September 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೌತಡ್ಕದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷ ಕೃಷ್ಣ ಶೆಟ್ಟಿಗೆ ಅಭಿನಂದನೆ

ಕೊಕ್ಕಡ: ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣ ಶೆಟ್ಟಿ, ಕಡಬ ಅವರಿಗೆ ಅಭಿನಂದನಾ ಕಾರ್ಯಕ್ರಮವು ಆ. 8ರಂದು ಸೌತಡ್ಕದ ಸೇವಾಧಾಮದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ವಹಿಸಿದ್ದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷ ಕೃಷ್ಣ ಶೆಟ್ಟಿ, ಕಡಬ, ಲಯನ್ಸ್ ಕ್ಲಬ್ ಇಂಟ‌ರ್ ನ್ಯಾಷನಲ್ ವಲಯಾಧ್ಯಕ್ಷ ಲಯನ್ಸ್ ದೇವದಾಸ್ ಶೆಟ್ಟಿ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ಭಟ್, ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಪಟ್ಟೂರು ಶ್ರೀರಾಮ ಶಾಲೆಯ ಅಧ್ಯಕ್ಷ ಜನಾರ್ದನ ಕಜೆ ಹಾಗೂ ಶ್ರೀ ಮಹಾಗಣಪತಿ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಉಪಸ್ಥಿತರಿದ್ದರು.

ಶ್ರೀ ರಾಮ ವಿದ್ಯಾ ಸಂಸ್ಥೆ ಪಟ್ಟೂರು, ಶ್ರೀ ವಿದ್ಯಾಗಣಪತಿ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡ ರಚನ ಸಮಿತಿ ಸೌತಡ್ಕ ವತಿಯಿಂದ ವಿವೇಕಾನಂದ ವಿದ್ಯಾ ವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣ ಶೆಟ್ಟಿ ಕಡಬ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಿಡ್ಲೆ ಗ್ರಾಮದ ಪೈರೋಡಿ ಸತ್ಯನಾರಾಯಣ ರಾವ್ ಅವರು ನೂತನ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಮೊದಲ ಕಂತಾಗಿ ರೂ.40 ಸಾವಿರ ನೀಡಿದ್ದು, ಉಳಿದ ರೂ.10 ಸಾವಿರ ಮೊತ್ತವನ್ನು ಕಾರ್ಯಕ್ರಮದಲ್ಲಿ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದ ಸ್ವಾಗತವನ್ನು ಹರೀಶ್ ರಾವ್ ಮುಂಡ್ರುಪ್ಪಾಡಿ ನೆರವೇರಿಸಿದರು. ಜನಾರ್ದನ ಕಜೆ ಧನ್ಯವಾದ ಸಮರ್ಪಿಸಿದರು. ಪಟ್ಟೂರು ಶಾಲೆಯ ಸಹ ಶಿಕ್ಷಕಿಯರಾದ ಭವ್ಯ ಮತ್ತು ರಕ್ಷಿತ ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ (ರಿ.) ಸೌತಡ್ಕದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು, ಹಿತೈಷಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Related posts

ಶ್ರೀ ಭಗವದ್ಗೀತಾ ಸ್ಪರ್ಧೆ : ಉಜಿರೆಯ ಎಸ್.ಡಿ.ಎಂ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಹಂಸಿನಿ ಭಿಡೆಗೆ ರಾಜ್ಯಮಟ್ಟದಲ್ಲಿ ತೃತೀಯ ಬಹುಮಾನ

Suddi Udaya

ಎ.10: ಧರ್ಮಸ್ಥಳ ಗೀತ ನೃತ್ಯಾಲಯ ನೃತ್ಯ ತರಬೇತಿ ಕೇಂದ್ರ ಪ್ರಸ್ತುತಪಡಿಸುವ “ನೃತ್ಯ ರಶ್ಮಿ ನೃತ್ಯೋತ್ಸವ ಹಾಗೂ ಗುರುವಂದನೆ” ಮತ್ತು ಪ್ರಥಮ ವರ್ಷದ ಸಂಭ್ರಮ

Suddi Udaya

ಧರ್ಮಸ್ಥಳ ಎಸ್.ಡಿ.ಎಂ ಅನುದಾನಿತ ಪ್ರೌಢಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಉಜಿರೆ: ನಿಡಿಗಲ್ ನಿವಾಸಿ ಜಾನಕಿ ಭಂಡಾರಿ ನಿಧನ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಗೆ ಶೇ. 98.61

Suddi Udaya

ಶಿಶಿಲ : ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಡಿತ; ಮಹಿಳೆ ಸಾವು

Suddi Udaya
error: Content is protected !!