July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೇತ್ರಾವತಿ ಪೀಕ್‌ಗೆ ಚಾರಣಿಗರ ಆಗಮನ ಶುರು: ಟ್ರೆಕ್ಕಿಂಗಳ ಸುರಕ್ಷತೆಗಾಗಿ ಅಲ್ಲಲ್ಲಿ ಸೂಚನ ಪಲಕ, ೧೧೫ ಟ್ರೆಕ್ ಗೈಡ್‌ಗಳ ನೇಮಕ

ವರದಿ: ಮನೀಶ್ ವಿ.ಅಂಚನ್ ಪಾಲೇದು

ಬೆಳ್ತಂಗಡಿ: ಬಿಸಿಲ ತಾಪಮಾನ, ಕಾಡ್ಗಿಚ್ಚಿನ ಮುಂಜಾಗ್ರತಾ ಕ್ರಮವಾಗಿ ಕಳೆದ ಮೂರು ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ತಾಲೂಕಿನ ಪಶ್ಚಿಮಘಟ್ಟದ ಪ್ರಮುಖ ಚಾರಣ ತಾಣ ನೇತ್ರಾವತಿ ಪೀಕ್ ಜೂ.1ರಿಂದ ತೆರೆದಿದ್ದು ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ. ಈ ಬಾರಿ ಚಾರಣಿಗಾರ ಸುರಕ್ಷತೆಗಾಗಿ ಅಲ್ಲಲ್ಲಿ ಸೂಚನ ಫಲಕ ಅಳವಡಿಸಲಾಗಿದ್ದು 115 ಮಂದಿ ಟ್ರಕ್ ಮಾರ್ಗದರ್ಶಿಗಳನ್ನು ನೇಮಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಅರೆ ಮಲೆನಾಡಿನ ಹಾಗೂ ಕಾಫಿನಾಡಿನ ಕಳಸ ತಾಲೂಕಿನ ಮಧ್ಯೆವಿರುವ ಈ ನೇತ್ರವಾತಿ ಪೀಕ್ ದಕ್ಷಿಣ ಕರ್ನಾಟಕದ ಪ್ರಮುಖ ಜೀವನಾಡಿಗಳಲ್ಲಿ ಒಂದಾಗಿದ್ದು ನೇತ್ರಾವತಿ ನದಿಯ ಉಗಮ ಸ್ಥಾನವಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಹಚ್ಚ ಹಸಿರಿನಿಂದ ಕಂಗೊಳಿಸುವ ದಟ್ಟವಾದ ಶೋಲಾ ಕಾಡುಗಳು, ತೆರೆದ ಹುಲ್ಲುಗಾವಲುಗಳು ಮತ್ತು ಕಲ್ಲಿನ ಭಾಗಗಳನ್ನು ಒಳಗೊಂಡಿದ್ದು, ಮಂಜಿನ ಮೋಡಗಳು ಮತ್ತು ರೋಮಾಂಚಕ ಕಾಡು ಹೂವುಗಳು, ಪ್ರಕೃತಿಯ ಮಡಿಲಲ್ಲಿ ಬೀಸವ ತಂಪಣೆಯ ಗಾಳಿ ಮನಸ್ಸಿಗೆ ಹಿತ ನೀಡುವ ಚಾರಣ ತಾಣವಾಗಿದೆ.

ವಿಹಂಗಮ ನೋಟಗಳು ಶಿಖರದಲ್ಲಿ, ಚಾರಣಿಗರಿಗೆ ಕುದುರೆಮುಖ, ಚಾರ್ಮಾಡಿ ಘಾಟ್‌ಗಳು ಮತ್ತು ಸುತ್ತಮುತ್ತಲಿನ ಶಿಖರಗಳ ಉಸಿರುಕಟ್ಟುವ ನೋಟಗಳು ದೊರೆಯುತ್ತವೆ. ಸ್ಪಷ್ಟ ದಿನದಂದು, ಹಚ್ಚ ಹಸಿರಿನ ಕಣಿವೆಗಳು ಮತ್ತು ಉರುಳುವ ಪರ್ವತಗಳು ಅಂತ್ಯವಿಲ್ಲದೆ ವಿಸ್ತರಿಸುತ್ತವೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪಶ್ಚಿಮ ಘಟ್ಟಗಳ ಭಾಗವಾಗಿರುವುದರಿಂದ, ಈ ಪ್ರದೇಶವು ಜೀವವೈವಿಧ್ಯದಿಂದ ಸಮೃದ್ಧವಾಗಿದೆ. ಇಲ್ಲಿ ಚಾರಣ ಮಾಡುವಾಗ, ವಿಲಕ್ಷಣ ಪಕ್ಷಿ ಪ್ರಭೇದಗಳು, ಚಿಟ್ಟೆಗಳು ಮತ್ತು ಸಾಂದರ್ಭಿಕವಾಗಿ ಕಾಡು ಪ್ರಾಣಿಗಳನ್ನು ಭೇಟಿ ಆಗುವ ಸಂದರ್ಭಗಳಿವೆ.

ಆನ್‌ಲೈನ್ ಬುಕಿಂಗ್ ಕಡ್ಡಾಯ:
ಚಾರಣಕ್ಕೆ ತೆರಳುವ ಮುನ್ನ ಅರಣ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು. ಪರಿಸರ ಸಂರಕ್ಷಣೆಗಾಗಿ ಪ್ರತಿದಿನ ಕೇವಲ 300 ಜನರಿಗೆ ಮಾತ್ರ ಚಾರಣ ಕೈಗೊಳ್ಳಲು ಅನುಮತಿ ನೀಡಲಾಗಿದೆ. ವೀಕೆಂಡ್‌ಗಳಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಸರ್ಕಾರ ಮತ್ತು ಅರಣ್ಯ ಇಲಾಖೆಯು ಹೊರಡಿಸಿರುವ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು (ಎಸ್‌ಒಪಿ) ಪ್ರವಾಸಿಗರು ಕಡ್ಡಾಯವಾಗಿ ಪಾಲಿಸಬೇಕು.

ಚಾರಣಿಗಾರ ಮಾಹಿತಿಗಾಗಿ ಸೂಚನ ಪಲಕ:
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಾದ ನೇತ್ರವಾತಿ ಪೀಕ್ ನಡಿಗೆಗೆ ಅರಣ್ಯ ಇಲಾಖೆ ಟ್ರಕ್ಕಿಂಗ್ ಮಾಹಿತಿಗಳನ್ನು ಚಾರಣ ಸ್ಥಳದಲ್ಲಿ ಅಳವಡಿಸಲಾಗಿದೆ. ಚಾರಣಿಗ ಪ್ರದೇಶ ದಾರಿಯ ಅಲ್ಲಲ್ಲಿ ಸೂಕ್ತ ಮಾಹಿತಿ ಬೋರ್ಡ್ ಹಾಕಿದ್ದು ಪ್ರವಾಸಿಗರಿಗೆ ಸಮರ್ಪಕ ಮಾಹಿತಿ ಇದರಿಂದ ತಿಳಿಯಬಹದು.

ಸೂಚನಫಲಕದಲ್ಲಿ ಎನಿದೆ:
ಬೆಳ್ತಂಗಡಿ ವನ್ಯಜೀವಿ ಅರಣ್ಯ ಇಲಾಖೆ ಆರ್‌ಎಫ್‌ಓ ವಿ.ಶರ್ಮಿಷ್ಠಾ ಹಾಗೂ ತಂಡ ಖುದ್ಧು ಚಾರಣಿಗಾರ ಸುರಕ್ಷತೆಗಾಗಿ ಸಿದ್ಧಪಡಿಸಿರುವ ಸೂಚನಪಲಕದಲ್ಲಿ ಚಾರಣಿಗ ದಾರಿ ಮಧ್ಯೆ ಕುಡಿಯುವ ನೀರು ಹಾಗೂ ಮೊಬೈಲ್ ನೆಟ್ವರ್ಕ್ ಪಾಯಿಂಟ್‌ಗೆವಿರುವ ದೂರ, ಚಾರಣದ ಅಂತಿಮ ಹಂತಕ್ಕೆ ದೂರ, ಚಾರಣ ದಿಕ್ಕಿನ ಮಾಹಿತಿ, ಆಫ್‌ಲೈನ್ ನಕ್ಷೆಗಾಗಿ ಕ್ಯೂರ್ ಕೊಡ್ ಲೋಕೇಶನ್, ಆಸ್ಪತ್ರೆ, ಪೊಲೀಸ್, ಅರಣ್ಯ ಇಲಾಖೆ ಸೇರಿದ್ದಂತೆ ಇತರ ತುರ್ತು ಸಂಪರ್ಕ ಸಂಖ್ಯೆಯನ್ನು ಈ ಫಲಕದಲ್ಲಿ ಹಾಕಲಾಗಿದೆ. ಹಾಗೇಯೆ ಬಿಸಿ ಮತ್ತು ತಂಪು ಕುಡಿಯವ ನೀರು ಮತ್ತು ಶೌಚಾಲಯದ ಸೌಲಭ್ಯ ಇದೆ.

ಟ್ರಕ್ ಗೈಡ್:
ಪ್ರತಿದಿನ ೩೦೦ ಮಂದಿಗೆ ಚಾರಣಪಥ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಅಂದರೆ ದಿವಸಕ್ಕೆ 300 ಟಿಕೆಟ್‌ಗೆ ಮಾತ್ರ ಸೀಮಿತವಾಗಿದೆ. 115 ಮಂದಿ ಟ್ರರ್ಕ್ ಮಾರ್ಗದರ್ಶಿಗಳನ್ನು ನೇಮಿಸಲಾಗಿದೆ. ಅವರಿಗೆ ರಿಫ್ಲೆಕ್ಟರ್ ಜಾಕೆಟ್, ಟಿ-ಶಾರ್ಟ್, ಬ್ಯಾಗ್, ಟ್ರಕ್ ಮಾರ್ಗದರ್ಶಿ ಕೈಪಿಡಿ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ವಾಕಿಟಾಕಿ, ಟ್ರೆಕ್ ಮಾರ್ಗದ ಕೆಎಮ್‌ಎಲ್ ಸ್ಕಾನ್ ಮಾಡಲು ಕ್ಯೂರ್ ಕೋಡ್ ನೀಡಲಾಗಿದೆ. ಪ್ರತಿಯೊಬ್ಬ ಟ್ರಕ್ ಗೈಡ್‌ನೊಂದಿಗೆ ೧೦ ಮಂದಿ ಪ್ರವಾಸಿಗರ ಗುಂಪು ಚಾರಣಪಥ ವೀಕ್ಷಣೆಗೆ ತೆರಳುತ್ತದೆ. ಗೈಡ್‌ಗಳು ವಾಕಿಟಾಕಿ ಮೂಲಕ ಬೆಸ್ ಕ್ಯಾಂಪ್ ಕಂಟ್ರೋಲ್ ರೂಮ್‌ನೊಂದಿಗೆ ಸಂಪರ್ಕದಲ್ಲಿರಬಹುದಾಗಿದೆ.

ಟಿಕೆಟ್ ಬುಕ್ಕಿಂಗ್ ದಂಧೆ:
ಜೂ.6ರ ಚಾರಣಕ್ಕಾಗಿ ಮೇ 22 ರಂದು ನೇತ್ರಾವತಿ ಪೀಕ್‌ನ ಆನ್‌ಲೈನ್ ಬುಕ್ಕಿಂಗ್ ವಿಂಡೋ ಓಪನ್ ಆಗಿತ್ತು. ಆಶ್ಚರ್ಯವೆಂದರೆ ಕೇವಲ 47 ಸೆಕೆಂಡ್‌ಗಳಲ್ಲಿ ದಿನದ ಕೋಟಾದ ಒಟ್ಟು 300 ಟಿಕೆಟ್‌ಗಳೂ ಸಂಪೂರ್ಣ ಸೋಲ್ಡ್ ಔಟ್ ಆಗಿವೆ! ಹಾಗೆಯೇ ಜೂ.13ರ 300 ಟಿಕೆಟ್‌ಗಳು ಕೇವಲ 10 ನಿಮಿಷಗಳಲ್ಲಿ ಮಾಯವಾಗಿವೆ.
ಇದು ಸಾಮಾನ್ಯ ಸಾರ್ವಜನಿಕರಿಂದ ಸಾಧ್ಯವೇ ಇಲ್ಲದ ಮಾತು. ಬೆಂಗಳೂರಿನ ಕೆಲವು ಪ್ರಮುಖ ಖಾಸಗಿ ಟ್ರೆಕ್ಕಿಂಗ್ ಏಜೆನ್ಸಿಗಳು ಕಚೇರಿಗಳಲ್ಲಿ 20ರಿಂದ 25ನೌಕರರನ್ನು ಏಕಕಾಲಕ್ಕೆ ಕಂಪ್ಯೂಟರ್ ಮುಂದೆ ಕೂರಿಸಿ, ವಿಭಿನ್ನ ಐಡಿಗಳ ಮೂಲಕ ಒಂದೇ ಸೆಕೆಂಡಿನಲ್ಲಿ ನೂರಾರು ಟಿಕೆಟ್‌ಗಳನ್ನು ಕಬಳಿಸುತ್ತಿವೆ. ಇದರಿಂದಾಗಿ ರಾಜ್ಯದ ಮೂಲೆಮೂಲೆಗಳಿಂದ ಸ್ವತಂತ್ರವಾಗಿ ಬರಬಯಸುವ ನಿಜವಾದ ಚಾರಣಿಗರಿಗೆ ಒಂದೇ ಒಂದು ಟಿಕೆಟ್ ಕೂಡ ಸಿಗದಂತಾಗಿದೆ.

ಕ್ಲಬ್‌ಗಳು ಅವರ ನೌಕರರ ಮೂಲಕ ಆರಂಭದಲ್ಲೇ 40-50 ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳುತ್ತವೆ. ಟಿಕೆಟ್ ಸಿಗದೆ ಹತಾಶರಾಗಿರುವ ಪ್ರವಾಸಿಗರಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಈ ವಾರ ನೇತ್ರಾವತಿ ಸ್ಲಾಟ್ಸ್ ಲಭ್ಯವಿದೆ ಎಂದು ಆರ್ ಇಡುತ್ತವೆ. ಕೇವಲ 500 ರೂ.ನ ಅರಣ್ಯ ಇಲಾಖೆಯ ಅಧಿಕೃತ ಟಿಕೆಟ್ ಅನ್ನು ಒಳಗೊಂಡಂತೆ, ಒಬ್ಬರಿಗೆ 3500ರಿಂದ 4000 ರೂ.ನ ದುಬಾರಿ ಪ್ಯಾಕೇಜ್ ನಿಗದಿಪಡಿಸಲಾಗುತ್ತದೆ. ಮುಗ್ಧ ಪ್ರವಾಸಿಗರು ಒಪ್ಪಿಕೊಂಡ ನಂತರ ಮೊದಲೇ ಕಾಯ್ದಿರಿಸಿ…

Related posts

ಹಳೆಪೇಟೆ ಪ್ರೌಢಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂಘ ಉದ್ಘಾಟನೆ

Suddi Udaya

ರಾಜ್ಯಮಟ್ಟದ ಜನಪದ ಗೀತಗಾಯನದಲ್ಲಿ ವಾಣಿ ಕಾಲೇಜಿನ ರೇಂಜರ್ಸ್ ತಂಡ ಪ್ರಥಮ

Suddi Udaya

ವ್ಯಾಪಕ ಮಳೆ : ದಕ್ಷಿಣ ಕನ್ನಡದಲ್ಲಿ ಜೂನ್ 28 ಎಲ್ಲ ಪ್ರೌಢಶಾಲೆಗಳಿಗೆ ಹಾಗೂ ಪ.ಪೂ. ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

‘ಗೀತಗಾಯನ’ ಸ್ಪರ್ಧೆ: ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಮಾ.10: ಅಂತರಾಷ್ಟ್ರೀಯ ಬಿಲ್ಲವರ ಮಹಾ ಸಮಾವೇಶ: ಕಳಿಯ ಗ್ರಾಮದ ಬಿಲ್ಲವರ ಪೂರ್ವಭಾವಿ ಸಭೆ

Suddi Udaya

ಜೂ.18-23: ಉಜಿರೆಯಲ್ಲಿ ಬೆಂಗಳೂರು ಜೀವನ ಕಲೆ ಪ್ರತಿಷ್ಠಾನ ಸಂಸ್ಥೆ ವತಿಯಿಂದ ‘ಆನಂದೋತ್ಸವ ಶಿಬಿರ’

Suddi Udaya
error: Content is protected !!