30.7 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ದಯಾ ವಿಶೇಷ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ

ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ಫಾದರ್ ಎಲ್. ಎಂ. ಪಿಂಟೋ ಆಸ್ಪತ್ರೆ, ಬದ್ಯಾರ್ ಇವರ ವತಿಯಿಂದ ವಿಶೇಷ ಮಕ್ಕಳಿಗಾಗಿ ಉಚಿತ ವೈದ್ಯಕೀಯ ಶಿಬಿರವನ್ನು ಯಶಸ್ವಿಯಾಗಿ ಆ.12 ರಂದು ಆಯೋಜಿಸಲಾಯಿತು.

ಈ ವೈದ್ಯಕೀಯ ಶಿಬಿರದಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳು ಭಾಗವಹಿಸಿ, ದಯಾ ವಿಶೇಷ ಶಾಲೆಯ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು. ಮಕ್ಕಳ ಸಾಮಾನ್ಯ ಆರೋಗ್ಯ, ದೈಹಿಕ ಬೆಳವಣಿಗೆ ಹಾಗೂ ಅಗತ್ಯ ವೈದ್ಯಕೀಯ ಸಲಹೆಗಳನ್ನು ನೀಡಲಾಯಿತು. ಅಗತ್ಯವಿರುವ ಮಕ್ಕಳ ಪೋಷಕರಿಗೆ ಮುಂದಿನ ಚಿಕಿತ್ಸೆಗೆ ಸಂಬಂಧಿಸಿದ ಮಾರ್ಗದರ್ಶನವನ್ನೂ ನೀಡಲಾಯಿತು.

ವಿಶೇಷ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಿದ ಫಾದರ್ ಎಲ್. ಎಂ. ಪಿಂಟೋ ಆಸ್ಪತ್ರೆ, ಬದ್ಯಾರ್ ವೈದ್ಯರು ಮತ್ತು ಸಿಬ್ಬಂದಿಗಳಿಗೆ ದಯಾ ವಿಶೇಷ ಶಾಲೆಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮವು ವಿಶೇಷ ಮಕ್ಕಳ ಆರೋಗ್ಯ ಮತ್ತು ಆರೈಕೆಯ ದೃಷ್ಟಿಯಿಂದ ಅತ್ಯಂತ ಉಪಯುಕ್ತವಾಗಿದ್ದು, ಸುಮಾರು 48 ಮಕ್ಕಳು, ಈ ಸೇವೆಯ ಪ್ರಯೋಜನ ಪಡೆದುಕೊಂಡರು.

Related posts

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮಕಲಶೋತ್ಸವಗಣಪತಿ ಹೋಮ, ಮಕರ ಲಗ್ನದಲ್ಲಿ ಶ್ರೀ ಉಳ್ಳಾಲ್ತಿ ದೇವಿಯ ಪ್ರತಿಷ್ಠೆ ಜಿವ ಕಲಶಾಭಿಷೇಕ,ಗ್ರಾಮ ಸುಭೀಕ್ಷೇಗಾಗಿ ಶ್ರೀಚಕ್ರ ಪೂಜೆ

Suddi Udaya

ಕರ್ತವ್ಯ ಲೋಪ ಆರೋಪ: ಮರೋಡಿ ಗ್ರಾಮ‌ ಲೆಕ್ಕಾಧಿಕಾರಿ ಶಿವಕುಮಾರ್ ಸಸ್ಪೆಂಡ್ ಗೆ ಸೂಚನೆ

Suddi Udaya

ಮೈರೋಳ್ತಡ್ಕ ಶಾಲಾ ಅಮೃತಮಹೋತ್ಸವ ಪ್ರಯುಕ್ತ ಆಧಾರ್ ನೋಂದಣಿ-ತಿದ್ದುಪಡಿ ಕಾರ್ಯಕ್ರಮ

Suddi Udaya

ದ.ಕ‌ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಗೌರವಾನ್ವಿತ ರಾಜ್ಯಪಾಲರ ಭೇಟಿ: ಕು.ಸೌಜನ್ಯಳ ಹತ್ಯೆ ಪ್ರಕರಣದ ಮರುತನಿಖೆಗೆ ಮನವಿ ಸಲ್ಲಿಕೆ

Suddi Udaya

ವೇಣೂರು: ಉಂಬೆಟ್ಟು ಸ.ಉ.ಪ್ರಾ. ಶಾಲೆಯ ಕಟ್ಟಡ ಮೇಲ್ಛಾವಣಿ ದುರಸ್ತಿಗೆ ಧರ್ಮಸ್ಥಳ ಯೋಜನೆಯಿಂದ ರೂ ಒಂದು ಲಕ್ಷ ಅನುದಾನ

Suddi Udaya

ಬೆಳ್ತಂಗಡಿ ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಆಟಿದ ಕಷಾಯ ಮತ್ತು ಮೆತ್ತೆಗಂಜಿ ವಿತರಣೆ

Suddi Udaya
error: Content is protected !!