28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಡ : ಬಸ್ರಾಯ ವೆಂಟೆಡ್ ಡ್ಯಾಮಿನಲ್ಲಿ ಸಿಲುಕಿದ್ದ ಮರಗಳ ತೆರವು: ಗ್ರಾಮಸ್ಥರ ಶ್ರಮದಾನ

ನಡ : ನಿರಂತರ ಮಳೆಯಿಂದಾಗಿ ನಡ ಬಸ್ರಾಯ ವೆಂಟೆಡ್ ಡ್ಯಾಮಿನಲ್ಲಿ ಮರಗಳು ಹಾಗೂ ಕೊಂಬೆಗಳು ಸಿಲುಕಿ ನೀರಿನ ಹರಿವಿಗೆ ಅಡಚಣೆ ಉಂಟಾಗಿತ್ತು. ಇದರಿಂದ ಸಂಭವಿಸಬಹುದಾದ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ ಅಣ್ಣಪ್ಪಕೋಡಿ ಊರಿನ ಯುವಕರು ಹಾಗೂ ಗ್ರಾಮಸ್ಥರು ಒಗ್ಗಟ್ಟಿನಿಂದ ಶ್ರಮದಾನ ನಡೆಸಿ ಡ್ಯಾಮಿನಲ್ಲಿ ಸಿಲುಕಿದ್ದ ಮರಗಳನ್ನು ಯಶಸ್ವಿಯಾಗಿ ತೆರವುಗೊಳಿಸಿದರು.

ಈ ಕಾರ್ಯಾಚರಣೆಯಲ್ಲಿ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಭಾಗವಹಿಸಿ, ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸಾರ್ವಜನಿಕ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಿದ್ದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಶ್ರಮದಾನದಲ್ಲಿ ಲಿಂಗಪ್ಪ ಮೊಗೇರ, ವಿಜಯ್, ಡೆನಿಸ್ ಪೌಲ್, ವಿಕ್ಟರ್ ಡಿಸೋಜಾ, ಜಾರಪ್ಪ, ಜಯಂತ, ಸುಂದರ, ಬಿನೋಯ್ ಹಾಗೂ ಶ್ರೀಧರ್ ಮೊಗೇರ ಪ್ರಮುಖವಾಗಿ ಭಾಗವಹಿಸಿ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದರು.

Related posts

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚರ್ಚಾ ಸ್ಪರ್ಧೆ

Suddi Udaya

ಖ್ಯಾತ ಸಿನಿಮಾ ನಟ & ಸಿರಿ ಬ್ರ್ಯಾಂಡ್ ರಾಯಭಾರಿ ರಮೇಶ್ ಅರವಿಂದ್ ಸಿರಿ ಸಂಸ್ಥೆಯ ಪ್ರಧಾನ ಕಛೇರಿಗೆ ಭೇಟಿ

Suddi Udaya

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಓಣಂ ಆಚರಣೆ

Suddi Udaya

ಸಿಎ ಪರೀಕ್ಷೆಯಲ್ಲಿ ಉಜಿರೆಯ ಹರಿದಾಸ್ ರಾವ್ ಕೆ.ಜಿ. ಉತ್ತೀರ್ಣ     

Suddi Udaya

ಕಳೆಂಜ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಜನಸ್ಪಂದನ ಸಭೆ

Suddi Udaya

ನಾಪತ್ತೆಯಾದ ಬೆಳಾಲಿನ ಯುವತಿ ಮದುವೆಯಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರು

Suddi Udaya
error: Content is protected !!