ.5.85 ಕೋಟಿ ಲಾಭ, ಶೇ.15 ಡಿವಿಡೆಂಡ್

Suddi Udaya
error: Content is protected !!