September 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಣ್ಣೀರುಪಂತ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ. 306.80ಕೋಟಿ ವ್ಯವಹಾರ, ರೂ. 1.09 ಕೋಟಿ ಲಾಭ, ಶೇ.12 ಡಿವಿಡೆಂಡ್

ಕಲ್ಲೇರಿ: ತಣ್ಣೀರುಪಂತ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಆ.8 ರಂದು ಸಂಘದ ಅಧ್ಯಕ್ಷ ಜಯಾನಂದ ಕಲ್ಲಾಪು ಅಧ್ಯಕ್ಷತೆಯಲ್ಲಿ ಸಂಘದ ರೈತ ಸಭಾಭವನದಲ್ಲಿ ನಡೆಯಿತು.

ಅಧ್ಯಕ್ಷ ಜಯಾನಂದ ಕಲ್ಲಾಪು ಮಾತನಾಡಿ ಸಂಘದ ಸದಸ್ಯರಿಗೆ 12% ಡಿವಿಡೆಂಡ್ ಘೋಷಿಸಲಾಗಿದೆ. ಸಾಲ ವಸೂಲಿ ಶೇ. 100 ಆಗಿವೆ ಅಲ್ಲದೆ ಕಳೆದ 25 ವರ್ಷಗಳಿಂದ ಸತತವಾಗಿ ಲೆಕ್ಕ ಪರಿಶೋಧನೆ ಯಲ್ಲಿ ‘ಎ’ ಗ್ರೇಡ್ ಪಡೆದಿರುವುದು ಅಲ್ಲದೆ ಸತತ 25 ವರ್ಷಗಳಿಂದ ಲಾಭದಲ್ಲಿ ನಡೆಯುತ್ತಿದೆ. ಈ ಸಾಧನೆಗೆ ಸದಸ್ಯರುಗಳ, ನಿರ್ದೇಶಕರುಗಳ ಸಹಕಾರ ಹಾಗೂ ಮಾರ್ಗದರ್ಶನ ಅಲ್ಲದೆ ನಮ್ಮ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಕಾರಣ ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷ ಸುನೀಲ್ ಅಣಾವು, ನಿರ್ದೇಶಕರಾದ ಕೃಷ್ಣಪ್ಪ ಗೌಡ, ರೋಹಿತ್ ಶೆಟ್ಟಿ, ಸಾಮ್ರಾಟ್, , ರಜನಿನಾಥ್, ಸುರೇಶ್, ಶ್ರೀನಿವಾಸ್, ಜಯಂತಿ ಪಾಲೇದು, ಜಯವಿಕ್ರಮ್ ಕಲ್ಲಾಪು, ಹಾಗೂ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ:
ಸಂಘದ ವ್ಯಾಪ್ತಿಯ ಉರುವಾಲು, ತಣ್ಣೀರುಪಂತ, ಕರಾಯ  ಗ್ರಾಮಗಳಲ್ಲಿನ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಉನ್ನತ ಮಟ್ಟದಲ್ಲಿ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ನಿರ್ದೇಶಕರಾದ ಜಗದೀಶ್ ಶೆಟ್ಟಿ ಮೈರ ಸ್ವಾಗತಿಸಿ, ಸರೋಜಿನಿ ವಂದಿಸಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಂದ್ರ ಪ್ರಸಾದ್ ಕೆ ನಿರೂಪಿಸಿದರು.

Related posts

ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಯು.ಕೆ ಮುಹಮ್ಮದ್ ಹನೀಫ್ ನೇಮಕ

Suddi Udaya

ಹರೇಕಳ ಹಾಜಬ್ಬರಿಂದ ವಿದ್ವತ್ ಕಾಲೇಜಿನಲ್ಲಿ ವಾಕ್ ಇನ್ ಟು ವಿದ್ವತ್ ನಾಮಫಲಕ ಅನಾವರಣ: ಕಾಲೇಜಿನ ಭೌತಶಾಸ್ತ್ರ, ರಸಾಯನಶಾಸ್ತ್ರ,ಜೀವಶಾಸ್ತ್ರ ವಿಭಾಗದ ಲ್ಯಾಬ್ ಉದ್ಘಾಟನೆ:

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ಹಿಂದುಳಿದ ವರ್ಗಗಳ ಮೊರ್ಚಾದ ಉಪಾಧ್ಯಕ್ಷರಾಗಿ ರಾಜೇಶ್ ಪೂಜಾರಿ ಮೂಡುಕೋಡಿ

Suddi Udaya

ಮೋದಿ ಅಭಿಮಾನಿ ಶಿಶಿಲ ದೇನೋಡಿ ಯುವ ಬ್ರಿಗೇಡ್‌ ಕಾರ್ಯಕರ್ತ ತಿಲಕ್ ರ ಮದುವೆ: ಮೋದಿಮಯವಾಗಿ ಪರಿವರ್ತನೆಯಾದ ಮದುವೆ ಮಂಟಪ: “ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿಯಾಗಬೇಕು” ಎಂಬ ಸಂದೇಶ

Suddi Udaya

ಕರ್ನಾಟಕ ಬ್ಯಾಂಕ್ ವತಿಯಿಂದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗೆ ಬಸ್ಸು ಕೊಡುಗೆ

Suddi Udaya

ಅಳದಂಗಡಿ ಹಿಂದೂ ಯುವ ಶಕ್ತಿ ಆಲಡ್ಕ ಕ್ಷೇತ್ರ, ರಾಜಕೀಯ ರಹಿತ ಸಾಮಾಜಿಕ ಸೇವಾ ಸಂಘಟನೆಯ ನೂತನ ಪ್ರದಾನ ಕಚೇರಿ ಉದ್ಘಾಟನೆ

Suddi Udaya
error: Content is protected !!