September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಣಿಯೂರು: ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದಲ್ಲಿ ಆಟಿಡೊಂಜಿ ಕೂಟ: ಶಾಸಕ ಹರೀಶ್ ಪೂಂಜ ಭಾಗಿ

ಕಣಿಯೂರು: ಕಣಿಯೂರು ಗ್ರಾಮ ಪದ್ಮುoಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದಲ್ಲಿ ಆಟಿಡೊಂಜಿ ಕೂಟ ವಿಶೇಷ ಕಾರ್ಯಕ್ರಮ ನಡೆಯಿತು.

ಪದ್ಮುಂಜ ಸಿ.ಎ. ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಇವರು ಅಧ್ಯಕ್ಷತೆ ವಹಿಸಿ ಎಂಡೋಸಲ್ಫಾನ್ ಸಂತ್ರಸ್ತರ ನೆರವಿಗಾಗಿ ಶಾಸಕ ಹರೀಶ್ ಪೂಂಜಾರವರು ನಡೆಸಿದ ಹೋರಾಟವನ್ನು ನೆನಪಿಸಿಕೊಂಡರು. ಕಣಿಯೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗಾಯತ್ರಿ ಗೋಪಾಲ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು,

ಮುಖ್ಯ ಅತಿಥಿಗಳಾಗಿ ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಕಾಸಿಂ ಪದ್ಮುಂಜ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಸಕ ಹರೀಶ್ ಪೂಂಜ ಅವರು ಸಂತ್ರಸ್ತರ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಕುಂದು-ಕೊರತೆಗಳನ್ನು ಪರಿಶೀಲಿಸಿದರು ಹಾಗೂ ಸಂತ್ರಸ್ತರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಕೃಷ್ಣಯ್ಯ ಆಚಾರ್ಯ, ಮಹೇಶ್ ಜೇoಕ್ಯಾರ್, ಆಸ್ಪತ್ರೆ ಸಿಬ್ಬಂದಿ ಸುಂದರಿ ಅವರು ಹಳೆ ಕಾಲದ ನೇಜಿದ ಸಂದಿ ಪಾಡ್ಡನ ನಡೆಸಿಕೊಟ್ಟರು. ಸಂತ್ರಸ್ತರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹಲವು ಬಗೆಯ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ಪರಿಚಯಿಸಲಾಯಿತು. ಮೇಲ್ವಿಚಾರಕಿ ಶ್ರೀಮತಿ ಚಂದ್ರಿಕಾ, ಫಿಸಿಯೋಥೆರಪಿಸ್ಟ್ ರಶ್ಮಿತಾ, ಕೌಶಲ್ಯ ತರಬೇತಿ ಅಧ್ಯಾಪಕಿ ವಿನಯ,ಸಿಬ್ಬಂದಿಗಳಾದ ಶಾಲಿನಿ, ಪ್ರಮೀಳಾ, ಉಷಾ,ಹಾಗೂ ಪೋಷಕರು ಮತ್ತು ಸಂತ್ರಸ್ತರು ಉಪಸ್ಥಿತರಿದ್ದರು.
ಶಿಕ್ಷಕಿ ಸುಜಾತ ಸ್ವಾಗತಿಸಿ, ರಶ್ಮಿತಾ ಧನ್ಯವಾದವಿತ್ತರು.

Related posts

ಬೆಳ್ತಂಗಡಿಯಲ್ಲಿ ಕೆಆರ್‌ಎಸ್ ಪಕ್ಷ ಅಸ್ತಿತ್ವಕ್ಕೆ: ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದ ಗುರಿ: ವೇಣುಗೋಪಾಲ್

Suddi Udaya

ಎಂಡೋಸಲ್ಫಾನ್ ಕೇಂದ್ರಕ್ಕೆ ಶುದ್ಧ ಕುಡಿಯುವ ನೀರಿನ ಯಂತ್ರ ಹಸ್ತಾಂತರ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಪಿ. ಕುಶಾಲಪ್ಪ ಗೌಡ, ಉಪಾಧ್ಯಕ್ಷರಾಗಿ ಮಹಾಬಲ ಶೆಟ್ಟಿ ಆಯ್ಕೆ

Suddi Udaya

ಬೆಳ್ತಂಗಡಿ ಬಿಜೆಪಿ ಕಚೇರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

Suddi Udaya

ಬೆಳ್ತಂಗಡಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾಗಿ ಗಾಯತ್ರಿ ಪಿ ಅಧಿಕಾರ ಸ್ವೀಕಾರ

Suddi Udaya

ಬೆಳ್ತಂಗಡಿ: ಮುಗುಳಿ ವಸತಿ ನಿಲಯದ ಬಳಿ ಅಡಿಕೆ ತೋಟದಲ್ಲಿ ಚಿರತೆ ಪತ್ತೆ

Suddi Udaya
error: Content is protected !!