25 C
ಪುತ್ತೂರು, ಬೆಳ್ತಂಗಡಿ
September 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ: ಸದಸ್ಯರಿಗೆ ಶೇ. 9 ಡಿವಿಡೆಂಟ್

ಗೇರುಕಟ್ಟೆ : ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಆ.13ರಂದು ಸಂಘ ವಠರಾದಲ್ಲಿ ನಡೆಯಿತು.

ಸರಕಾರದ ಯೋಜನೆಗಳ ಬಗ್ಗೆ ಹಾಗೂ ಹೈನುಗಾರಿಕೆಯಲ್ಲಿ ಉತ್ತಮ ಗುಣಮಟ್ಟದ ಹಾಲು ಸಂಗ್ರಹಿಸಿ ಮತ್ತು ಹೆಚ್ಚಿನ ಲಾಭ ಪಡೆಯುವ ಬಗ್ಗೆ ಮಾಹಿತಿಯನ್ನು ದ.ಕ.ಒಕ್ಕೂಟದ ವಿಸ್ತಾರಣಾಧಿಕಾರಿ ರಾಜೇಶ್ ಪಿ.ಕಾಮತ್ ಸಂಘದ ಸದಸ್ಯರಿಗೆ ಮಾಹಿತಿ ನೀಡಿ,ಸಂಘದ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಜನಾರ್ಧನ ಗೌಡ ಕೆ.ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡುತ್ತಾ ನಮ್ಮ ಸಂಘದ ಸದಸ್ಯರು ಗುಣಮಟ್ಟದ ಹಾಲು ಪೂರೈಕೆ ಹಾಗೂ ಸಂಘದ ಪಶು ಆಹಾರವನ್ನು ಸಂಘದ ಮೂಲಕ ಸದಸ್ಯರು ಖರೀದಿ ಮಾಡುವ ಮೂಲಕ ಸಂಘವೂ ಲಾಭ ಗಳಿಸಲು ಸಾಧ್ಯವಾಯಿತು. ಸದಸ್ಯರ ಮತ್ತು ಸಿಬ್ಬಂದಿಗಳ ಸಂಪೂರ್ಣವಾದ ಸಹಕಾರದ ಅಗತ್ಯವಿದೆ ಎಲ್ಲಾ ಸದಸ್ಯರು ಇನ್ಸೂರೆನ್ಸ್ ಮಾಡಬೇಕಾಗಿ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಸಿರಿಲ್ ಪಿಂಟೋ, ನಿರ್ದೇಶಕರಾದ ಕುಶಲಾವತಿ,ಪ್ರವೀಣ ಪೂಜಾರಿ, ಕೆ.ಗಿರಿಯಪ್ಪ ಗೌಡ, ಸಿರಿಲ್ ಪಿಂಟೊ, ಕೇಶವ ಪೂಜಾರಿ, ವಸಂತ ನಾಯ್ಕ,ಯೋಗಿನಿ, ಗಂಗಯ್ಯ ಗೌಡ ಮತ್ತು ರೇಖಾ ಉಪಸ್ಥಿತರಿದ್ದರು.

ಪ್ರತಿದಿನ ಸರಾಸರಿ 2,100 ಲೀಟರ್‌‌‌ ಹಾಲು ಸಂಗ್ರಹಿಸಿ ಒಕ್ಕೂಟಕ್ಕೆ ಒದಗಿಸುತ್ತಿದೆ. ಒಟ್ಟು ವ್ಯವಹಾರ 12,83,02,842.80 ಹಾಗೂ ನಿವ್ವಳ ಲಾಭ 10,27,224.83. ಸಂಘಕ್ಕೆ ಹಾಲು ಪೂರೈಕೆ ಮಾಡುವ ಸದಸ್ಯರಿಗೆ ಲಾಭಾಂಶದ ಶೇಕಡಾ 65 ನ್ನು ಬೋನಸ್ ಆಗಿ ನೀಡಲಾಯಿತು.

ಷೇರು ಡಿವಿಡೆಂಟ್ : ಸಂಘದ ಸದಸ್ಯರಿಗೆ ಶೇಕಡ 9 ಡಿವಿಡೆಂಟ್ ಸಭೆಯಲ್ಲಿ ಘೋಷಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳಿಯ, ನ್ಯಾಯತರ್ಪು ಶ್ರೀ ವರ ಮಹಾಲಕ್ಷ್ಮಿ ಪೂಜಾ ಸಮಿತಿ ವತಿಯಿಂದ ಸಂಘಕ್ಕೆ ಸ್ಪಿಕಿಂಗ್ ಸ್ಟೇಂಡ್ ಒಂದನ್ನು ನ್ಯಾಯತರ್ಪು ಪ್ರತಿನಿಧಿ ಸುಮಿತ್ರಾ, ಕಳಿಯ , ಪ್ರತಿನಿಧಿ ಸೌಮ್ಯ, ಪೂಜಾ ಸಮಿತಿ ಅಧ್ಯಕ್ಷ ಸಂಧ್ಯಾ, ನ್ಯಾಯತರ್ಪು ಒಕ್ಕೂಟದ, ಅಧ್ಯಕ್ಷ ಸಿದ್ದಪ್ಪ ಗೌಡ, ಕಳಿಯ ಒಕ್ಕೂಟದ ಅಧ್ಯಕ್ಷೆ ಸುಭಾಷಿಣಿ ಕೆ. ಪದಾಧಿಕಾರಿಗಳು ಸಂಘದ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡುವ ಸದಸ್ಯರಾದ ಪ್ರಥಮ: ವೀರಪ್ಪ ಪೂಜಾರಿ ದಂಪತಿಗಳು, ದ್ವೀತಿಯ: ಸಂಘದ ಉಪಾಧ್ಯಕ್ಷ ಸಿರಿಲ್ ಪಿಂಟೋ ದಂಪತಿಗಳು, ತೃತೀಯ: ವಲೇರಿಯನ್ ದಂಪತಿ ಸಮೇತ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ : ಹಾಲು ಉತ್ಪಾದಕರ ಸಂಘದ ಸದಸ್ಯರ ಮಕ್ಕಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ ಹತ್ತನೇ ತರಗತಿ ಮತ್ತು ಪಿಯುಸಿ ಯಲ್ಲಿ ಅಧಿಕ ಆಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸಂಘದ ಕಾರ್ಯದರ್ಶಿ ಗುಲಾಬಿ ಪಿ. ವಾರ್ಷಿಕ ಸಭೆಯಲ್ಲಿ ವಾಚಿಸಿದರು. ಸಂಘದ ಸಿಬ್ಬಂದಿಗಳಾದ ಗುಮಾಸ್ತೆ ಶಾಲಿನಿ, ಶಾಖೆ ಸಹಾಯಕ ವಿಜಯ ಕುಮಾರ್ ಕೆ., ಹಾಲು ಪರೀಕ್ಷಕ ಸಿದ್ದಪ್ಪ ಗೌಡ, ಮತ್ತು ಕೃ.ಗ.ಕಾರ್ಯಕರ್ತ ಉಮೇಶ ಗೌಡ ಬಿ. ಸಹಕರಿಸಿದರು.

ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಳಿಯ ಸಿ.ಎ.ಬ್ಯಾಂಕ್ ಸಿಬ್ಬಂದಿ ಜಗನ್ನಾಥ ಪ್ರಾರ್ಥನೆ ಹಾಡಿದರು. ಸಂಘದ ನಿರ್ದೇಶಕ ರಂಜನ್ ಹೆಚ್. ಸ್ವಾಗತಿಸಿ, ಸಂಘದ ಸದಸ್ಯ ಉಮೇಶ್ ಕೇಲ್ದಡ್ಕ ಕಾರ್ಯ ನಿರೂಪಿಸಿದರು.
ಸಂಘದ ನಿರ್ದೇಶಕ ನೇವಿಲ್ ಸ್ಟೀವನ್ ಮೋರಸ್ ವಂದಿಸಿದರು.

Related posts

ಖ್ಯಾತ ಪತ್ರಕರ್ತ, ಉತ್ತಮ ಕತೆಗಾರ ಮನೋಹರ್ ಪ್ರಸಾದ್ ನಿಧನ

Suddi Udaya

ತೆಕ್ಕಾರು ಕುಟ್ಟಿಕಳ ಸ. ಹಿ ಪ್ರಾ. ಶಾಲೆಗೆ ಬೆಸ್ಟ್ ಫೌಂಡೇಶನ್ ವತಿಯಿಂದ ಪೀಠೋಪಕರಣ ವಿತರಣೆ

Suddi Udaya

ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ

Suddi Udaya

ಚಾರ್ಮಾಡಿ ಕುಂಜಿರ ಗುರುಸ್ವಾಮಿ ರವರಿಗೆ ಅಯ್ಯಪ್ಪ ಭಕ್ತಬೃಂದ ಸಮಿತಿಯಿಂದ ತಾಂಬೂಲ ಕಾಣಿಕೆ

Suddi Udaya

ಬಂದಾರು ಪರಿಸರದಲ್ಲಿ ಗಜ ಹೆಜ್ಜೆ: ಒಂದುವಾರದಿಂದ ಒಂಟಿಸಲಗದ ಸಂಚಾರ

Suddi Udaya

ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಜಯಂತ್ ಟಿ ಹಾಜರು: ಒಳದಾರಿಯಲ್ಲಿ ಓಡಿ ಹೋಗಿ ಕಚೇರಿ ಪ್ರವೇಶ

Suddi Udaya
error: Content is protected !!