September 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂಡಿಯನ್ ರೆಡ್‌ಕ್ರಾಸ್ ಮಂಗಳೂರು ಸಹಯೋಗದಲ್ಲಿ ರಕ್ತದಾನ ಶಿಬಿರ ಆ.8ರಂದು ನಡೆಯಿತು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಇವರು ಮಾತನಾಡುತ್ತಾ, ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಆಶೀರ್ವಾದಲ್ಲಿ ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ ಇವರ ಮಾರ್ಗದರ್ಶನದಲ್ಲಿ ಅತ್ಯಂತ ಅವಶ್ಯವಾಗಿರುವ ರಕ್ತದಾನ ಶಿಬಿರವನ್ನು ನಿರಂತರವಾಗಿ ನಮ್ಮ ಆಸ್ಪತ್ರೆಯ ವತಿಯಿಂದ ನಡೆಸುತ್ತಿದ್ದೇವೆ. ದಾನ ಮಾಡಿದವರಿಗೂ ಅನುಕೂಲವಾಗುವ ದಾನ ಅಂದರೆ ಅದು ರಕ್ತದಾನ. ರಕ್ತದಾನ ಮಾಡಿದಾಗ ಉಚಿತವಾಗಿ ನಿಮ್ಮ ರಕ್ತದ ಪರೀಕ್ಷೆ ನಡೆಯುತ್ತದೆ. ದಾನದಿಂದಾಗಿ ನಿಮ್ಮ ಶರೀರದಲ್ಲಿ ರಕ್ತದ ಮರುಸೃಷ್ಟಿಯಾಗುತ್ತದೆ. ನೀವು ನೀಡುವ ರಕ್ತ 3-4 ಮಂದಿಗೆ ಪ್ರಯೋಜನಕ್ಕೆ ಬರುತ್ತದೆ ಎಂದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ ರಕ್ತದಾನದ ಮಹತ್ವ ವಿವರಿಸುತ್ತಾ, ಮಳೆಗಾಲದಲ್ಲಿ ಡೆಂಗ್ಯೂ ಸರ್ವೇಸಾಮಾನ್ಯ. ಡೆಂಗ್ಯೂ ಪೀಡಿತರಲ್ಲಿ ಪ್ಲೇಟ್‌ಲೆಟ್ ಕೊರತೆ ಇರುವುದರಿಂದ ಈ ಸಮಯದಲ್ಲಿ ರಕ್ತದಾನ ಹೆಚ್ಚಿನ ಮಹತ್ವ ಪಡೆಯುತ್ತದೆ ಎಂದರು.


ವೈದ್ಯಕೀಯ ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಮಾತನಾಡಿ ರಕ್ತದಾನ ಮಾಡುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಮತ್ತು ಕೊಲೆಸ್ಟಾçಲ್ ಮಟ್ಟ ನಿಯಂತ್ರಣದಲ್ಲಿರುತ್ತದೆ ಎಂದರು.
ನರರೋಗ ತಜ್ಞರಾದ ಡಾ| ಅರುಣ್ ಕುಮಾರ್ ಮಾತನಾಡಿ, ರಕ್ತದ ಅವಶ್ಯಕತೆ ಇರುವ ರೋಗಿಗೆ ಮತ್ತು ವೈದ್ಯರಿಗೆ ರಕ್ತದ ಮಹತ್ವ ಗೊತ್ತಿರುತ್ತದೆ. ಎಷ್ಟೋ ಬಾರಿ ವೈದ್ಯರು ರೋಗಿಯ ಜೀವ ಉಳಿಸಲು ರಕ್ತಕ್ಕಾಗಿ ಪರದಾಡಬೇಕಾಗುತ್ತದೆ ಎಂದರು.
ಮAಗಳೂರಿನ ರೆಡ್‌ಕ್ರಾಸ್ ಸಂಸ್ಥೆಯ ಟೆಕ್ನಿಕಲ್ ಸೂಪರ್‌ವೈಸರ್ ನಾಗಭೂಷನ್ ಮಾತನಾಡುತ್ತಾ, ಇನ್ನೊಬ್ಬರ ಜೀವ ಉಳಿಸಬಲ್ಲ ಉದ್ದೇಶದಿಂದ ಮಾಡುವ ರಕ್ತದಾನ ದಾನಗಳಲ್ಲಿಯೇ ಶ್ರೇಷ್ಠದಾನ. ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತದ ತುರ್ತು ಅವಶ್ಯಕತೆ ಇರುವ ನೂರಾರು ರೋಗಿಗಳಿಗೆ ಸಹಾಯ ಮಾಡಿದೆ ಎಂದರು.

ಬ್ಲಡ್ ಸ್ಟೋರೇಜ್ ಮೆಡಿಕಲ್ ಆಫೀಸರ್ ಡಾ| ಪ್ರೌಸ್ಟಿಲ್ ರಕ್ತದಾನಿಗಳಿಗೆ ಶುಭಹಾರೈಸಿದರು. ಮಾರುಕಟ್ಟೆ ಮತ್ತು ಸಂಪರ್ಕ ಅಧಿಕಾರಿ ಭವಿಷ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಾರ್ಕೆಟಿಂಗ್ ಎಕ್ಸ್ಕ್ಯೂಟಿವ್ ಸುಮಂತ್ ರೈ ಮತ್ತು ಲ್ಯಾಬ್ ಇನ್‌ಚಾರ್ಜ್ ಮೀಣಾಕ್ಷಿ ರಮೇಶ್ ಸಹಕರಿಸಿದರು.

Related posts

ಹೇರಾಜೆ ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ವಾರ್ಷಿಕೋತ್ಸವದಲ್ಲಿ ಪದ್ಮರಾಜ್ ಆರ್. ಪೂಜಾರಿ ಭಾಗಿ

Suddi Udaya

ಆಪರೇಷನ್ ಸಿಂಧೂರ: ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ

Suddi Udaya

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಡಿಪ್ಲೋಮಾ ಕೋರ್ಸ್ ಗೆ ವಿವಿಧ ಸಂಸ್ಥೆಗಳಿಂದ ಅರ್ಜಿ ಆಹ್ವಾನ

Suddi Udaya

ಇಂದಬೆಟ್ಟು ಎಮ್.ಜೆ.ಎಮ್ ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ

Suddi Udaya

ಫೆ.15 (ನಾಳೆ) ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಲ್ಲಿ ಶಾಸಕ ಹರೀಶ್ ಪೂಂಜರವರ ವಿಶೇಷ ಪ್ರಯತ್ನದಲ್ಲಿ ರೂ.26 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ “ಅಕ್ಷಯ ಪಾಕಶಾಲೆ” ಲೋಕಾರ್ಪಣೆ

Suddi Udaya
error: Content is protected !!