September 23, 2026
ಗ್ರಾಮಾಂತರ ಸುದ್ದಿ

ಆಶಾ ಯಂಗ್ ಸ್ಟಾರ್ ಕ್ಲಬ್ ಕಾರ್ಯಕಾರಿ ಸಮಿತಿ ಸಭೆ

ಬೆಳ್ತಂಗಡಿ, ಆ. 8: ಆಶಾ ಯಂಗ್ ಸ್ಟಾರ್ ಕ್ಲಬ್ (ರಿ.) ಕಾರ್ಯಕಾರಿ ಸಮಿತಿ ಸಭೆ ಅಧ್ಯಕ್ಷ ಶ್ರೀ ಜಯರಾಮ್ ಬಂಗೇರ ಅವರ ಅಧ್ಯಕ್ಷತೆಯಲ್ಲಿ. ಆ . 8ರಂದು ಆಶಾ ಯಂಗ್ ಸ್ಟಾರ್ ಕ್ಲಬ್ ನಲ್ಲಿನಡೆಯಿತು.

ಸಭೆಯಲ್ಲಿ ಕ್ಲಬ್ಬಿನ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮುಂದಿನ ಮಹಾಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡುವುದರೊಂದಿಗೆ ಹೆಚ್ಚಿನ ಸದಸ್ಯರನ್ನು ಸಂಘಟನೆಯೊಂದಿಗೆ ಸೇರಿಸಿಕೊಳ್ಳಲು ನಿರ್ಧರಿಸಲಾಯಿತು

.

ಮಳೆಗಾಲ ಮುಗಿದ ಬಳಿಕ ಕ್ಲಬ್ಬಿನ ಕಟ್ಟಡದ ಮುಂಭಾಗದಲ್ಲಿ “ಆಶಾ ಯಂಗ್ ಸ್ಟಾರ್ ಕ್ಲಬ್ (ರಿ.)” ಎಂಬ ಹೆಸರನ್ನು ಅಳವಡಿಸಲು ಹಾಗೂ ಕ್ಲಬ್ಬಿನ ನೋಂದಣಿ ಪ್ರಕ್ರಿಯೆಯನ್ನು ಕಾರ್ಯದರ್ಶಿ ಶ್ರೀ ವಿಶ್ವನಾಥ ಶೆಟ್ರು ಅವರು ಯುವಜನ ಸೇವಾ ಇಲಾಖೆಯೊಂದಿಗೆ ಸಂಪರ್ಕಿಸಿ ಪೂರ್ಣಗೊಳಿಸಲು ತೀರ್ಮಾನಿಸಲಾಯಿತು. ಮುಂದಿನ ಮಹಾಸಭೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಯಿತು.

ಒಗ್ಗಟ್ಟು, ಸ್ನೇಹ ಮತ್ತು ಸೇವೆಯ ಸಂಕಲ್ಪದೊಂದಿಗೆ ಕ್ಲಬ್ ನ್ನು ಇನ್ನಷ್ಟು ಬಲಿಷ್ಠವಾಗಿ ಬೆಳೆಸುವ ಆಶಯವನ್ನು ಸಭೆ ವ್ಯಕ್ತಪಡಿಸಿತು.

ಅಧ್ಯಕ್ಷರು: ಶ್ರೀ ಜಯರಾಮ್ ಬಂಗೇರ
ಕಾರ್ಯದರ್ಶಿ: ಶ್ರೀ ವಿಶ್ವನಾಥ ಶೆಟ್ಟಿ. ಸದಸ್ಯರಾದ ಲಕ್ಷ್ಮಣ್ ಪೂಜಾರಿ. ನಾರಾಯಣಶೆಟ್ಟಿ. ಶಿವಪ್ಪ ಬಿರ್ವಾ. ಪಾಲಕ್ಷ ಸುವರ್ಣ. ಸಂತೋಷ್ ಕುಮಾರ್. ಜೀವನ್ ಪತ್ರವೋ.
ಸಂಜೀವ ಬಿಹೆಚ್. ಮುಂತಾದವರು ಉಪಸ್ಥಿತರಿದ್ದರು.

Related posts

ಕಳೆಂಜ ಸಂತ ಸೆಬಾಸ್ಟಿಯನ್ ದೇವಾಲಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಿಂದ ಮರಣ ನಿಧಿ ಪತ್ರ ಹಸ್ತಾಂತರ

Suddi Udaya

ಮೈರೋಳ್ತಡ್ಕ: ಗುಂಡಿ ಬಿದ್ದ ರಸ್ತೆಗೆ ಪಂಚಾಯತ್ ವತಿಯಿಂದ ಸುಗಮ ಸಂಚಾರಕ್ಕೆ ವ್ಯವಸ್ಥೆ

Suddi Udaya

ನಡ: ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ, ವೈಭವೋಪೇತ ಶೋಭಾಯಾತ್ರೆ , ಧಾರ್ಮಿಕ ಸಭೆ

Suddi Udaya

ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯ ವಾರ್ಷಿಕೋತ್ಸವ

Suddi Udaya

ಇಂದಬೆಟ್ಟು ಸ.ಹಿ ಪ್ರಾಥಮಿಕ ಶಾಲಾ ಸಂಸತ್ ರಚನೆ

Suddi Udaya
error: Content is protected !!