27.4 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಲಾಯಿಲ ಭೂ ಪರಿವರ್ತನೆಯಾಗದ ಜಾಗಕ್ಕೆ ಉದ್ಯಮ ಲೈಸೆನ್ಸ್: ಲೋಕಾಯುಕ್ತದಲ್ಲಿ ದೂರು ದಾಖಲು

ಬೆಳ್ತಂಗಡಿ : ಲಾಯಿಲ ಗ್ರಾಮ ಪಂಚಾಯತ್‌ನಿಂದ ಭೂ ಪರಿವರ್ತನೆಯಾಗದ ಜಾಗದಲ್ಲಿ ಹೊಟೇಲ್ ಉದ್ಯಮ ನಡೆಸಲು ನಿಯಮ ಬಾಹಿರವಾಗಿ ವಾಣಿಜ್ಯ ವ್ಯವಹಾರದ ಪರವಾನಿಗೆಯನ್ನು ಈ ಹಿಂದಿನ ಪಿಡಿಒ ನೀಡಿದ್ದಾರೆ ಎಂದು ಆರೋಪಿಸಿ, ಇದರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಲಾಯಿಲ ಗ್ರಾಮದ ಎಚ್.ಅಬ್ದುಲ್ ಕರೀಮ್ ಎಂಬವರ ಪತ್ನಿಗೆ ಸೇರಿದ ಸ.ನಂ: ೧೬೪/೨ಃ೧ಃ ರಲ್ಲಿ ೦.೦೧.೫೦ ಎಕ್ರರೆ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡದೇ ನ್ಯೂ ಮೈನಾ ಹೊಟೇಲ್ ಹೆಸರಿನಲ್ಲಿರುವ ವಾಣಿಜ್ಯ ವ್ಯವಹಾರದ ಉದ್ದೇಶಕ್ಕಾಗಿ ಜಾಗದ ಮಾಲಿಕರು ಪತ್ನಿ ಆಗಿದ್ದರೂ ಪತಿ ಹೆಸರಿಗೆ 2025 ಸೆ.30ರಂದು ಲಾಯಿಲಾ ಗ್ರಾಮ ಪಂಚಾಯತ್‌ನಲ್ಲಿ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿದ್ದ ಶ್ರೀನಿವಾಸ.ಡಿ.ಪಿ ಇವರು ನಿಯಮ ಬಾಹಿರವಾಗಿ ಲೈಸೆನ್ಸ್ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತಕ್ಷಣ ಈ ಬಗ್ಗೆ ತನಿಖೆ ನಡೆಸಿ, ಕಾನೂನು ಪ್ರಕಾರ ಯಾವುದೇ ದಾಖಲೆಗಳಿಲ್ಲದೆ ಲೈಸೆನ್ಸ್ ಮಾಡಿಸಿಕೊಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆ.6 ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Related posts

ಕೊಕ್ಕಡ ಸಂತ ಜೋನ್ ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ ಯುವದಿನಾಚರಣೆ ಪ್ರಯುಕ್ತ ಸ್ವ ಉದ್ಯೋಗ ಮಾಹಿತಿ ತರಬೇತಿ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ ವಾರ್ಷಿಕ ಜಾತ್ರಾಮಹೋತ್ಸವ: ಧಾರ್ಮಿಕ ಸಭೆ

Suddi Udaya

ಆ. 9: ಅಳದಂಗಡಿ ಪ್ರಾ.ಕೃ.ಪ. ಸಹಕಾರ ಸಂಘದ ಸುವರ್ಣ ಮಹೋತ್ಸವ ಸಮಾಲೋಚನಾ ಸಭೆ

Suddi Udaya

ಅಖಿಲ ಕರ್ನಾಟಕ ರಾಜಕೇಸರಿ ಸಂಘಟನೆ ನೇತೃತ್ವದಲ್ಲಿ ಸ್ಥಳೀಯ ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಬ್ಯಾಗ್ ವಿತರಣೆ

Suddi Udaya

ಅ.15-22: ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

Suddi Udaya
error: Content is protected !!