32 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಾಸಕ ಹರೀಶ್ ಪೂಂಜರಿಗೆ ಆದಿದ್ರಾವಿಡ ಸಮಾಜ ಸೇವಾ ಸಂಘದಿಂದ ಗೌರವ-ಸನ್ಮಾನ

ಬೆಳ್ತಂಗಡಿ: ಕರ್ನಾಟಕ ಟಿವಿ ಲೀಡರ್ ಅವಾರ್ಡ್ 2025 ‘ಉತ್ತಮ ಶಾಸಕ’ಪ್ರಶಸ್ತಿಗೆ ಭಾಜನರಾದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜರವರನ್ನು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಆ.2ರಂದು ಅವರ ನಿವಾಸದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಮುದಾಯದಲ್ಲಿರುವ ವಿವಿಧ ಸಮಸ್ಯೆ ಹಾಗೂ ಅದರ ಪರಿಹಾರದ ಕುರಿತು ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಕೊಕ್ಕಡ ಹಾಗೂ ತಾಲೂಕು ಘಟಕದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಕುಕ್ಕಳ ಚರ್ಚಿಸಿದರು. ಇದೇ ವೇಳೆ ಧರ್ಮಸ್ಥಳ ವಲಯ ಘಟಕದ ವತಿಯಿಂದ ಧರ್ಮಸ್ಥಳದಲ್ಲಿ ಸಮುದಾಯ ಭವನಕ್ಕೆ ಜಮೀನು, ಪ್ರತ್ಯೇಕ ರುದ್ರಭೂಮಿ ಹಾಗೂ ಬಡ ಕುಟುಂಬಗಳಿಗೆ ವಸತಿ ಹಾಗೂ ಕೃಷಿ ಚಟುವಟಿಕೆಗಳಿಗೆ ಜಮೀನು ಒದಗಿಸಿಕೊಡುವಂತೆ ಶಾಸಕರಿಗೆ ವಿಶೇಷ ಮನವಿಯನ್ನು ಸಲ್ಲಿಸಲಾಯಿತು. ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವ ಭರವಸೆಯನ್ನು ನೀಡಿದರು.

ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಕೊಕ್ಕಡ, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಕುಕ್ಕಳ, ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಲಕ್ಷö್ಮಣ್ ಜಿ.ಎಸ್., ರಾಘವ ಕಲ್ಮಂಜ, ರಾಮು ಪಡಂಗಡಿ, ಕು. ಗೌರಿ ತಾಲೂಕು ಘಟಕದ ಸದಸ್ಯರು, ಧರ್ಮಸ್ಥಳ ವಲಯ ಘಟಕದ ಅಧ್ಯಕ್ಷರಾದ ಗಣೇಶ್ ಡಿ., ಉಪಾಧ್ಯಕ್ಷೆ ಶ್ರೀಮತಿ ಸುಜಾತ, ಸದಸ್ಯರಾದ ಶ್ರೀಮತಿ ಸುನೀತಾ, ಕು. ಜ್ಯೋತಿ, ಶ್ರೀಮತಿ ಆಶಾ, ಕು. ವನಿತಾ ಉಪಸ್ಥಿತರಿದ್ದರು.

Related posts

ಕಕ್ಕಿಂಜೆ: ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

Suddi Udaya

ಮುಂಗಾರು ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಚಾಲನೆ

Suddi Udaya

ಬೆಳಾಲು ಶಾಲೆಯಲ್ಲಿ ದ.ರಾ. ಬೇಂದ್ರೆ ಕುರಿತು ಉಪನ್ಯಾಸ ಕಾರ್ಯಕ್ರಮ

Suddi Udaya

ಹೊಸಂಗಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಜ.25: ಕೊಕ್ಕಡ ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ “ಶ್ರೀ ಲಲಿತಾ ಸಹಸ್ರನಾಮ ಯಾಗ

Suddi Udaya

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ “CBK CUP” ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!