26.9 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾವೂರು ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಬೆಳ್ತಂಗಡಿ: ಲಾಯಿಲ ಪ್ರಸನ್ನ ಎಜ್ಯುಕೇಶನ್ ಟ್ರಸ್ಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಳ್ತಂಗಡಿ, ಬಾಲವಿಕಾಸ ಸಮಿತಿ ನಾವೂರು ಇದರ ಜಂಟಿ ಆಶ್ರಯದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮವು ನಾವೂರು ಅಂಗನವಾಡಿ ಕೇಂದ್ರದಲ್ಲಿ ಆ.6ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೇಸ್ ಚಾಕೋ ನೆರವೇರಿಸಿ ಮಾತನಾಡಿ ಎದೆಹಾಲಿನ ಮಹತ್ವ ಹಾಗೂ ನಾವು ಸೇವಿಸಬೇಕಾದ, ನಮ್ಮಲ್ಲಿಯೇ ಸುತ್ತಮುತ್ತಲು ಸಿಗುವ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿ ಪ್ರಸನ್ನ ಎಜ್ಯಕೇಶನ್ ಟ್ರಸ್ಟ್ ಉಪನ್ಯಾಸಕಿ ಡಾ. ಕವಿತಾ ಪ್ರದೀಪ್ ಮಾತನಾಡಿ ಎದೆಹಾಲಿನ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷ ಸುಮ ಸುರೇಶ್, ಇಂದಬೆಟ್ಟು ವಲಯದ ಹಿರಿಯ ಮೇಲ್ವಿಚಾರಕಿ ವಾಣಿಶ್ರೀ ಆರ್., ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸುನಂದ, ಗಣೇಶ್ ಗೌಡ ನೆಲ್ಲಿಪಲಿಕೆ, ಆರೋಗ್ಯ ಕಾರ್ಯಕರ್ತೆ ಪುಷ್ಪಲತಾ, ಹಾಲಿನ ಡೈರಿಯ ಮಾಜಿ ಅಧ್ಯಕ್ಷ ಉಮೇಶ್ ಪ್ರಭು ಉಪಸ್ಥಿತರಿದ್ದರು.


ಕಾರ್ಯಕ್ರಮಕ್ಕೆ ಮಕ್ಕಳ ಪೋಷಕರು, ಸ್ತ್ರೀಶಕ್ತಿ ಸದಸ್ಯರು, ಬಾಲವಿಕಾಸ ಸಮಿತಿಯ ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಜರಿದ್ದರು.
ಅಂಗನವಾಡಿ ಕಾರ್ಯಕರ್ತೆ ಸುನಂದ ನಿರೂಪಿಸಿ, ರಜಿತ್ ಕುಮಾರ್ ಸ್ವಾಗತಿಸಿದರು. ಉಮೇಶ್ ಪ್ರಭು ಹಡೀಲು ವಂದಿಸಿದರು.

Related posts

ಕಳೆಂಜ ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya

ಬಂದಾರು: ಚಂದ್ರಶೇಖರ್ ನಾಯಕ್ ರವರ ತೋಟಕ್ಕೆ ಕಾಡಾನೆ ದಾಳಿ-ಅಪಾರ ನಷ್ಟ

Suddi Udaya

ಹೊಸಂಗಡಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಉಜಿರೆ: ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Suddi Udaya

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಗೆಲುವು: ಬೈಕ್ ಜಾಥದ ಮುಖೇನಾ ಗೆಲುವನ್ನು ಸಂಭ್ರಮಿಸಿದ ನಾಲ್ಕೂರಿನ ಕಾರ್ಯಕರ್ತರು

Suddi Udaya

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ವಾರ್ಷಿಕ ವ್ಯವಹಾರ ರೂ.300 ಕೋಟಿ – ಲಾಭ ರೂ.1.13 ಕೋಟಿ – ಶೇ.16 ಡಿವಿಡೆಂಟ್

Suddi Udaya
error: Content is protected !!